ನವದೆಹಲಿ : ಕರೋನಾ ಸಾಂಕ್ರಾಮಿಕ ಆರಂಭವಾಗುತ್ತಿದ್ದಂತೆ ದೇಶದಲ್ಲಿ ಲಾಕ್‌ಡೌನ್ (Lockdown)ಹೇರಲಾಗಿತ್ತು. ಈ ಸಮಯದಲ್ಲಿ, ಕರೋನಾವನ್ನು ನಿಯಂತ್ರಿಸುವ ಉದ್ದೇಶದಿಂದ ರೈಲ್ವೆ ಮತ್ತು ವಿಮಾನಯಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ವಿಮಾನಗಳು ಹಾರಾಟ ರದ್ದುಗೊಳಿಸಿದ್ದ (Flight cancel) ಕಾರಣ ಎಷ್ಟೋ ಜನ ಪ್ರಯಾಣ ಬೆಳೆಸುವುದು ಸಾಧ್ಯವಾಗಿರಲಿಲ್ಲ. ಆದರೆ ವಿಮಾನಯಾನ ಕಂಪನಿಗಳು ಈ ಪ್ರಯಾಣಿಕರ ಟಿಕೆಟ್ ದರವನ್ನು ಮರುಪಾವತಿ ಮಾಡಿರಲಿಲ್ಲ. ವಿಮಾನಯಾನ ಕಂಪನಿಗಳ ಈ ಕ್ರಮವನ್ನು  ನಾಗರಿಕ ವಿಮಾನಯಾನ ಸಚಿವಾಲಯ ಖಂಡಿಸಿದೆ. ಕಂಪನಿಗಳ  ಕ್ರಮದ ಬಗ್ಗೆಅಸಮಾಧಾನ ವ್ಯಕ್ತಪಡಿಸಿದೆ. 


COMMERCIAL BREAK
SCROLL TO CONTINUE READING

ಪ್ರಯಾಣಿಕರ ಕ್ರೆಡಿಟ್ ಶೆಲ್ ರಿಫಂಡ್ ಕುರಿತು ಸಚಿವಾಲಯದ ಕಾರ್ಯದರ್ಶಿ ಬುಧವಾರ ಸಭೆ ನಡೆಸಿದ್ದಾರೆ. ಕ್ರೆಡಿಟ್ ಶೆಲ್ ಎಂದರೆ  ರದ್ದಾದ ಪಿಎನ್‌ಆರ್‌ಗೆ ಸಂಬಂಧಿಸಿದಂತೆ ಬಳಸಲಾಗುವ ಕ್ರೆಡಿಟ್. ಇದನ್ನು ಪ್ರಯಾಣಿಕರು (Passengers) ಭವಿಷ್ಯದಲ್ಲಿ ಎಂದಾದರೂ ಟಿಕೆಟ್ ಬುಕ್ ಮಾಡುವ ವೇಳೆ ಬಳಸಬಹುದಾಗಿದೆ.  ಈ  ಸಭೆಯಲ್ಲಿ, ಕ್ರೆಡಿಟ್ ಶೆಲ್ ಪ್ರಕರಣದಲ್ಲಿ ವಿಮಾನಯಾನ ಕಂಪನಿಗಳು ನಡೆದುಕೊಂಡ ರೀತಿ ಬಗ್ಗೆ ಸರ್ಕಾರ ಖಂಡನೆ ವ್ಯಕ್ತಪಡಿಸಿದೆ. ಲಾಕ್ ಡೌನ್ ಗಿಂತ (Lockdown) ಮುಂಚೆಯೇ ಬುಕ್ ಮಾಡಲಾಗಿದ್ದ ಟಿಕೆಟ್ ಹಣವನ್ನು ಇನ್ನು ಮರು ಪಾವತಿ ಮಾಡದಿರುವ ಬಗ್ಗೆ ಸರ್ಕಾರ (Government) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.


ಇದನ್ನೂ ಓದಿ : #Cancelboardexams2021: Trending ಗೆ CBSE ಹೇಳಿದ್ದೇನು? 


ವಿಮಾನಯಾನ ಕಂಪನಿಗಳಾದ Go Air ಮತ್ತು Indigo ತಮ್ಮ ಕ್ರೆಡಿಟ್ ಶೆಲ್ ಗಳನ್ನು ಪ್ರಯಾಣಿಕರಿಗೆ ಮರುಪಾವತಿಸಿರುವ ಬಗ್ಗೆ ಸಚಿವಾಲಯಕ್ಕೆ ಅಫಿಡವಿಟ್  ಸಲ್ಲಿಸಿದೆ.  ವಿಶೇಷವೆಂದರೆ, ಮಾರ್ಚ್ 31 ರೊಳಗೆ ಕ್ರೆಡಿಟ್ ಶೆಲ್ ಗಳನ್ನು ಕ್ಲಿಯರ್ ಮಾಡುವಂತೆ , ಮತ್ತು ಪ್ರಯಾಣಿಕರಿಗೆ ಮರುಪಾವತಿ ಮಾಡುವಂತೆ ಸುಪ್ರೀಂ ಕೋರ್ಟ್ (Suprem court) ಆದೇಶಿಸಿತ್ತು. 


ಇದನ್ನೂ ಓದಿ Coronavirus: 24 ಗಂಟೆಯಲ್ಲಿ 1.26 ಲಕ್ಷ ಪ್ರಕರಣ ವರದಿ, 685 ಮಂದಿ ಸಾವು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.