ಭಾರತದ ಅರ್ಧದಷ್ಟು ಕೊರೊನಾ ಚೇತರಿಕೆ ಪ್ರಕರಣಗಳು 5 ರಾಜ್ಯಗಳಿಂದ ಬಂದಿವೆ: ಕೇಂದ್ರ ಆರೋಗ್ಯ ಸಚಿವಾಲಯ
ಕೊರೊನಾವೈರಸ್ ನಿಂದ 6 ಮಿಲಿಯನ್ ಗೂ ಹೆಚ್ಚು ರೋಗಿಗಳು ಭಾರತದಲ್ಲಿ ಈವರೆಗೆ ಚೇತರಿಸಿಕೊಂಡಿದ್ದಾರೆ, ಕೊರೊನಾ ಇರುವ ಅಧಿಕ ಐದು ರಾಜ್ಯಗಳಲ್ಲೇ ಹೆಚ್ಚಿನ ಚೇತರಿಕೆ ಪ್ರಕರಣಗಳು ಕಂಡುಬಂದಿದೆ.
ನವದೆಹಲಿ: ಕೊರೊನಾವೈರಸ್ ನಿಂದ 6 ಮಿಲಿಯನ್ ಗೂ ಹೆಚ್ಚು ರೋಗಿಗಳು ಭಾರತದಲ್ಲಿ ಈವರೆಗೆ ಚೇತರಿಸಿಕೊಂಡಿದ್ದಾರೆ, ಕೊರೊನಾ ಇರುವ ಅಧಿಕ ಐದು ರಾಜ್ಯಗಳಲ್ಲೇ ಹೆಚ್ಚಿನ ಚೇತರಿಕೆ ಪ್ರಕರಣಗಳು ಕಂಡುಬಂದಿದೆ.
ಕೊರೊನಾ ಮಿತಿಮೀರಿ ಹರಡುತ್ತಿರುವ ಸಂದರ್ಭದಲ್ಲಿ ಶಾಲೆ ತೆರೆಯುವುದು ಸರಿಯಲ್ಲ-ಸಿದ್ದರಾಮಯ್ಯ
ಈಗ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 7 ಮಿಲಿಯನ್ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶದಲ್ಲಿ ಉಲ್ಲೇಖಿಸಲಾಗಿದೆ.ಶನಿವಾರ ಮತ್ತು ಭಾನುವಾರ ಬೆಳಿಗ್ಗೆ ಕೋವಿಡ್ -19 ದಿಂದ 89,154 ಜನರು ಚೇತರಿಸಿಕೊಂಡಿದ್ದಾರೆ.
ಆ ಮೂಲಕ ಈಗ ದೇಶಾದ್ಯಂತ 6,077,976 ಜನರು ಚೇತರಿಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಕೊರೊನಾ ಲಸಿಕೆಯ ಪರೀಕ್ಷೆ ವಿವಿಧ ಹಂತದಲ್ಲಿದೆ- ಕೇಂದ್ರ ಸಚಿವ ಹರ್ಷವರ್ಧನ್
ಗರಿಷ್ಠ ಕ್ಯಾಸೆಲೋಡ್ ಹೊಂದಿರುವ ಐದು ಟಾಪ್ ರಾಜ್ಯಗಳು ಒಟ್ಟು ಚೇತರಿಕೆಯಲ್ಲಿ ಅರ್ಧಕ್ಕಿಂತ ಹೆಚ್ಚು ಅಥವಾ 54.3% ರಷ್ಟು ಕೊಡುಗೆ ನೀಡಿವೆ ಎಂದು ಅದು ಹೇಳಿದೆ.
ಮತ್ತು, ಹೊಸದಾಗಿ ಚೇತರಿಸಿಕೊಂಡ ಪ್ರಕರಣಗಳಲ್ಲಿ ಶೇ 80 ರಷ್ಟು ಮಹಾರಾಷ್ಟ್ರ, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ದೆಹಲಿ ಮತ್ತು ಛತ್ತೀಸ್‌ಗಡ್ ದ 10 ರಾಜ್ಯಗಳಿಂದ ವರದಿಯಾಗಿದೆ.