ನವದೆಹಲಿ : ಸಿಬಿಎಸ್‌ಇ (CBSE) ಬೋರ್ಡ್  6 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ CBSE Assessment Framework  ಅನ್ನು ಬಿಡುಗಡೆ ಮಾಡಿದೆ.  ಬ್ರಿಟಿಷ್ ಕೌನ್ಸಿಲ್  (British Council) ಸಹಯೋಗದೊಂದಿಗೆ ಈ ಫ್ರೇಮ್ ವರ್ಕ್ ಅನ್ನು ಸಿದ್ಧಪಡಿಸಲಾಗಿದೆ. ಈ ಹೊಸ ಫ್ರೇಮ್ ವರ್ಕ್ ಅನ್ನು  ನಿನ್ನೆ  ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ (Ramesh Pokhriyal Nishank) ಲಾಂಚ್ ಮಾಡಿದ್ದಾರೆ. ಹೊಸ  Assessmentನಿಂದ ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸಾಕಷ್ಟು ಸಹಾಯವಾಗಲಿದೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕೈಗೊಂಡ ಕ್ರಮಗಳು:
ಹೊಸ ಅಸೆಸ್ಮೆಂಟ್ ಫ್ರೇಮ್ವರ್ಕ್ (CBSE Assessment Framework) 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರು ಪ್ರಮುಖ ವಿಷಯಗಳಲ್ಲಿ ಸಹಾಯ ಮಾಡುತ್ತದೆ. ವಿಜ್ಞಾನ (Science), ಗಣಿತ (Math) ಮತ್ತು ಇಂಗ್ಲಿಷ್ (English) ಕಲಿಕೆಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ.  ಹೊಸ ಅಸೆಸ್ಮೆಂಟ್ ಫ್ರೇಮ್ವರ್ಕ್ ಅನ್ನು ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ (National Education Policy) ಆರಂಭಿಸಲಾಗಿದೆ. ಇದೊಂದು Competency Based Assessment Framework ಆಗಿದೆ. ಇದರ ಅಡಿಯಲ್ಲಿ ವಿದ್ಯರ್ಥಿಗಳು ಗಿಳಿ ಪಾಠ ಮಾಡುವ ಅಗತ್ಯವಿರುವುದಿಲ್ಲ. ಬದಲಾಗಿ ಎಲ್ಲವನ್ನು ಪ್ರಾಕ್ಟಿಕಲ್ ಆಗಿ ಕಲಿಸಲಾಗುತ್ತದೆ. 


ಇದನ್ನೂ ಓದಿ : DBSE: ಇನ್ಮುಂದೆ ದೆಹಲಿಗೂ ಸಿಗಲಿದೆ ತನ್ನದೇ ಆದ ಶಿಕ್ಷಣ ಮಂಡಳಿ, ಸಿಎಂ ಕೆಜ್ರಿವಾಲ್ ಘೋಷಣೆ


ವಾಸ್ತವ ಜಗತ್ತನ್ನು ಪರಿಚಯಿಸಲಾಗುತ್ತದೆ :
ಹೊಸ ಅಸೆಸ್ಮೆಂಟ್ ಫ್ರೇಮ್ವರ್ಕ್ ಲಾಂಚ್ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ (Ramesh Pokhriyal Nishank),  ಮತ್ತು ಸಿಬಿಎಸ್ಇ ಮಾಜಿ ಅಧ್ಯಕ್ಷ ಮತ್ತು ಹಾಲಿ ಶಿಕ್ಷಣ ಮಂಡಳಿ ನಿರ್ದೇಶಕಿ ಅನಿತಾ ಕಾರ್ವಾಲ್ (Anita Karwal) ಉಪಸ್ಥಿತರಿದ್ದರು.  ಹೊಸ ಶಿಕ್ಷಣ ನೀತಿಯಡಿಯಲ್ಲಿ, ಸ್ಪರ್ಧಾತ್ಮಕ ಆಧಾರಿತ ವಿಧಾನದಲ್ಲಿ ,(Competency Based Approach) ಕಲಿಸಲಾಗುವುದು. ವಿದ್ಯಾರ್ಥಿಗಳಿಗೆ ಬರೀ ಪುಸ್ತಕ ಜ್ಞಾನದ ಬದಲು ನೈಜ ಜಗತ್ತಿಗೆ ಸಂಪರ್ಕ ಕಲ್ಪಿಸುವ ರೀಟಿಯಲ್ಲಿ ಶಿಕ್ಷಣವನ್ನು ನೀಡಲಾಗುವುದು. ಇದರಿಂದ ವಿದ್ಯಾರ್ಥಿಗಳ  ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ (Problem Solving) ಮತ್ತು  Analytical Ability Skills ಅನ್ನು ಕೂಡಾ ಹೆಚ್ಚುತ್ತದೆ. 


ಕಠಿಣ ವಿಷಯಗಳ ಬಗ್ಗೆ ಗಮನ:
ಸಿಬಿಎಸ್‌ಇ ಅಸೆಸ್‌ಮೆಂಟ್ ಫ್ರೇಮ್‌ವರ್ಕ್ ನಲ್ಲಿ  ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ವಿಷಯಗಳ ಶಿಕ್ಷಕರಿಗೆ ಮಾರ್ಗದರ್ಶನ ನೀಡಲು ಸಹಾಯವಾಗುತ್ತದೆ. ಮಕ್ಕಳಿಗೆ ಪ್ರಾಯೋಗಿಕ ಕಲಿಕೆಯಲ್ಲಿಯೂ (Practical Learning) ಸಹಾಯ ಸಿಗಲಿದೆ. ಈಗ ಮಕ್ಕಳಿಗೆ ದೈನಂದಿನ ಸಮಸ್ಯೆಗಳು ಮತ್ತು ಉದಾಹರಣೆಗಳೊಂದಿಗೆ ಪಾಠ ಮಾಡಲಾಗುತ್ತದೆ. ಈ ಹೊಸ ನಿಯಮದೊಂದಿಗೆ ಕೇವಲ ಪಾಸ್  ಆಗುವುದಕ್ಕೆ ಮಾತ್ರ ಓದುವುದಲ್ಲ, ಮಕ್ಕಳನ್ನು  ಸಮಸ್ಯೆ ಎದುರಿಸುವುದು ಹೇಗೆ ಎಂಬ ಬಗ್ಗೆಯೂ ಕಲಿಸಲಾಗುತ್ತದೆ. 


ಇದನ್ನೂ ಓದಿ : CBSE Revised Date Sheet : 10ನೇ 12 ನೇ ತರಗತಿ ಪರೀಕ್ಷೆಯ ಪರಿಷ್ಕೃತ ವೇಳಾ ಪಟ್ಟಿ ಪ್ರಕಟ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.