1995ರ ತನ್ನ ದಾಖಲೆ ತಾನೇ ಮುರಿದ ಬಿಜೆಪಿ : ಗುಜರಾತ್‌ನಲ್ಲಿ ಮತ್ತೇ ಕೆಸರಿ ದರ್ಬಾರ್

ಗುಜರಾತ್ ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ. 1995ರಲ್ಲಿ ಕಾಂಗ್ರೆಸ್ 149 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಇದೀಗ ತನ್ನ ದಾಖಲೆಯನ್ನು ತಾನೇ ಮುರಿದು ಭರ್ಜರಿ ಜಯ ಗಳಿಸಿದೆ. ಇಲ್ಲಿಯವರೆಗೆ (ಮಧ್ಯಾಹ್ನ 4:30 ಗಂಟೆಗೆ) ಬಿಜೆಪಿ 156 ಸ್ಥಾನಗಳನ್ನು ಗೆದ್ದಿದ್ದು, 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ, ಹೀಗಾಗಿ ಬಿಜೆಪಿ 157 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಅಲ್ಲದೆ, ಬಿಜೆಪಿ ಸತತ 7ನೇ ಬಾರಿಗೆ ಸರ್ಕಾರ ರಚಿಸಲು ಹೊರಟಿದೆ.

Written by - Krishna N K | Last Updated : Dec 8, 2022, 04:38 PM IST
  • ಗುಜರಾತ್ ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ
  • 1995ರಲ್ಲಿ ಕಾಂಗ್ರೆಸ್ 149 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಇದೀಗ ತನ್ನ ದಾಖಲೆಯನ್ನು ತಾನೇ ಮುರಿದು ಭರ್ಜರಿ ಜಯ ಗಳಿಸಿದೆ
  • ಗುಜರಾತ್‌ನಲ್ಲಿ ಬಿಜೆಪಿ ಸತತ 7ನೇ ಬಾರಿಗೆ ಸರ್ಕಾರ ರಚಿಸಲು ಹೊರಟಿದೆ
1995ರ ತನ್ನ ದಾಖಲೆ ತಾನೇ ಮುರಿದ ಬಿಜೆಪಿ : ಗುಜರಾತ್‌ನಲ್ಲಿ ಮತ್ತೇ ಕೆಸರಿ ದರ್ಬಾರ್ title=

Gujarat Election Result : ಗುಜರಾತ್ ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ. 1995ರಲ್ಲಿ ಕಾಂಗ್ರೆಸ್ 149 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಇದೀಗ ತನ್ನ ದಾಖಲೆಯನ್ನು ತಾನೇ ಮುರಿದು ಭರ್ಜರಿ ಜಯ ಗಳಿಸಿದೆ. ಇಲ್ಲಿಯವರೆಗೆ (ಮಧ್ಯಾಹ್ನ 4:30 ಗಂಟೆಗೆ) ಬಿಜೆಪಿ 156 ಸ್ಥಾನಗಳನ್ನು ಗೆದ್ದಿದ್ದು, 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ, ಹೀಗಾಗಿ ಬಿಜೆಪಿ 157 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಅಲ್ಲದೆ, ಬಿಜೆಪಿ ಸತತ 7ನೇ ಬಾರಿಗೆ ಸರ್ಕಾರ ರಚಿಸಲು ಹೊರಟಿದೆ.

ಮುಂದಿನ ಐದು ವರ್ಷಗಳ ಕಾಲ ಗುಜರಾತ್‌ನಲ್ಲಿ ಬಿಜೆಪಿ ಯಶಸ್ವಿಯಾಗಿ ಆಡಳಿತ ನಡೆಸಿದರೆ, ಸತತವಾಗಿ ಹೆಚ್ಚು ವರ್ಷಗಳ ಕಾಲ ಆಡಳಿತ ನಡೆಸಿದ ಏಕೈಕ ಪಕ್ಷವಾಗಲಿದೆ. ಇಲ್ಲಿಯವರೆಗೆ ಬಿಜೆಪಿ 27 ವರ್ಷ 8 ತಿಂಗಳ ಕಾಲ ನಿರಂತರವಾಗಿ ಗುಜರಾತ್‌ನಲ್ಲಿ ಆಡಳಿತ ನಡೆಸಿದ್ದು, ಇದು ಈ ಬಾರಿಯೂ ಮುಂದುವರೆಯುತ್ತಿದೆ. ಮುಂದಿನ ಐದು ವರ್ಷಗಳ ಸುಗಮವಾಗಿ ಆಡಳಿತ ನಡೆದರೆ 33 ವರ್ಷಗಳ ಕಾಳ ಆಡಳಿತ ನಡೆಸಿದ ಏಕೈಕ ಪಕ್ಷವಾಗಿ ಇತಿಹಾಸ ಸೃಷ್ಟಿಸಲಿದೆ. ಇದಕ್ಕೂ ಮೊದಲು ಭಾರತೀಯ ಕಮ್ಯುನಿಸ್ಟ್ ಪಕ್ಷವು ಪಶ್ಚಿಮ ಬಂಗಾಳವನ್ನು 33 ವರ್ಷ 10 ತಿಂಗಳುಗಳ ಕಾಲ (1977 - 2011) ಆಳಿದ ದಾಖಲೆಯಾಗಿತ್ತು. 

ಇದನ್ನೂ ಓದಿ: ಗುಜರಾತ್‌ನಲ್ಲಿ ಮತ ಎಣಿಕೆಯ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಆತ್ಮಹತ್ಯೆಗೆ ಯತ್ನ

ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ನಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ. ʼಉಚಿತವಾಗಿ ನೀಡುವುದಾಗಿ ಹೇಳಿದವರನ್ನು ಜನ ಹೊರಗಿಟ್ಟಿದ್ದಾರೆʼ ಎಂದು ಹೇಳುವ ಮೂಲಕ ಅರವಿಂದ್ ಕೇಜ್ರಿವಾಲ್ ಪಕ್ಷ ಆಪ್‌ಗೆ ಟಾಂಗ್‌ ನೀಡಿದ್ದಾರೆ. ಅಲ್ಲದೆ, ಉದಾರವಾದಿ ರಾಜಕಾರಣಿಗಳನ್ನು ತಿರಸ್ಕರಿಸಿ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ನಿಂತಿರುವ ನರೇಂದ್ರ ಮೋದಿಯವರ ಬಿಜೆಪಿಗೆ ಗುಜರಾತ್ ಅಭೂತಪೂರ್ವ ಶಕ್ತಿಯನ್ನು ನೀಡಿದೆ ಎಂದು ಹೇಳಿದ್ದಾರೆ.

ಮಹಿಳೆಯರು, ಯುವಕರು, ರೈತರು ಹೀಗೆ ಎಲ್ಲ ವರ್ಗಗಳೂ ಬಿಜೆಪಿಯೊಂದಿಗಿದ್ದಾರೆ ಎಂಬುದನ್ನು ಈ ಮಹಾ ಗೆಲುವು ತೋರಿಸುತ್ತದೆ. ಕಳೆದ ಎರಡು ದಶಕಗಳಲ್ಲಿ ಮೋದಿ ನಾಯಕತ್ವದಲ್ಲಿ ಗುಜರಾತ್ ಅಭಿವೃದ್ಧಿಯನ್ನು ಮಾಡಿದೆ. ಇಂದು ಗುಜರಾತ್‌ನ ಜನರು ಬಿಜೆಪಿಯನ್ನು ಆಶೀರ್ವದಿಸಿದ್ದಾರೆ. ಇದು ನರೇಂದ್ರ ಮೋದಿಯವರ ಅಭಿವೃದ್ಧಿ ಮಾದರಿ, ಅಚಲ ನಂಬಿಕೆಗೆ ಸಂದ ಜಯ ಎಂದು ಅಮಿತ್‌ ಶಾ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News