Rivaba Jadeja in Gujarat Elections : ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಗುಜರಾತ್‌ನ ಜಾಮ್‌ನಗರ (ಉತ್ತರ) ಕ್ಷೇತ್ರದಲ್ಲಿ ಭರ್ಜರಿ ಜಯಗಳಿಸಿದ್ದಾರೆ. ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಟಿಕೆಟ್‌ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದರು. ಈ ಬಗ್ಗೆ ರಿವಾಬಾ ಸಂತಸ ವ್ಯಕ್ತಪಡಿಸಿದ್ದಾರೆ. ಎಣಿಕೆಯ ಆರಂಭಿಕ ಹಂತದಿಂದ ಮುನ್ನಡೆ ಸಾಧಿಸಿದ ಅವರು ಅಂತಿಮವಾಗಿ ಉತ್ತಮ ಅಂತರದಿಂದ ಗೆಲುವು ಸಾಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಶೇ.56 ಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆಲವು


ಚುನಾವಣಾ ಆಯೋಗದ ಅಧಿಕೃತ ಅಂಕಿಅಂಶಗಳ ಪ್ರಕಾರ, 14 ಸುತ್ತಿನ ಮತ ಎಣಿಕೆಯ ನಂತರ ರಿವಾಬಾ ಜಡೇಜಾ ಪರವಾಗಿ ಶೇಕಡಾ 56 ಕ್ಕೂ ಹೆಚ್ಚು ಮತಗಳು ಚಲಾವಣೆಯಾದವು. ಈವರೆಗೆ 72 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದರು. 14 ಸುತ್ತಿನ ಮತ ಎಣಿಕೆಯ ನಂತರ ಆಮ್ ಆದ್ಮಿ ಪಕ್ಷದ ಕರ್ಶನ್‌ಭಾಯ್ 29 ಸಾವಿರ ಪಡೆದರೆ, ಕಾಂಗ್ರೆಸ್‌ನ ಬಿಪೇಂದ್ರ ಸಿಂಗ್ ಜಡೇಜಾ 19678 ಮತಗಳನ್ನು ಪಡೆದರು.


ಇದನ್ನೂ ಓದಿ : Assembly Election Result 2022 : ಗುಜರಾತ್‌ನಲ್ಲಿ 1985 ರ ಕಾಂಗ್ರೆಸ್‌ ದಾಖಲೆ ಮುರಿದ ಬಿಜೆಪಿ!


ಬಿಜೆಪಿ ಅಭ್ಯರ್ಥಿ ರಿವಾಬಾಗೆ ಗೆಲುವು 


ರಿವಾಬಾ ಜಡೇಜಾ ಆರಂಭದಿಂದಲೂ ಉತ್ತಮ ಮುನ್ನಡೆ ಸಾಧಿಸಿದ್ದರು. ಜಾಮ್‌ನಗರ ಉತ್ತರ ಕ್ಷೇತ್ರದಲ್ಲಿ ತಮ್ಮ ಗೆಲುವು ಖಚಿತವಾದಾಗ ಅವರು ಮತದಾರರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದರು. ನನ್ನನ್ನು ಅಭ್ಯರ್ಥಿಯನ್ನಾಗಿ ಸಂತೋಷದಿಂದ ಸ್ವೀಕರಿಸಿ, ನನ್ನ ಪರವಾಗಿ ಕೆಲಸ ಮಾಡಿದ ಮತ್ತು ಸಾರ್ವಜನಿಕರನ್ನು ತಲುಪಿದವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇದು ನನ್ನ ಗೆಲುವು ಮಾತ್ರವಲ್ಲ, ನಿಮ್ಮೆಲ್ಲರ ಗೆಲುವು ಎಂದುನ್ ಹೇಳಿದ್ದಾರೆ.


ಗುಜರಾತ್‌ನ 182 ರಾಜ್ಯಗಳ ವಿಧಾನಸಭೆಗಳಲ್ಲಿ 150 ಸ್ಥಾನಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ . ರಾಜ್ಯದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲು ಪಕ್ಷ ಸಿದ್ಧತೆ ನಡೆಸಿದೆ.


2 ಹಂತಗಳಲ್ಲಿ ಚುನಾವಣೆ ನಡೆದಿತ್ತು


ಗುಜರಾತ್‌ನ 33 ಜಿಲ್ಲೆಗಳ 182 ವಿಧಾನಸಭಾ ಸ್ಥಾನಗಳಿಗೆ ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಿತು. ಈ ವರ್ಷ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಶೇ.66.31ರಷ್ಟು ಮತದಾನವಾಗಿದ್ದು, ಕಳೆದ 2017ರ ಚುನಾವಣೆಯಲ್ಲಿ ಶೇ.71.28ಕ್ಕಿಂತ ಕಡಿಮೆ ಮತದಾನವಾಗಿದೆ. ಮೊದಲ ಹಂತದಲ್ಲಿ ಶೇ.60.20ರಷ್ಟು ಮತದಾನ ನಡೆದಿದ್ದು, ಎರಡನೇ ಹಂತದಲ್ಲಿ ಶೇ.64.39ರಷ್ಟು ಮತದಾನವಾಗಿದೆ.


ಇದನ್ನೂ ಓದಿ : 1995ರ ತನ್ನ ದಾಖಲೆ ತಾನೇ ಮುರಿದ ಬಿಜೆಪಿ : ಗುಜರಾತ್‌ನಲ್ಲಿ ಮತ್ತೇ ಕೆಸರಿ ದರ್ಬಾರ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.