ನವದೆಹಲಿ: ಕೇಂದ್ರ ಸರ್ಕಾರ ಶೀಘ್ರದಲ್ಲೇ ತಂಬಾಕು ಉತ್ಪನ್ನಗಳ ಬಳಕೆಯನ್ನು ತಡೆಯಲು ಸಿಂಗಲ್ ಸಿಗರೇಟ್ ಮಾರಾಟವನ್ನು ನಿಷೇಧಿಸಲು ಸಂಸತ್ತಿನ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.ಸಿಗರೇಟ್ ಮಾರಾಟವು ತಂಬಾಕು ನಿಯಂತ್ರಣ ಅಭಿಯಾನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಂಸತ್ತಿನ ಸ್ಥಾಯಿ ಸಮಿತಿ ವಾದಿಸಿದೆ. ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಂದ ಧೂಮಪಾನ ವಲಯವನ್ನು ತೆಗೆದುಹಾಕಲು ಸಮಿತಿಯು ಶಿಫಾರಸು ಮಾಡಿದೆ.
ಸ್ಥಾಯಿ ಸಮಿತಿಯ ಶಿಫಾರಸ್ಸಿನ ಮೇರೆಗೆ ಸರ್ಕಾರವು ಕಾರ್ಯನಿರ್ವಹಿಸಿದರೆ, ಸಂಸತ್ತು ಶೀಘ್ರದಲ್ಲೇ ಸಿಂಗಲ್ ಸಿಗರೇಟ್ ಮಾರಾಟ ಮತ್ತು ತಯಾರಿಕೆಯನ್ನು ನಿಷೇಧಿಸಬಹುದು. 3 ವರ್ಷಗಳ ಹಿಂದೆಯೇ ಕೇಂದ್ರ ಸರ್ಕಾರ ಆರೋಗ್ಯ ಸಚಿವಾಲಯದ ಶಿಫಾರಸಿನ ಮೇರೆಗೆ ಇ-ಸಿಗರೇಟ್ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿತ್ತು ಎಂಬುದನ್ನು ಸ್ಮರಿಸಬಹುದಾಗಿದೆ.
ಇದನ್ನೂ ಓದಿ: Veena Kapoor: ಆಸ್ತಿಗಾಗಿ ಹಿರಿಯ ನಟಿಯನ್ನು ಹೊಡೆದು ಕೊಂದ ಪುತ್ರ
ಜಿಎಸ್‌ಟಿ ಜಾರಿಯಾದ ನಂತರವೂ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿಲ್ಲ ಎಂದು ಸ್ಥಾಯಿ ಸಮಿತಿ ಗಮನಿಸಿದೆ. ಆಲ್ಕೋಹಾಲ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಮಿತಿಯು ಎತ್ತಿ ತೋರಿಸಿದೆ.
ಇದನ್ನೂ ಓದಿ: Trending Video : ಟಾಪ್‌ಲೆಸ್ ಆಗಿ ಬಾಲ್ಕನಿಗೆ ಬಂದ ನಟಿ.! ಚಳಿಯಲ್ಲಿ ಹೀಗೆಲ್ಲಾ ಮಾಡಿದ್ರೆ ಹೇಗ್ ಗುರು?
ಇತ್ತೀಚಿನ ತೆರಿಗೆ ಸ್ಲ್ಯಾಬ್‌ಗಳ ಪ್ರಕಾರ, ದೇಶದಲ್ಲಿ ಬೀಡಿಗಳ ಮೇಲೆ 22%, ಸಿಗರೇಟ್‌ಗಳ ಮೇಲೆ 53% ಮತ್ತು ಹೊಗೆರಹಿತ ತಂಬಾಕಿನ ಮೇಲೆ 64% ಜಿಎಸ್‌ಟಿ ವಿಧಿಸಲಾಗುತ್ತದೆ. ಮತ್ತೊಂದೆಡೆ, ತಂಬಾಕು ಉತ್ಪನ್ನಗಳ ಮೇಲೆ 75% ಜಿಎಸ್‌ಟಿ ವಿಧಿಸಲು ವಿಶ್ವ ಆರೋಗ್ಯ ಸಂಸ್ಥೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ವಿವಿಧ ವರದಿಗಳ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಸುಮಾರು 3.5 ಲಕ್ಷ ಜನರು ಸಿಗರೇಟ್ ಸೇವನೆಯಿಂದ ಸಾಯುತ್ತಾರೆ. 2018 ರಲ್ಲಿ, ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ ಸಮೀಕ್ಷೆಯನ್ನು ನಡೆಸಿದ್ದು, ಧೂಮಪಾನ ಮಾಡುವವರಲ್ಲಿ 46% ಜನರು ಅನಕ್ಷರಸ್ಥರಾಗಿದ್ದಾರೆ ಮತ್ತು 16% ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಎಂದು ತೋರಿಸಿದೆ.
ಇದನ್ನೂ ಓದಿ: ʼಜಸ್ಟ್ ಪಾಸ್ʼ ನಟ ಶ್ರೀಗೆ ಸಿಕ್ಳು ಸೂಪರ್ ಹೀರೋಯಿನ್ : ಡಿ.14ಕ್ಕೆ ಸೆಟ್ಟೇರಲಿದೆ ಸಿನಿಮಾ
ಫೌಂಡೇಶನ್ ಫಾರ್ ಸ್ಮೋಕ್-ಫ್ರೀ ವರ್ಲ್ಡ್ ವರದಿಯ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಸುಮಾರು 6.6 ಕೋಟಿ ಜನರು ಸಿಗರೇಟ್ ಸೇದುತ್ತಾರೆ, ಆದರೆ 26 ಕೋಟಿಗೂ ಹೆಚ್ಚು ಜನರು ಇತರ ತಂಬಾಕು ಉತ್ಪನ್ನಗಳನ್ನು ಬಳಸುತ್ತಾರೆ. ಭಾರತದಲ್ಲಿ ಸುಮಾರು 21% ಜನರು ತಂಬಾಕು ಸೇವನೆಯಿಂದ ಕ್ಯಾನ್ಸರ್ಗೆ ಒಳಗಾಗುತ್ತಾರೆ.
ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನುಈಗಾಗಲೇ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ 200 ರೂ.ವರೆಗೆ ದಂಡ ವಿಧಿಸಬಹುದಾಗಿದೆ. ತಂಬಾಕು ಉತ್ಪನ್ನಗಳ ಜಾಹೀರಾತನ್ನೂ ಸರ್ಕಾರ ನಿಷೇಧಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.