ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಶ್ರೀನಗರದಲ್ಲಿ (Srinagar) ಮತ್ತೆ ಭಯೋತ್ಪಾದಕರ ದಾಳಿ ನಡೆದಿದೆ. ದಾಳಿಯಲ್ಲಿ ಭದ್ರತಾ ಪಡೆಗಳ ಸಿಬ್ಬಂದಿ ಗಾಯಗೊಂಡಿದ್ದಾರೆ. ಶ್ರೀನಗರದ ಹರಿ ಸಿಂಗ್ ಹೈ ಸ್ಟ್ರೀಟ್ ನಲ್ಲಿ ನಡೆದಿರುವ ಈ ಭಯೋತ್ಪಾದ ದಾಳಿಯಲ್ಲಿ (Terrorists Attack) 11 ಜನ ಗಾಯಗೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಅಮಿರಕಡಾಲ್ ಪ್ರದೇಶದಲ್ಲಿ ಭಯೋತ್ಪಾದಕರ ದಾಳಿ : 
ಮಾಹಿತಿಯ ಪ್ರಕಾರ,  ಭದ್ರತಾ ಪಡೆ ಸಿಬ್ಬಂದಿ ಶ್ರೀನಗರದ (Srinnagar) ಅಮಿರಕಡಾಲ್ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಭಯೋತ್ಪಾದಕರು ಹರಿ ಸಿಂಗ್ ಹೈ ಸ್ಟ್ರೀಟ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ಗ್ರೆನೇಡ್ (grenade attack) ಎಸೆದಿದ್ದಾರೆ . ಆದರೆ,  ಗುರಿ ತಪ್ಪಿದ ಕಾರಣ ಗ್ರೆನೇಡ್ ರಸ್ತೆಯಲ್ಲಿಯೇ  ಸ್ಫೋಟಗೊಂಡಿದೆ. ಈ ಘಟನೆಯಲ್ಲಿ 9 ನಾಗರಿಕರು ಮತ್ತು 2 ಯೋಧರು ಗಾಯಗೊಂಡಿದ್ದಾರೆ.


ಇದನ್ನೂ ಓದಿ :  Ujjwala Yojana 2.0: ಪ್ರಧಾನಿ ಮೋದಿಯಿಂದ ಉಜ್ವಲಾ 2.0 ಯೋಜನೆ ಬಿಡುಗಡೆ, ಕೇವಲ ತುಂಬಿದ ಸಿಲಿಂಡರ್ ಅಷ್ಟೇ ಅಲ್ಲ ಒಲೆಯು ಉಚಿತ


ಭಯೋತ್ಪಾದಕರ ವಿರುದ್ಧ ಶೋಧ ಕಾರ್ಯಾಚರಣೆ :
ಘಟನೆಯಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ, ಈ  ಪ್ರದೇಶಕ್ಕೆ ಪ್ರವೇಶವನ್ನು  ನಿರ್ಬಂಧಿಸಲಾಗಿದೆ. ಭಯೋತ್ಪಾದಕರಿಗಾಗಿ (Terrorist) ಶೋಧ ಕಾರ್ಯ ಆರಂಭಿಸಲಾಗಿದೆ. ಆದರೆ ಇಲ್ಲಿಯವರೆಗೆ ಭಯೋತ್ಪಾದಕರ ಕುರುಹು ಪತ್ತೆಯಾಗಿಲ್ಲ ಎನ್ನಲಾಗಿದೆ.  


ಸೇನೆ, ಸಿಆರ್‌ಪಿಎಫ್ (CRPF) ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಯೋತ್ಪಾದಕರ ವಿರುದ್ಧ ನಿರಂತರ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಪಿಒಕೆಯಿಂದ (POK) ಕಾಶ್ಮೀರಕ್ಕೆ ಬರುವ ಶಸ್ತ್ರಾಸ್ತ್ರಗಳು ಮತ್ತು ಹಣವನ್ನು ಭಾರತೀಯ ಸೇನೆಯು ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ.  ಈ ಕಾರಣದಿಂದಾಗಿ ಇದೀಗ ಸೈನಿಕರ ಮೇಲೆ ದಾಳಿ ನಡೆಸಲಾಗುತ್ತಿದೆ ಎನ್ನಲಾಗಿದೆ. 


ಇದನ್ನೂ ಓದಿ :  Ration Card ಇಲ್ಲದಿದ್ದರೂ ಸಿಗಲಿದೆ ಪಡಿತರ , ಆಗಸ್ಟ್ 31 ರೊಳಗೆ ಈ ಕೆಲಸ ಮಾಡಿ ಮುಗಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ