Lockdown: ಭಾರತದಲ್ಲಿ ಮತ್ತೆ ಒಂದು ತಿಂಗಳು ಲಾಕ್‌ಡೌನ್ ಆದರೆ ಏನಾಗುತ್ತೆ? ಅಮೆರಿಕದ ಕಂಪನಿ ಹೇಳಿದ್ದೇನು?

ವಾಣಿಜ್ಯ ನಗರಿ ಮುಂಬೈಯಲ್ಲಿ ಪರಿಸ್ಥಿತಿ ತೀರಾ ವಿಕೋಪಕ್ಕೆ ಹೋಗಿರುವುದರಿಂದ ಬೇರೆ ವಿಧಿಯಿಲ್ಲದೆ ಮತ್ತೆ ಲಾಕ್‌ಡೌನ್ ಜಾರಿಗೆ ತರಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೋನಾ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಎಪ್ರಿಲ್ 6ರಿಂದ ಜಾರಿಗೆ ಬರುವಂತೆ ರಾತ್ರಿ ಕರ್ಫ್ಯೂ ಘೋಷಿಸಲಾಗಿದೆ.   

Written by - Yashaswini V | Last Updated : Apr 7, 2021, 09:30 AM IST
  • ನಿತ್ಯ ಹೊರಬರುತ್ತಿರುವ ಕರೋನಾ ಪ್ರಕರಣಗಳನ್ನು ಗಮನಿಸಿದರೆ ಭಾರತದಲ್ಲಿ ಮತ್ತೆ ದೇಶಾದ್ಯಂತ ಲಾಕ್‌ಡೌನ್ ಸಂಭವಿಸಬಹುದೇ ಎಂಬ ಅನುಮಾನ ಮೂಡಿದೆ
  • ಆದರೆ ಇದು ನಿಜವಾಗಿಯೂ ಅಗತ್ಯವಿದೆಯೇ ಎಂಬುದು ಹಲವರ ಪ್ರಶ್ನೆ
  • ಮತ್ತೆ ಲಾಕ್‌ಡೌನ್ ಸಂಭವಿಸಿದರೆ ಅದರ ಪರಿಣಾಮ ಹೇಗಿರಲಿದೆ ಎಂದು ವರದಿ ಬಹಿರಂಗ
Lockdown: ಭಾರತದಲ್ಲಿ ಮತ್ತೆ ಒಂದು ತಿಂಗಳು ಲಾಕ್‌ಡೌನ್ ಆದರೆ ಏನಾಗುತ್ತೆ? ಅಮೆರಿಕದ ಕಂಪನಿ ಹೇಳಿದ್ದೇನು? title=
Lockdown in India

ಮುಂಬೈ: ದೇಶದಲ್ಲಿ ಕರೋನಾವೈರಸ್ ಅಬ್ಬರ ಮತ್ತೆ ತಾರಕಕ್ಕೇರಿದೆ. ಅದರಲ್ಲೂ ವಾಣಿಜ್ಯ ನಗರಿ ಮುಂಬೈಯಲ್ಲಿ ಪರಿಸ್ಥಿತಿ ತೀರಾ ವಿಕೋಪಕ್ಕೆ ಹೋಗಿರುವುದರಿಂದ ಬೇರೆ ವಿಧಿಯಿಲ್ಲದೆ ಮತ್ತೆ ಲಾಕ್‌ಡೌನ್ ಜಾರಿಗೆ ತರಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೋನಾ (Coronavirus) ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಎಪ್ರಿಲ್ 6ರಿಂದ ಜಾರಿಗೆ ಬರುವಂತೆ ರಾತ್ರಿ ಕರ್ಫ್ಯೂ ಘೋಷಿಸಲಾಗಿದೆ. ಇನ್ನು ದೇಶದ ಹಲವು ಭಾಗಗಳಲ್ಲಿ ನಿತ್ಯ ಹೊರಬರುತ್ತಿರುವ ಕರೋನಾ ಪ್ರಕರಣಗಳನ್ನು ಗಮನಿಸಿದರೆ ಭಾರತದಲ್ಲಿ ಮತ್ತೆ ದೇಶಾದ್ಯಂತ ಲಾಕ್‌ಡೌನ್ ಸಂಭವಿಸಬಹುದೇ ಎಂಬ ಅನುಮಾನ ಮೂಡಿದೆ. ಆದರೆ ಇದು ನಿಜವಾಗಿಯೂ ಅಗತ್ಯವಿದೆಯೇ ಎಂಬುದು ಹಲವರ ಪ್ರಶ್ನೆಯಾದರೆ ಮತ್ತೆ ಲಾಕ್‌ಡೌನ್ (Lockdown) ಸಂಭವಿಸಿದರೆ ಅದರ ಪರಿಣಾಮ ಹೇಗಿರಲಿದೆ  ಎಂದು ವರದಿಯೊಂದು ಬಹಿರಂಗಗೊಂಡಿದೆ.

ಯುಎಸ್ ಬ್ರೋಕರೇಜ್ ಕಂಪನಿ ಬೋಫಾ ಸೆಕ್ಯುರಿಟೀಸ್ ಕಂಪೆನಿಯ ಪ್ರಕಾರ, ಕೋವಿಡ್ -19 (Covid 19) ಸೋಂಕು ಹರಡುವುದನ್ನು ತಡೆಗಟ್ಟಲು ಭಾರತದಲ್ಲಿ ಒಂದು ತಿಂಗಳ ಲಾಕ್‌ಡೌನ್ ಅನ್ನು ವಿಧಿಸಿದರೆ, ಅದು ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಇದರಿಂದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಎರಡು ಪ್ರತಿಶತದಷ್ಟು ಕಡಿಮೆಯಾಗಬಹುದು ಎಂದು ಅದು ಅಂದಾಜಿಸಿದೆ.

ವಾಸ್ತವವಾಗಿ ದೇಶಾದ್ಯಂತ ಸೋಂಕಿನ ಪ್ರಕರಣಗಳು ಆರು ಪಟ್ಟು ಹೆಚ್ಚಾಗಿ 1.03 ಲಕ್ಷಕ್ಕೆ ಏರಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ರಾಜ್ಯ ಸರ್ಕಾರಗಳು ಈಗ ಸ್ಥಳೀಯ ಮಟ್ಟದಲ್ಲಿ ಲಾಕ್‌ಡೌನ್ ವಿಧಿಸಿವೆ.  ರಾಷ್ಟ್ರಮಟ್ಟದಲ್ಲಿ ಲಾಕ್‌ಡೌನ್ ಘೋಷಿಸುವುದು ಸರ್ಕಾರದ ಬಳಿ ಉಳಿಯಲಿರುವ ಕಡೆಯ ಅಸ್ತ್ರ ಎಂದು ಬೋಫಾ ಸೆಕ್ಯುರಿಟೀಸ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ- Coronavirus: ಮುಂದಿನ 30 ದಿನಗಳು ತುಂಬಾ ಕ್ರಿಟಿಕಲ್, ಕೊರೊನಾ ಕುರಿತು ಆರೋಗ್ಯ ಸಚಿವಾಲಯದ ಗಂಭೀರ ಹೇಳಿಕೆ

ಒಂದೊಮ್ಮೆ ದೇಶಾದ್ಯಂತ ಲಾಕ್‌ಡೌನ್ ವಿಧಿಸಿದರೆ ಉಂಟಾಗುವ ಪರಿಣಾಮಗಳ ಬಗ್ಗೆಯೂ ಬೆಳಕು ಚೆಲ್ಲಿರುವ ಬೋಫಾ ಸೆಕ್ಯುರಿಟೀಸ್ ವರದಿಯು, ಕೋವಿಡ್ -19 ರ ಹೆಚ್ಚುತ್ತಿರುವ ಪ್ರಕರಣಗಳು ಆರ್ಥಿಕತೆಯು ಮಂದಗತಿಯಲ್ಲಿ ಸಾಗುವುದಕ್ಕೆ ಕಾರಣವಾಗಿವೆ. ಈಗಷ್ಟೇ ಪುನರುಜ್ಜೀವನಗೊಳ್ಳುತ್ತಿರುವ  ಆರ್ಥಿಕತೆಯ ಬೆಳವಣಿಗೆಯ ಮೇಲೆ ಇದು ತೀವ್ರ ಪರಿಣಾಮ ಬೀರುತ್ತದೆ. ರಾಷ್ಟ್ರಮಟ್ಟದಲ್ಲಿ ಲಾಕ್‌ಡೌನ್ (Lockdown) ಹೇರಿದರೆ, ವಾರ್ಷಿಕ ಜಿಡಿಪಿ ಒಂದರಿಂದ ಎರಡು ಪ್ರತಿಶತದಷ್ಟು ಕಡಿಮೆಯಾಗುತ್ತದೆ ಎಂದು ಅಂದಾಜಿಸಬಹುದಾಗಿದೆ. ಇದು ಹಣಕಾಸಿನ ಮುಗ್ಗಟ್ಟನ್ನು ಹೆಚ್ಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿವರಿಸಿದೆ.

ಕಳೆದ ಹಣಕಾಸು ವರ್ಷದಲ್ಲಿ ಕೋವಿಡ್ -19 ಅನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಲ್ಲಿ ಜಾರಿಗೆ ತರಲಾಗಿದ್ದ ಲಾಕ್‌ಡೌನ್ ಪರಿಣಾಮದಿಂದಾಗಿ ಜಿಡಿಪಿ (GDP) ಏಳು ಪ್ರತಿಶತಕ್ಕಿಂತಲೂ ಕಡಿಮೆಯಾಗಲು ಇದು ಮುಖ್ಯ ಕಾರಣವಾಗಿದೆ. 2021-22ರಲ್ಲಿ ಜಿಡಿಪಿ ಬೆಳವಣಿಗೆಯ ದರವು ಶೇಕಡಾ 10 ಕ್ಕಿಂತ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಹೆಚ್ಚುತ್ತಿರುವ ಕರೋನಾ ಪ್ರಕರಣಗಳಿಂದಾಗಿ ದೇಶದಲ್ಲಿ ಮತ್ತೆ ಲಾಕ್‌ಡೌನ್ ಮರುಕಳಿಸಿದರೆ ಇದು ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಇದನ್ನೂ ಓದಿ- ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 55,000 ಕ್ಕೂ ಹೆಚ್ಚು ಕೊರೊನಾ ಪ್ರಕರಣ ದಾಖಲು

ಕಳೆದ ವರ್ಷ ಜೂನ್ ಮಧ್ಯದಲ್ಲಿ 10,000 ಇದ್ದ ಕರೋನಾ ಪ್ರಕರಣಗಳು ಸೆಪ್ಟೆಂಬರ್ ಮಧ್ಯದವರೆಗೆ 90,000 ತಲುಪಿತು. ಅಂದರೆ ಕರೋನಾ ಒಂದು ಲಕ್ಷದ ಗಡಿ ಮುಟ್ಟಲು ಸುಮಾರು ಮೂರು ತಿಂಗಳುಗಳನ್ನು ತೆಗೆದುಕೊಂಡಿದೆ. ಆದರೆ ಈ ಬಾರಿ ಕೇವಲ ಆರು ವಾರಗಳಲ್ಲಿ ಪ್ರಕರಣಗಳು ಒಂದು ಲಕ್ಷ ದಾಟಿವೆ. ಕೋವಿಡ್ -19 ರ ತನಿಖೆ ಸಾಕಷ್ಟು ಕೆಳಮಟ್ಟದಲ್ಲಿದೆ ಎಂದು ವರದಿ ಹೇಳುತ್ತದೆ. ಇದರಿಂದಾಗಿ ಸೋಂಕಿನ ಹೆಚ್ಚಳಕ್ಕೆ ತನಿಖೆಯ ಹೆಚ್ಚಳ ಕಾರಣವಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News