Hafta Vasooli Case - ಸಂಕಷ್ಟದಲ್ಲಿ ಉದ್ಧವ ಸರ್ಕಾರ, MHAಗೆ 6.3 ಜಿಬಿ ಸಾಕ್ಸ್ಯ ಸಲ್ಲಿಸಿದ ಫಡ್ನವಿಸ್
Hafta Vasooli Case - ಮಹಾರಾಷ್ಟ್ರದಲ್ಲಿ ಪರಮ ಬೀರ್ ಸಿಂಗ್ ಲೆಟರ್ ಪ್ರಕರಣದ ಬಳಿಕ ಉದ್ಧವ್ ನೇತೃತ್ವದ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ.
Hafta Vasooli Case - ಮಹಾರಾಷ್ಟ್ರದಲ್ಲಿ ಪರಮ ಬೀರ್ ಸಿಂಗ್ ಲೆಟರ್ ಪ್ರಕರಣದ ಬಳಿಕ ಉದ್ಧವ್ ನೇತೃತ್ವದ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯದ ಹಿರಿಯ ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯಕ್ಕೆ 6ಜಿಬಿಗೂ ಹೆಚ್ಚಿನ ಗಾತ್ರದ data ಒದಗಿಸಿದ್ದು, ಇದರಲ್ಲಿ ಮಹಾರಾಷ್ಟ್ರದ ಪೊಲೀಸ್ ವಿಭಾಗದಲ್ಲಿ ವರ್ಗಾವಣೆ ಹಾಗೂ ಪೋಸ್ಟಿಂಗ್ ನಲ್ಲಿ ದೊಡ್ಡ ಮಟ್ಟದ ಭೃಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ರಾಜ್ಯದ ಗುಪ್ತಚರ ಇಲಾಖೆ ಮಾಹಿತಿ ನೀಡಿದರೂ ಕೂಡ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಹೀಗಾಗಿ ಇಡೀ ಪ್ರಕರಣದಲ್ಲಿ CBI ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಭ್ರಷ್ಟಾಚಾರ ನಡೆದ ಅವಧಿಯಲ್ಲಿ ಆಗಿನ ಗುಪ್ತಚರ ಇಲಾಖೆಯ ಆಯುಕ್ತೆಯಾಗಿದ್ದ ರಶ್ಮಿ ಶುಕ್ಲಾ ಅವರಿಂದ ಒಪ್ಪಿಗೆ ಪಡೆದು ನಡೆಸಲಾಗಿರುವ ಫೋನ್ ರಿಕಾರ್ಡ್ ಮಾತುಕತೆಯ 6.3 ಜಿಬಿ ಗಾತ್ರದ ಸಾಕ್ಷಾಧಾರ ತಮ್ಮ ಬಳಿ ಇದ್ದು, ಇದರಲ್ಲಿ ಹಲವು ಪೊಲೀಸ್ ಅಧಿಕಾರಿಗಳ ಹೆಸರುಗಳು ಕೇಳಿಬಂದಿವೆ ಎಂದು ಫಡ್ನವಿಸ್ ಆರೋಪಿಸಿದ್ದಾರೆ.
"ಮಹಾರಾಷ್ಟ್ರದಲ್ಲಿ ನಡೆಯುತ್ತಿರುವುದು ವಿಕಾಸ್ ಅಲ್ಲ, ವಸೂಲಿ"
ಈ ಎಲ್ಲಾ ಫೋನ್ ರಿಕಾರ್ಡ್ ಗಳನ್ನು ರಾಜ್ಯಸರ್ಕಾರದ ಸೂಕ್ತ ಅನುಮತಿಯ ಮೇರೆಗೆ ಶುಕ್ಲಾ ನಡೆಸಿದ್ದಾರೆ. ಆದರೆ, ಆಗಸ್ಟ್ 2020 ಈ ವರದಿಯನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಸಲ್ಲಿಸಿದ ಬಳಿಕವೂ ಕೂಡ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಹೀಗಾಗಿ ತಾವು ಈ ಪ್ರಕರಣದಲ್ಲಿ CBI ತನಿಖೆಗೆ ಆಗ್ರಹಿಸಿರುವುದಾಗಿ ಫಡ್ನವಿಸ್ ಹೇಳಿದ್ದಾರೆ.
ಫಡ್ನವಿಸ್ ಅವರ ಆರೋಪಗಳಿಗೆ ತಿರುಗೇಟು ನೀಡಿರುವ MVA ಅಂಗಪಕ್ಷವಾಗಿರುವ NCP, ಈ ಪ್ರಕರಣದಲ್ಲಿ BJPಯ ಜನರು ದಾರಿತಪ್ಪಿಸುತ್ತಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸುವ ಸಂದರ್ಭದಲ್ಲಿ ಫಡ್ನವಿಸ್ ತತ್ಕಾಲೀನ ಪೊಲೀಸ್ ಆಯುಕ್ತರಾಗಿದ್ದ ರಶ್ಮಿ ಶುಕ್ಲಾ ಅವರ ವರದಿಯಲ್ಲಿ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು, IPS ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಸೇರಿದಂತೆ ಇತರೆ ಹೆಸರುಗಳಿರುವುದನ್ನು ಉಲ್ಲೇಖಿಸಿದ್ದಾರೆ. ಇದೊಂದು ಸೂಕ್ಷ್ಮ ಸಂಗತಿಯಾಗಿದ್ದು, ಪ್ರಸ್ತುತ ಅವರ ಹೆಸರನ್ನು ತಾವು ಬಹಿರಂಗಗೊಳಿಸುತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ-ಪರಮ್ ಬೀರ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ - ಅನಿಲ್ ದೇಶ್ ಮುಖ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.