ನವದೆಹಲಿ: ದೇಶಾದ್ಯಂತ ಮುಂದುವರೆದ ಲಾಕ್ ಡೌನ್ ಹಿನ್ನೆಲೆ ಡಿಜಿಟಲ್ ಪೇಮೆಂಟ್ ಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ತಮ್ಮ ತಮ್ಮ ಮನೆಗಳಲ್ಲಿ ಬಂಧಿಯಾಗಿರುವ ಜನರು ತಮ್ಮ ಜೀವನಾವಶ್ಯಕ ಸಂಗತಿಗಳ ಬಿಲ್ ಪಾವತಿಸಲು ಮೊಬೈಲ್ ಆಪ್ ಆಧಾರಿತ ಪ್ಲಾಟ್ ಫಾರ್ಮ್ ಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಉದಾಹರಣೆಗಾಗಿ ಕರೆಂಟ್ ಬಿಲ್, ನೀರಿನ ಬಿಲ್ ಅಥವಾ ಯಾವುದೇ ರೀತಿಯ ರಿಚಾರ್ಚ್ ಮಾಡಲು ಜನರು ಡಿಜಿಟಲ್ ಪೇಮೆಂಟ್ ಆಪ್ ಗಳ ಬಳಕೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿಶ್ವದ ಖ್ಯಾತ ಸರ್ಚ್ ಇಂಜಿನ್ ದೈತ್ಯ ಗೂಗಲ್ ಮಾಲೀಕತ್ವದ ಡಿಜಿಟಲ್ ಪೇಮೆಂಟ್ ಪ್ಲಾಟ್ ಫಾರಂ ಗೂಗಲ್ ಪೇ ತನ್ನ ಬಳಕೆದಾರರಿಗೆ ಜಬರ್ದಸ್ತ್ ಆಫರ್ ಗಳನ್ನು ಹೊತ್ತು ತಂದಿದೆ. ಈ ಆಫರ್ ಗಳ ಅಡಿ ಬಳಕೆದಾರರಿಗೆ ರೂ.101 ಖಚಿತ ಕ್ಯಾಶ್ ಬ್ಯಾಕ್ ಸಿಗುತ್ತಿದೆ.
ಗೂಗಲ್ ನ ಈ ಕ್ಯಾಶ್ ಬ್ಯಾಕ್ ಆಫರ್ ಲಾಭ ಪಡೆಯಲು ಗೂಗಲ್ ಪೇ ಬಳಕೆದಾರರು ಮೂರು ವಿವಿಧ ರೀತಿಯ ಕೆಟಗರಿ ಅಡಿ ತಮ್ಮ ಬಿಲ್ ಪಾವತಿಸಬೇಕು. ಜೊತೆಗೆ ಬಳಕೆದಾರರು ಪಾವತಿಸುವ ಬಿಲ್ ಕನಿಷ್ಠ ರೂ.199ಗಳಾಗಿರಬೇಕು. ಬಳಿಕ ಗೂಗಲ್ ಪೇ ಬಳಕೆದಾರರಿಗೆ ಈ ಕ್ಯಾಶ್ ಬ್ಯಾಕ್ ರಿವಾರ್ಡ್ ಸೆಕ್ಷನ್ ನಲ್ಲಿ ಕಾಣಿಸಲಿದೆ. ಒಂದು ವೇಳೆ ಈ ಸೆಕ್ಷನ್ ನಲ್ಲಿ ನಿಮ್ಮ ಕ್ಯಾಶ್ ಬ್ಯಾಕ್ ಹಣ ಕಾಣಿಸದೆ ಹೋದಲ್ಲಿ, ಬಳಕೆದಾರರು ಗೂಗಲ್ ಪೇ ಆಪ್ ನ ಲೇಟೆಸ್ಟ್ ಅವತರಿಣಿಕೆಯನ್ನು ಡೌನ್ಲೋಡ್ ಮಾಡಬೇಕು.