ನವದೆಹಲಿ: ಕರೋನಾ (Corona) ಅವಧಿಯಲ್ಲಿ ಗಳಿಕೆಯ ವಿಧಾನ ಕಳೆದುಕೊಂಡಿರುವ ಸಾಲಗಾರರ ಮುಂದೆ ಇರುವ ದೊಡ್ಡ ಪ್ರಶ್ನೆಯೆಂದರೆ, ಅವರು ತಮ್ಮ ಮನೆ, ಕಾರು EMI ಹೇಗೆ ಪಾವತಿಸಬೇಕು ಎಂಬುದು. ಎರಡನೆಯ ದೊಡ್ಡ ಬಿಕ್ಕಟ್ಟಿನ ಪರಿಸ್ಥಿತಿ ಎಂದರೆ, ಲೋನ್ ಮೊರೆಟೋರಿಯಂ ಮೇಲಿನ ಚಕ್ರಬಡ್ಡಿಯ ಕುರಿತಾಗಿ ಇದೆ. ಆದರೆ ಸರ್ಕಾರ ಇದೀಗ ಅಂತವರ ನೆರವಿಗೆ ಧಾವಿಸಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಜನಸಾಮಾನ್ಯರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ, Loan Moratorium ಅವಧಿ ವಿಸ್ತರಣೆ


2 ಕೋಟಿ ರೂ.ಗಳ ವರೆಗಿನ ಬಡ್ಡಿಗೆ ಚಕ್ರಬಡ್ಡಿ ಇಲ್ಲ
ಒಬ್ಬ ವ್ಯಕ್ತಿ ಅಥವಾ ಕಂಪನಿಯು ಎರಡು ಕೋಟಿ ರೂಪಾಯಿಗಳ ಸಾಲವನ್ನು ತೆಗೆದುಕೊಂಡಿದ್ದರೆ, ಸರ್ಕಾರವು ಸಾಲದ ಬಡ್ಡಿಗೆ ಬಡ್ಡಿ ವಿಧಿಸುವುದಿಲ್ಲ, ಅಂದರೆ, ಚಕ್ರಬಡ್ಡಿಯಿಂದ ಮುಕ್ತಿ ಸಿಗಲಿದೆ ಎಂದರ್ಥ. ಈ ಕುರಿತು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿರುವ ಸರ್ಕಾರ,  6 ತಿಂಗಳ ಈ ಮೊರೆಟೋರಿಯಂನಲ್ಲಿ MSMEಯಿಂದ ಹಿಡಿದು ವೈಯಕ್ತಿಕ ಸಾಲ ಪಡೆದವರೆಲ್ಲರೂ ಕೂಡ ಶಾಮೀಲಾಗಿದ್ದಾರೆ. ಅಂದರೆ ಇಂತಹ ಸಾಲಗಳ ಮೇಲೆ ಚಕ್ರ ಬಡ್ಡಿ ವಿಧಿಸಲಾಗುವುದಿಲ್ಲ.


ಕರೋನಾ ವೈರಸ್ ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು ಬಡ್ಡಿ ರಿಯಾಯಿತಿಯ ಹೊಣೆಯನ್ನು ಸರ್ಕಾರ ಭರಿಸಲಿದೆ ಎಂದು ಕೇಂದ್ರ ಹೇಳಿದೆ. ಸೂಕ್ತ ಅನುದಾನಕ್ಕಾಗಿ ಸಂಸತ್ತಿನಿಂದ ಅನುಮತಿ ಪಡೆಯಲಾಗುವುದು ಎಂದು ಸರ್ಕಾರ ಹೇಳಿದೆ.


ಇದನ್ನು ಓದಿ- ಬ್ಯಾಂಕ್ ಗೆ ಭೇಟಿ ನೀಡಿ ನೀವು ನಿಮ್ಮ EMI ಕಡಿತಗೊಳಿಸಬಹುದು, Cibil Score ಮೇಲೂ ಪರಿಣಾಮ ಇಲ್ಲ


ಪ್ಯಾನೆಲ್ ಶಿಫಾರಸ್ಸನ್ನು ಆಧರಿಸಿ ಈ ನಿರ್ಧಾರ ಕೈಗೊಂಡ ಸರ್ಕಾರ
ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರವು ಬಡ್ಡಿಯ ಮೇಲಿನ ಬಡ್ಡಿಯನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು, ಏಕೆಂದರೆ ಇದು ಬ್ಯಾಂಕುಗಳ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿತ್ತು. ಈ ವೇಳೆ ಸಾಲಗಾರರಿಗೆ ಸಹಾಯ ಮಾಡಲು ಮುಂದಾಗಿದ್ದ ಸುಪ್ರೀಂ ಕೋರ್ಟ್ ಮಾಜಿ ಸಿಎಜಿ ರಾಜೀವ್ ಮಹರ್ಷಿ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ನೀಡಿದ ಸಲಹೆಗಳನ್ನು ಸ್ವೀಕರಿಸಿ, ಕೇಂದ್ರವು ತನ್ನ ಹಳೆಯ ವಾದದಲ್ಲಿ ಬದಲಾವಣೆ ಮಾಡಿದ್ದು, ಚಕ್ರಬಡ್ಡಿಯನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದೆ. ಈ ಕುರಿತು ಮುಂದಿನ ವಿಚಾರಣೆ ಅಕ್ಟೋಬರ್ 5 ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.


ಈ 6 ತಿಂಗಳ ಮೊರೆಟೋರಿಯಂ ಸೌಲಭ್ಯವು 2 ಕೋಟಿ ರೂ.ವರೆಗೆ ಸಾಲ ಹೊಂದಿರುವ ಸಾಲಗಾರರಿಗೆ ಮಾತ್ರ ಲಭ್ಯವಿರುತ್ತದೆ, ಹೆಚ್ಚಿನ ಸಾಲ ಹೊಂದಿರುವವರು ಈ ಯೋಜನೆಯಿಂದ ಹೊರಗುಳಿಯಲಿದ್ದಾರೆ.


ಇದನ್ನು ಓದಿ- 2 ವರ್ಷಗಳವರೆಗೆ ಎಲ್ಲಾ ರೀತಿಯ ಲೋನ್ ಮರುಪಾವತಿಸಲು ಸಿಗಲಿದೆ ನೆಮ್ಮದಿ, SBI ತಂದಿದೆ ಈ ಸ್ಕೀಮ್


ಈ ಸಾಲಗಾರರಿಗೆ ಸಿಗಲಿದೆ ನೆಮ್ಮದಿ
2 ಕೋಟಿ ರೂ.ವರೆಗಿನ MSME ಸಾಲ.
2 ಕೋಟಿ ರೂ.ವರೆಗಿನ ಶಿಕ್ಷಣ ಸಾಲ.
2 ಕೋಟಿ ರೂ.ವರೆಗಿನ ಗೃಹ ಸಾಲ.
2 ಕೋಟಿ ರೂ.ವರೆಗಿನ ಕನ್ಸುಮರ್ ಡ್ಯೂರೆಬಲ್ ಸಾಲ.
2 ಕೋಟಿ ರೂ.ವರೆಗಿನ ಕ್ರೆಡಿಟ್ ಕಾರ್ಡ್ ಬಾಕಿ.
2 ಕೋಟಿ ರೂ.ವರೆಗಿನ ಪರ್ಸನಲ್ ಹಾಗೂ ಪ್ರೊಫೆಷನಲ್ ಸಾಲ.
2 ಕೋಟಿ ರೂ.ವರೆಗಿನ ಕಂಜಮ್ಶನ್ ಸಾಲ.


ಪ್ರಕರಣದಲ್ಲಿ ಈ ಮೊದಲು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಯ ವೇಳೆ ಒಂದು ನಿಶ್ಚಿತ ಯೋಜನೆಯೊಂದಿಗೆ ಸರ್ಕಾರ ನ್ಯಾಯಾಲ್ಯಕಕ್ಕೆ ಬರಬೇಕು ಎಂದು ಸೂಚಿಸಿತ್ತು. ಈ ಪ್ರಕರಣವನ್ನು ಪದೇ ಪದೇ ಮುಂದೂಡಿದಡಕ್ಕೆ ನ್ಯಾಯಾಲಯ ಅಸಮಾಧಾನ ಹೊರಹಾಕಿದೆ. ಇದಲ್ಲದೆ 31 ಆಗಸ್ಟ್ ವರೆಗೆ ತೀರಿಸಲಾಗದ ಸಾಲದ ಮೇಲೆ NPA ಘೋಷಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.