ನವದೆಹಲಿ: ಮಾಜಿ ಪ್ರಧಾನಿ ದೇವೇಗೌಡ ಅವರು ಸರ್ದಾರ್ ಸರೋವರ ಅಣೆಕಟ್ಟೆಯ ಬಳಿ ನಿರ್ಮಿಸಿರುವ ಸರ್ದಾರ್ ಪಟೇಲ್ ರ ಏಕತಾ ಪ್ರತಿಮೆಗೆ ದೇವೇಗೌಡ ಭೇಟಿ ನೀಡಿದ್ದಾರೆ.



COMMERCIAL BREAK
SCROLL TO CONTINUE READING

ಈಗ ಅವರು ಭೇಟಿ ನೀಡಿರುವ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ 'ನಮ್ಮ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಏಕತಾ ಪ್ರತಿಮೆಗೆ ಭೇಟಿ ನೀಡಿರುವುದು ಸಂತಸವಾಗಿದೆ' ಎಂದು ತಿಳಿಸಿದ್ದಾರೆ.



ಭಾರತದ ರಾಜರ ಸಂಸ್ಥಾನಗಳನ್ನು ದೇಶದ ಜೊತೆ ವಿಂಗಡಣೆ ಮಾಡಲು ಶ್ರಮಿಸಿದ ಸರ್ದಾರ್ ಪಟೇಲ್ ಅವರು ನೆನಪಿನಲ್ಲಿ ಏಕತಾ ಪ್ರತಿಮೆಯನ್ನು ನರ್ಮದಾ ನದಿ ಕೆವಾಡಿಯಾದಲ್ಲಿ ನಿರ್ಮಿಸಲಾಗಿದೆ. ಸುಮಾರು 2.989 ಕೋಟಿ ರೂ. ವ್ಯಚ್ಚದಲ್ಲಿ ನಿರ್ಮಿಸಿರುವ ಈ ಜಗತ್ತಿನ ಅತಿ ಎತ್ತರದ ಪ್ರತಿಮೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.