ನವದೆಹಲಿ: ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಈಗ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಶಾಹೀನ್ ಬಾಗ್ ಹೋರಾಟಗಾರರೊಂದಿಗೆ ಮಾತನಾಡಲು ಸಿದ್ದವಾಗಿದೆ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಈ ವಿಚಾರವಾಗಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಶಾಹೀನ್ ಬಾಗ್‌ನ ಪ್ರತಿಭಟನಾಕಾರರೊಂದಿಗೆ ಮಾತನಾಡಲು ಸರ್ಕಾರ ಸಿದ್ಧವಾಗಿದೆ “ಆದರೆ ಅದು ರಚನಾತ್ಮಕ ರೂಪದಲ್ಲಿರಬೇಕು” ಎಂದು ಹೇಳಿದರು.ಅವರೊಂದಿಗೆ ಸಂವಹನ ನಡೆಸಲು ಮತ್ತು ಪೌರತ್ವ ಕಾನೂನಿನ ವಿರುದ್ಧ ಇರುವ ಎಲ್ಲ ಅನುಮಾನಗಳನ್ನು ನಿವಾರಿಸಲು ನರೇಂದ್ರ ಮೋದಿ ಸರ್ಕಾರ ಸಿದ್ಧವಾಗಿದೆ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.



ಕಳೆದ ಒಂದು ತಿಂಗಳಿಗೂ ಅಧಿಕ ದಿನಗಳ ಕಾಲ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ಶಾಹೀನ್ ಬಾಗ್ ಮಹಿಳೆಯರು ಕೇಂದ್ರ ಸರ್ಕಾರದ ಪೌರತ್ವ ಕಾನೂನು ಧರ್ಮವನ್ನು ಪೌರತ್ವದ ಮಾನದಂಡವಾಗಿ ಮಾಡಿದ ಎಂದು ಹೋರಾಟ ನಡೆಸಿದ್ದಾರೆ. ಈಗ ದೇಶದೆಲ್ಲೆಡೆ ಶಾಹೀನ್ ಬಾಗ್ ನಿಂದ ಪ್ರೇರಿತರಾಗಿರುವ ಮಹಿಳೆಯರು ಇದೇ ಮಾದರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.


ಇದಕ್ಕೂ ಮೊದಲು ಟಿವಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಶಹೀನ್ ಬಾಗ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರೊಂದಿಗೆ ಕೇಂದ್ರ ಸರ್ಕಾರ ಸಂವಹನ ನಡೆಸಲು ಯಾಕೆ ಪ್ರಯತ್ನಿಸುತ್ತಿಲ್ಲ ಎಂದು ಪ್ರಸಾದ್ ಅವರನ್ನು ಕೇಳಲಾಯಿತು. ಇದಕ್ಕೆ ಪ್ರಸಾದ್ ಉತ್ತರಿಸುತ್ತಾ, 'ನೀವು ಪ್ರತಿಭಟಿಸುತ್ತಿದ್ದರೆ ಅದು ಒಳ್ಳೆಯದು.ಆದರೆ ನಿಮ್ಮ ಸಮುದಾಯದ ಇತರ ಜನರು ಟಿವಿಯಲ್ಲಿ ಸಿಎಎ ಅನ್ನು ಹಿಂದಕ್ಕೆ ಪಡೆಯುವವರೆಗೆ ಯಾವುದೇ ಮಾತುಕತೆ ಇರುವುದಿಲ್ಲ ಎಂದು ಹೇಳುತ್ತಾರೆ. ಸರ್ಕಾರವು ಸಿಎಎ ಬಗ್ಗೆ ಚರ್ಚಿಸಬೇಕೆಂದು ನೀವು ಬಯಸಿದರೆ ಶಾಹೀನ್ ಬಾಗ್ ಅವರಿಂದ ರಚನಾತ್ಮಕ ವಿನಂತಿಯಿರಬೇಕು ಎಂದು ಅವರು ತಿಳಿಸಿದರು.