ನವದೆಹಲಿ: ದೇಶಾದ್ಯಂತ ರೈತರ ಸಾಲದ ಮನ್ನಾ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಸಮಯದಲ್ಲಿ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸುವ ರೈತರಿಗೆ ಏನು ಸಿಗುತ್ತೆ ಎಂಬ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಲೋಕಸಭಾ ಚುನಾವಣೆಗೂ ಮೊದಲೇ ರೈತರಿಗೆ ದೊಡ್ಡ ಉಡುಗೊರೆ ನೀಡಲಿದೆ. ಕಾಲಕಾಲಕ್ಕೆ ಸಾಲವನ್ನು ಮರುಪಾವತಿಸುವ ದೇಶದ ಎಲ್ಲ ಪ್ರಾಮಾಣಿಕ ರೈತರ ಕೃಷಿಯ ಸಾಲದ ಬಡ್ಡಿಯನ್ನು ಮನ್ನಾ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದು ಸರ್ಕಾರಕ್ಕೆ ವಾರ್ಷಿಕವಾಗಿ ರೂ .15,000 ಕೋಟಿ ಹೆಚ್ಚುವರಿ ಹೊರೆಯಾಗಲಿದೆ. 


COMMERCIAL BREAK
SCROLL TO CONTINUE READING

ಇದಲ್ಲದೆ, ಆಹಾರ ಬೆಳೆಗಳಿಗೆ ವಿಮೆಯ ಪಾಲಿಸಿಯಿಂದ ಪ್ರೀಮಿಯಂಗೆ ಸಂಪೂರ್ಣವಾಗಿ ವಿನಾಯಿತಿ ನೀಡಬೇಕೆಂದು ಸೂಚಿಸಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ತೋಟಗಾರಿಕಾ ಬೆಳೆಗಳ ಮೇಲೆ ಪ್ರೀಮಿಯಂ ಅನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.


ಪ್ರಸ್ತುತ ರೈತರ 3 ಲಕ್ಷ ರೂ. ಸಾಲಕ್ಕೆ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸುವ ರೈತರು 7 % ವಾರ್ಷಿಕ ಬಡ್ಡಿದರದಲ್ಲಿ  ಪಾವತಿಸುತ್ತಾರೆ. 3% ಸಬ್ಸಿಡಿಯನ್ನು ಪಡೆಯುತ್ತಾರೆ. ಈ ರೀತಿ ರೈತರು ಕೇವಲ 4 ಪ್ರತಿಶತದಷ್ಟು ಬಡ್ಡಿಯನ್ನು ಹೊಂದುತ್ತಾರೆ. ಅಂದರೆ, ಒಬ್ಬ ರೈತ ವಾರ್ಷಿಕವಾಗಿ 3 ಲಕ್ಷ ರೂ. ಸಾಲವನ್ನು ಪಾವತಿಸಿದರೆ, ಅವನು ಸುಮಾರು 12,000 ರೂಪಾಯಿಗಳನ್ನು ಉಳಿಸುತ್ತಾನೆ.


2018-19ರಲ್ಲಿ 11 ಲಕ್ಷ ಕೋಟಿ ಟಾರ್ಗೆಟ್:
ಪ್ರಸಕ್ತ ಹಣಕಾಸು ವರ್ಷದಲ್ಲಿ ರೈತರಿಗೆ 11 ಲಕ್ಷ ಕೋಟಿ ರೂ. ಸಾಲವನ್ನು ಒದಗಿಸಲು ಸರಕಾರ ಗುರಿಯನ್ನು ಹೊಂದಿದೆ. ಕಳೆದ ಹಣಕಾಸು ವರ್ಷದಲ್ಲಿ ರೂ. 11.69 ಲಕ್ಷ ಕೋಟಿ ರೂ. ಸಾಲವನ್ನು ರೈತರಿಗೆ ನೀಡಲಾಗಿತ್ತು.


ಇದಲ್ಲದೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಪರಿಹಾರ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಇದರ ಅಡಿಯಲ್ಲಿ, ಆಹಾರ ಬೆಳೆಗಳ ವಿಮೆ ಮೇಲೆ ಸಂಪೂರ್ಣವಾಗಿ ಪ್ರೀಮಿಯಂನ್ನು ಬಿಡುಗಡೆ ಮಾಡುವ ಮತ್ತು ತೋಟಗಾರಿಕಾ ಬೆಳೆಗಳ ವಿಮಾ ಮೇಲೆ ಪ್ರೀಮಿಯಂ ಪರಿಹಾರವನ್ನು ಒದಗಿಸಲು ಪ್ರಸ್ತಾಪವಿದೆ.