ಗ್ರಾಫಿಕ್ಸ್: ಹೈದ್ರಾಬಾದ್ ಎನ್ಕೌಂಟರ್ ನಡೆದಿದ್ದಾದರು ಹೇಗೆ ?
ಹೈದರಾಬಾದ್‌ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶಾದ್‌ನಗರದ ಚರ್ನಪಲ್ಲಿ ಬಳಿ ಪೊಲೀಸರಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡ ಆರೋಪಿಗಳು ನಂತರ ಪರಾರಿಯಾಗಲು ಯತ್ನಿಸಿದ್ದರು ಎನ್ನಲಾಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಪಶು ವೈದ್ಯೆಯ ಮೇಲೆ ನಡೆದ ಕ್ರೂರ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಒಂದು ವಾರದ ಬಳಿಕ, ಇಂದು ಬೆಳಗ್ಗೆ ಶಾದ್‌ನಗರ ಬಳಿ ನಡೆದ 'ಎನ್‌ಕೌಂಟರ್'ನಲ್ಲಿ ಪೊಲೀಸರು ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ಕೌಂಟರ್ ನಡೆಸುವ ಮೂಲಕ ಹತ್ಯೆಗೈದಿದ್ದಾರೆ. ಹೈದರಾಬಾದ್‌ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶಾದ್‌ನಗರದ ಚರ್ನಪಲ್ಲಿ ಬಳಿ ಪೊಲೀಸರಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡ ಆರೋಪಿಗಳು ನಂತರ ಪರಾರಿಯಾಗಲು ಯತ್ನಿಸಿದ್ದರು ಎನ್ನಲಾಗಿದೆ.
ನವೆಂಬರ್ 27ರಂದು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆಗೈದು ಆಕೆಯ ದೇಹವನ್ನು ದಹಿಸಿದ ಜಾಗದಲ್ಲೇ ಪೊಲೀಸರು ಈ ನಾಲ್ವರು ಆರೋಪಿಗಳನ್ನು ಮಟ್ಟಹಾಕಿದ್ದಾರೆ. ತನಿಖೆಯ ಭಾಗವಾಗಿ ನಡೆದ ಘಟನಾವಳಿಗಳನ್ನು ಪುನರ್ ಸೃಷ್ಟಿಸುವ ಉದ್ದೇಶದಿಂದ ಆರೋಪಿಗಳನ್ನು ಅಲ್ಲಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಈ ಎಲ್ಲ ಆರೋಪಿಗಳು ತೆಲಂಗಾಣದ ನಾರಾಯಣಪೆಟ್ ಮೂಲದವರಾಗಿದ್ದಾರೆ ಎನ್ನಲಾಗಿದೆ.
ಎನ್‌ಕೌಂಟರ್‌ನ ಪೂರ್ಣ ಕಥೆಯನ್ನು ಗ್ರಾಫಿಕ್ಸ್ ಮೂಲಕ ತಿಳಿಯಿರಿ ...
ಮೊದಲು ಪೊಲೀಸರು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆರೋಪಿಗಳು ಬಸ್ ನಲ್ಲಿದ್ದರೆ ಪೊಲೀಸರು ಜೀಪ್ ನಲ್ಲಿದ್ದರು.
2. ಘಟನಾ ಸ್ಥಳದಲ್ಲಿ ಕ್ರೈಂ ದೃಶ್ಯವನ್ನು ಮರುಸೃಷ್ಟಿಸಲು ಎಲ್ಲರೂ ಕೆಳಗಿಳಿದಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.