Ujjwala Yojana 2.0: ಪ್ರಧಾನಿ ಮೋದಿಯಿಂದ ಉಜ್ವಲಾ 2.0 ಯೋಜನೆ ಬಿಡುಗಡೆ, ಕೇವಲ ತುಂಬಿದ ಸಿಲಿಂಡರ್ ಅಷ್ಟೇ ಅಲ್ಲ ಒಲೆಯು ಉಚಿತ

Ujjwala Yojana 2.0: ಉಜ್ವಲಾ 2.0 ಯೋಜನೆಯ ಅಡಿ ಇನ್ಮುಂದೆ ಗ್ರಾಹಕರಿಗೆ ಮೊದಲ ತುಂಬಿದ ಸಿಲಿಂಡರ್ ಜೊತೆಗೆ ಗ್ಯಾಸ್ ಸ್ಟೋವ್ ಕೂಡ ಉಚಿತವಾಗಿ ಸಿಗಲಿದೆ. PMUY ಯೋಜನೆಯ ನೋಂದಣಿ ಪ್ರಕ್ರಿಯೆಗೆ ತುಂಬಾ ಕಡಿಮೆ ದಾಖಲೆಗಳು ಬೇಕಾಗುತ್ತವೆ.

Written by - Nitin Tabib | Last Updated : Aug 10, 2021, 04:44 PM IST
  • ಪ್ರಧಾನಿ ಮೋದಿಯಿಂದ Ujjwala 2.0 ಯೋಜನೆ ಬಿಡುಗಡೆ.
  • ಮೊದಲ ತುಂಬಿದ ಸಿಲಿಂಡರ್ ಗ್ಯಾಸ್ ಸ್ಟವ್ ನೊಂದಿಗೆ ಸಿಗಲಿದೆ.
  • ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಕೂಡ ಉಪಸ್ಥಿತರಿದ್ದರು.
Ujjwala Yojana 2.0: ಪ್ರಧಾನಿ ಮೋದಿಯಿಂದ ಉಜ್ವಲಾ 2.0 ಯೋಜನೆ ಬಿಡುಗಡೆ, ಕೇವಲ ತುಂಬಿದ ಸಿಲಿಂಡರ್ ಅಷ್ಟೇ ಅಲ್ಲ ಒಲೆಯು ಉಚಿತ title=
ಪ್ರಧಾನಿ ಮೋದಿಯಿಂದ Ujjwala 2.0 ಯೋಜನೆ ಬಿಡುಗಡೆ. (photo zee news)

ನವದೆಹಲಿ : PM Modi Launch Ujjwala Yojana : ಪ್ರಧಾನಿ ನರೇಂದ್ರ ಮೋದಿ (PM Narendra Modi)ಅವರು ಉತ್ತರ ಪ್ರದೇಶದ (Uttara Pradesh) ಮಹೋಬಾನಿಂದ ಉಜ್ವಲಾ 2.0 ಯೋಜನೆಯನ್ನು ಆರಂಭಿಸಿದ್ದಾರೆ. ಬಡತನ ರೇಖೆಗಿಂತ ಕೆಳಗಿನ ಲಾಭಾರ್ಥಿಗಳಿಗೆ ಗ್ಯಾಸ್ ಸಂಪರ್ಕ (Free LPG Connection) ಕಲ್ಪಿಸುವ ಮೂಲಕ ಯೋಜನೆಯ ಶುಭಾರಂಭ ಮಾಡಿದ್ದರೆ. ಯೋಜನೆಯ ಬಿಡುಗಡೆಯ ಬಳಿಕ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಲಾಭಾರ್ಥಿಗಳ ಜೊತೆಗೆ ಸಂವಾದ ಕೂಡ ನಡೆಸಿದ್ದಾರೆ. 

ಕಾರ್ಯಕ್ರಮದಲ್ಲಿ CM ಯೋಗಿ ಕೂಡ ಉಪಸ್ಥಿತರಿದ್ದರು :
ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ಕೂಡ ಉಪಸ್ಥಿತರಿದ್ದರು. ಯೋಗಿ ಆದಿತ್ಯನಾಥ್ ಅವರು ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ಕೋಟ್ಯಂತರ ಬಡ ಕುಟುಂಬಗಳಿಗೆ ಶುದ್ಧ ಇಂಧನ ಮತ್ತು ಉತ್ತಮ ಜೀವನವನ್ನು ಖಾತ್ರಿಪಡಿಸುತ್ತಿದೆ ಎಂದು ಹೇಳಿದ್ದಾರೆ. ಉಜ್ವಲ ಯೋಜನೆಯಿಂದ ಬಡ ಕುಟುಂಬಗಳು ಹೊಗೆ ಮತ್ತು ಕಟ್ಟಿಗೆಯ ಜಂಜಾಟವನ್ನು ತಪ್ಪಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಉಜ್ವಲ ಯೋಜನೆ ಮತ್ತು ವಿಶ್ವ ಜೈವಿಕ ಇಂಧನ ದಿನದ ಕುರಿತ ಕಿರುಚಿತ್ರವನ್ನು ಸಹ ಪ್ರದರ್ಶಿಸಲಾಗಿದೆ.

ಇದನ್ನೂ ಓದಿ : ಬ್ಯಾಂಕ್ ಸಿಬ್ಬಂದಿಗೆ RBI ಗಿಫ್ಟ್ : ಪ್ರತಿ ವರ್ಷ ಸಿಗಲಿದೆ ಹತ್ತು ದಿನಗಳ ಸರ್ಪ್ರೈಜ್ ರಜೆ

2016ರಲ್ಲಿ ಈ ಯೋಜನೆ ಆರಂಭಗೊಂಡಿತ್ತು:
ಉಜ್ವಲ ಯೋಜನೆಯನ್ನು 2016 ರಲ್ಲಿ ಆರಂಭಿಸಲಾಗಿದೆ. ಯೋಜನೆಯ ಆರಂಭದ ವೇಳೆ  ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳ ಐದು ಕೋಟಿ ಮಹಿಳಾ ಸದಸ್ಯರಿಗೆ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ನಿಗದಿಪಡಿಸಲಾಗಿತ್ತು. ನಂತರ ಈ ಯೋಜನೆಯನ್ನು ಏಪ್ರಿಲ್ 2018 ರಲ್ಲಿ ಇನ್ನೂ ಏಳು ವರ್ಗಗಳ ಮಹಿಳಾ ಫಲಾನುಭವಿಗಳಿಗೆ ವಿಸ್ತರಿಸಲಾಯಿತು. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳು, PMAY, AAY, ಹೆಚ್ಚಿನ ಹಿಂದುಳಿದ ವರ್ಗಗಳು, ಚಹಾ ತೋಟಗಳು, ಅರಣ್ಯ ನಿವಾಸಿಗಳು, ದ್ವೀಪಗಳಲ್ಲಿ ವಾಸಿಸುವವರಿಗೆ ಈ ಯೋಜನೆಯನ್ನು ವಿಸ್ತರಿಸಿ, ಗುರಿಯನ್ನು 8 ಕೋಟಿ LPG ಸಂಪರ್ಕಗಳಿಗೆ ಹೆಚ್ಚಿಸಲಾಗಿದೆ. ಈ ಗುರಿಯನ್ನು ಆಗಸ್ಟ್ 2019 ರಲ್ಲಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸಾಧಿಸಲಾಗಿದೆ.

ಇದೀಗ ಈ ಜನರಿಗೂ ಕೂಡ ಲಾಭ ಸಿಗಲಿದೆ :
21-22ರ ಆರ್ಥಿಕ ವರ್ಷದ ಕೇಂದ್ರ ಬಜೆಟ್ ನಲ್ಲಿ, PMUY ಅಡಿಯಲ್ಲಿ ಒಂದು ಕೋಟಿ ಹೆಚ್ಚುವರಿ LPG ಸಂಪರ್ಕಗಳನ್ನು ಒದಗಿಸುವುದಾಗಿ ಘೋಷಿಸಲಾಗಿದೆ. ಈ ಒಂದು ಕೋಟಿ ಹೆಚ್ಚುವರಿ PMUY ಸಂಪರ್ಕಗಳ ಉದ್ದೇಶ, ಮೊದಲಾ ಆವೃತ್ತಿಯಲ್ಲಿ ಅವಕಾಶವಂಚಿತರಾಗಿರುವ ಕಡಿಮೆ ಆದಾಯವಿರುವಕುಟುಂಬಗಳಿಗೆ ಡಿಪಾಸಿಟ್ ಫ್ರೀ ಒದಗಿಸುವುದಾಗಿದೆ. ಉಜ್ವಲ 2.0 ಫಲಾನುಭವಿಗಳಿಗೆ ಮೊದಲ ರೀಫಿಲ್ ಮತ್ತು ಹಾಟ್ಪ್ಲೇಟ್ ಅನ್ನು ಉಚಿತವಾಗಿ ಡಿಪಾಸಿಟ್ ಫ್ರೀ LPG ಸಂಪರ್ಕದೊಂದಿಗೆ ನೀಡಲಾಗುತ್ತಿದೆ. ಉಜ್ವಲಾ 2.0 ಯೋಜನೆಯ ಅಡಿ ಈ ಮೊದಲಿನಂತೆ ಜನರು ಪಡಿತರ ಚಿಟಿ ಹಾಗೂ ಅಡ್ರೆಸ್ಸ್ ಪ್ರೂಫ್ ನೀಡುವ ಅವಶ್ಯಕತೆ ಇಲ್ಲ.

ಇದನ್ನೂ ಓದಿ : PM Kisan: ಇನ್ನೂ ನಿಮ್ಮ ಖಾತೆಗೆ 2000 ರೂ. ಬಂದಿಲ್ಲವೇ? ಈ ಸಂಖ್ಯೆಗೆ ದೂರು ನೀಡಿ, ತಕ್ಷಣ ಲಾಭ ಪಡೆಯಿರಿ

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು (Apply Online PMUJ) :
ಉಜ್ವಲಾ ಯೋಜನೆಯ ಲಾಭ ಪಡೆದುಕೊಳ್ಳಲು ನೀವೂ ಕೂಡ ಅಧಿಕೃತ ಪೋರ್ಟಲ್ ಆಗಿರುವ pmuy.gov.in ಗೆ ಭೇಟಿ ನೀಡಬಹುದು. ಉಜ್ವಲ ಯೋಜನೆ ಆನ್‌ಲೈನ್ ನೋಂದಣಿ 2021 ಗಾಗಿ ಅರ್ಜಿದಾರರು ವಿತರಕರಿಗೆ ಅರ್ಜಿ ಸಲ್ಲಿಸುವ ಮೂಲಕ ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಆಯ್ಕೆಯ ಯಾವುದೇ ವಿತರಕರಿಗೆ ಅರ್ಜಿ ಸಲ್ಲಿಸಬಹುದು. ಅಂದರೆ, ಈ ಬಾರಿ ನಿಮಗೆ ಹಲವು ಆಯ್ಕೆಗಳನ್ನು ನೀಡಲಾಗಿದೆ. ಇಂಡೆನ್, ಭಾರತ್ ಗ್ಯಾಸ್ ಅಥವಾ HP ಗ್ಯಾಸ್ ನಂತಹ ನಿಮ್ಮ ಆಯ್ಕೆಯ ವಿತರಕರನ್ನು ನೀವು ಆಯ್ಕೆ ಮಾಡಬಹುದು.

ಉಜ್ವಲಾ 2.0 ಯೋಜನೆಯ ಅರ್ಜಿಗಾಗಿ ಆವಶ್ಯಕ ದಾಖಲೆಗಳು ಇಲ್ಲಿವೆ :
> ಉಜ್ವಲಾ 2.0 ಸಂಪರ್ಕ ಪಡೆಯಲು eKYC ಕಡ್ಡಾಯವಾಗಿದೆ.
> ಅರ್ಜಿದಾರರ ಆಧಾರ್ ಕಾರ್ಡ್, ಅರ್ಜಿದಾರರ ಗುರುತಿನ ಚೀಟಿಯ ರೂಪದಲ್ಲಿ ಕಾರ್ಯನಿರ್ವಹಿಸಲಿದೆ.
> ಯಾವುದೇ ರಾಜ್ಯ ಸರ್ಕಾರ ಜಾರಿಗೊಳಿಸುವ BPL ಪಡಿತರ ಚೀಟಿ ಹೊಂದಿರಬೇಕು. 
> ಲಾಭಾರ್ಥಿ ಅಥವಾ ಅವರ ಕುಟುಂಬ ಸದಸ್ಯರಲ್ಲಿನ ಅತ್ಯಂತ ಹಿರಿಯ ವ್ಯಕ್ತಿಯ ಆದಾರ್.
> ಬ್ಯಾಂಕ್ ಖಾತೆ  ಸಂಖ್ಯೆ ಹಾಗೂ IFSC ಕೋಡ್ ಅವಶ್ಯಕತೆ ಬೀಳಲಿದೆ.

ಉಜ್ವಲಾ 2.0ಗೆ ಅರ್ಜಿ ಸಲ್ಲಿಸಲು ಅರ್ಹತೆ :

ಈ ಯೋಜನೆಯ ಲಾಭವನ್ನು ಕೇವಲ ಮಹಿಳೆಯರು ಪಡೆಯಬಹುದು.
> ಯಾವುದೇ ಶ್ರೇಣಿಯ ಬಡತನ ಕುಟುಂಬದ ಪಟ್ಟಿಯಲ್ಲಿ ಹೆಸರಿರಬೇಕು.
> ಅರ್ಜಿ ಸಲ್ಲಿಸುವ ಮಹಿಳೆಯರ ವಯಸ್ಸು ಕನಿಷ್ಠ 18 ಪೂರ್ಣಗೊಂಡಿರಬೇಕು.
> ಒಂದೇ ಮನೆಯಲ್ಲಿ ಈ ಯೋಜನೆಯ ಅಡಿ ಇತರ ಯಾವುದೇ LPG ಕನೆಕ್ಷನ್ ಇರಬಾರದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News