ಜಿಎಸ್ಟಿ, ನೋಟು ಅಮಾನ್ಯಿಕರಣ ಪ್ರಧಾನಿ ಕೈಗೊಂಡ ಕ್ರಾಂತಿಕಾರಿ ನಿರ್ಧಾರಗಳು- ಉಪರಾಷ್ಟ್ರಪತಿ
ಅಗರ್ತಲಾ: ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಲು ಜಿಎಸ್ಟಿ, ನೋಟು ಅಮಾನ್ಯಿಕರಣದಂತಹ ಯೊಜನೆಗಳು ಕ್ರಾಂತಿಕಾರಿ ನಿರ್ಧಾರ ಎಂದು ಉಪರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು ಅಭಿಪ್ರಾಯಪಟ್ಟರು.
ತ್ರಿಪುರಾ ವಿವಿ 11 ನೆ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು " ಜಿಎಸ್ಟಿ ಮತ್ತು ನೋಟು ಅಮಾನ್ಯಿಕರಣದಂತಹ ಯೋಜನೆಗಳನ್ನು ಪರಿಚಯಿಸುವುದರ ಮೂಲಕ ಪ್ರಧಾನಿ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದ್ದಾರೆ. ಜಿಎಸ್ಟಿ ಮೂಲಕ ಕಳೆದ ಏಪ್ರಿಲ್ ನಲ್ಲಿ 1.4 ಲಕ್ಷ ಕೋಟಿ ಆದಾಯ ಬಂದಿದೆ "ಎಂದು ತಿಳಿಸಿದರು.ಇದೇ ಸಂರ್ಭದಲ್ಲಿ ಈಶಾನ್ಯ ರಾಜ್ಯಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ದಿ ನೆರೆದೇಶಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ತ್ರಿಪುರ ವಿಶ್ವವಿದ್ಯಾನಿಲಯದ 11ನೇ ಘಟಿಕೋತ್ಸವವು ಐದು ವರ್ಷಗಳ ನಂತರ ನಡೆಯಿತು. ಸುಮಾರು 142 ವಿದ್ಯಾರ್ಥಿಗಳು ಪಿಎಚ್ಡಿ 400 ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದರು. ಕಾರ್ಯಕ್ರಮದಲ್ಲಿ ತ್ರಿಪುರಾ ಗವರ್ನರ್ ತಥಾಗತಾ ರಾಯ್, ಶಿಕ್ಷಣ ಸಚಿವ ರತನ್ ಲಾಲ್ ನಾಥ್, ಉಪ ಚಾನ್ಸೆಲರ್ ಅಂಜನ್ ಕುಮಾರ್ ಘೋಷ್, ರಿಜಿಸ್ಟ್ರಾರ್ ಸ್ಯಾಂಟಿ ದೇಬ್ ರಾಯ್ ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.