Wedding Viral Video: ಮದುವೆ ಮನೆಗಳಲ್ಲಿ ಡಿಜೆ ಸದ್ದಿಗೆ ಅತಿಥಿಗಳು ಕುಣಿದು ಕುಪ್ಪಳಿಸಲು ಇಷ್ಟಪಡುತ್ತಾರೆ. ಅದರಲ್ಲೂ ಅವರ ನೆಚ್ಚಿನ ಹಾಡುಗಳ ಕೇಳಿದರೆ ಹುಚ್ಚರನ್ನಾಗಿ ಕುಣಿದಾಡುವುದನ್ನು ಕಂಡಿದ್ದೇವೆ. ಇನ್ನು ಚಿತ್ರ ವಿಚಿತ್ರವಾಗಿ ಕುಣಿಯುವವರು ಕೆಲವರಾದರೆ, ಮದುವೆಯಲ್ಲಿರುವ ಕೆಲ ವಸ್ತುಗಳನ್ನು ತಂದು ಅದರ ಜೊತೆ ಡ್ಯಾನ್ಸ್ ಮಾಡಿ ಜನರನ್ನು ನಕ್ಕು ಸುಸ್ತಾಗಿಸುವವರು ಇನ್ನೂ ಕೆಲವರು. ಇಲ್ಲೊಂದು ಮದುವೆಯಲ್ಲಿ ಅಂತಹದ್ದೇ ಘಟನೆಯೊಂದು ನಡೆದಿದೆ.


COMMERCIAL BREAK
SCROLL TO CONTINUE READING

ಮದುವೆ ಮನೆಗೆ ಬಂದಿದ್ದ ಅತಿಥಿಗಳು ಪಾತ್ರೆಗಳನ್ನು ಕೈಯಲ್ಲಿ ಹಿಡಿದು ಎಲ್ಲೆಲ್ಲೂ ನೃತ್ಯ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ, ತಮ್ಮ ಕೈಯಲ್ಲಿದ್ದ ಪಾತ್ರೆಗಳನ್ನು ಜೋರಾಗಿ ಹೊಡೆದು ಶಬ್ಧ ಮಾಡಲು ಪ್ರಾರಂಭಿಸಿದರು. ಇದನ್ನು ನೋಡಿದ ಉಳಿದ ಅತಿಥಿಗಳು ಬೆಚ್ಚಿಬಿದ್ದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.


ಇದನ್ನೂ ಓದಿ: ಆನೆ-ಮಾನವ ಸಂಘರ್ಷ: ಪರಿಹಾರ ದ್ವಿಗುಣಗೊಳಿಸಲು ರಾಜ್ಯ ಸರ್ಕಾರ ಸಮ್ಮತಿ


ಮದುವೆಯ ಸ್ಥಳದಲ್ಲಿ ಹಾಡಿಗೆ ನೃತ್ಯ ಮಾಡುವಾಗ ಅತಿಥಿಗಳ ಗುಂಪು ಕುರ್ಚಿಗಳು ಮತ್ತು ಖಾಲಿ ಪಾತ್ರೆಗಳನ್ನು ಬಡಿದುಕೊಳ್ಳುವುದನ್ನು ಕಾಣಬಹುದು. ಈ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಅಂಕಿತ್ ಎಂಬ ಸೋಶಿಯಲ್ ಮೀಡಿಯಾ ಬಳಕೆದಾರರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಈ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಇದನ್ನು ಕೆಲವೇ ಗಂಟೆಗಳಲ್ಲಿ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ, ವಿಡಿಯೋ ನೋಡಿದ ಜನರು ತಮ್ಮ ಪ್ರತಿಕ್ರಿಯೆಯನ್ನು ತೀವ್ರವಾಗಿ ವ್ಯಕ್ತಪಡಿಸುತ್ತಿದ್ದಾರೆ.


ವೀಡಿಯೊದಲ್ಲಿ, ಕೆಲವು ಅತಿಥಿಗಳು ಆಹಾರ ವ್ಯವಸ್ಥೆ ಸ್ಥಳದಲ್ಲಿ ತಮ್ಮ ಕೈಗಳಿಂದ ಪಾತ್ರೆಗಳನ್ನು ಹೊಡೆಯುತ್ತಿರುವುದನ್ನು ಕಾಣಬಹುದು. ಹಾಡಿಗೆ ನೃತ್ಯ ಮಾಡುವುದು, ಖಾಲಿ ಪಾತ್ರೆಗಳು ಮತ್ತು ಕುರ್ಚಿಗಳನ್ನು ಬಡಿದು ನೃತ್ಯ ಮಾಡುವುದು ಈ ದೃಶ್ಯದಲ್ಲಿ ಸೆರೆಯಾಗಿದೆ.


ವೈರಲ್ ಆಗಿರುವ ಈ ವೀಡಿಯೊದ ಶೀರ್ಷಿಕೆಯಲ್ಲಿ, “ಇಲ್ಲಿ ಹೆಚ್ಚು ಹಾಡು ಕೇಳಿಸುತ್ತಿಲ್ಲ. ಹಾಗಾಗಿ ನಾನು ನೃತ್ಯ ಮಾಡುವುದಿಲ್ಲ ಎಂದು ಹುಡುಗಿಯರು ಹೇಳಿದರೆ, ಹುಡುಗರು ಮಾತ್ರ ಈ ರೀತಿ ಕುಣಿಯುತ್ತಾರೆ” ಎಂದು ಕೆಳಗಿನ ವಿಡಿಯೋವನ್ನು ತೋರಿಸಿದ್ದಾರೆ.


Surya Gochar: ನಾಲ್ಕು ದಿನಗಳ ಬಳಿಕ ಈ ರಾಶಿಯವರಿಗೆ ಭಾರೀ ಯಶಸ್ಸು, ಸಂಪತ್ತು ನೀಡಲಿದ್ದಾನೆ ಸೂರ್ಯ


‘ಕೊಂಚ ಮದ್ಯ ಸೇವನೆ ಬಳಿಕ ಹುಡುಗರು ಜನರೇಟರ್‌ನ ಧ್ವನಿಯಲ್ಲಿಯೂ ನೃತ್ಯ ಮಾಡಬಹುದು’ ಎಂದು ಒಬ್ಬ ಬಳಕೆದಾರರು ವ್ಯಂಗ್ಯವಾಗಿ ಬರೆದಿದ್ದಾರೆ. ಇನ್ನೊಬ್ಬರು, ‘ಹುಡುಗರ ಗುಂಪು ವಧುವಿನ ಕಡೆಗೆ ಹೆಚ್ಚು ಬಿಲ್ ಮಾಡಿಸುವಂತಿದೆ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, 'ದೇಸಿ ವೈಬ್ ವಿಭಿನ್ನವಾಗಿದೆ' ಎಂದು ಬರೆದುಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.