ಹೈದರಾಬಾದ್​: ಇದು ಎಂಥವರ ಕಣ್ಣಲ್ಲೂ ನೀರು ತರಿಸುವ ಘಟನೆಯಾಗಿದೆ. ತಮ್ಮ ಮಗುವಿನ ಸಾವನ್ನು ನೋಡಲಾರೆ ಎಂದು ತಾಯಿಯೊಬ್ಬಳು ಕಟ್ಟಡದ 22ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೈದರಾಬಾದ್​ನ ಕೆಪಿಎಚ್​ಬಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ವೃತ್ತಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದ ಸ್ವಾತಿ (38) ಮೃತ ದುರ್ದೈವಿ. ಸ್ವಾತಿ ಮತ್ತು ಪತಿ ಶ್ರೀಧರ್ ದಂಪತಿಗೆ​ 8 ವರ್ಷದ ಓರ್ವ ಮಗನಿದ್ದ. ಸಣ್ಣ ವಯಸ್ಸಿನಲ್ಲಿ ಆಡಿ ನಲಿದಾಡಬೇಕಾಗಿದ್ದ ಪ್ರೀತಿಯ ಪುತ್ರ ಅಂಗವೈಕಲ್ಯದಿಂದ ಬಳಲುತ್ತಿದ್ದಾನೆ. ವಿಶೇಷ ಚೇತನ ಮಗನಿದ್ದರೂ ಸ್ವಾತಿಯವರಿಗೆ  ಆತನ ಮೇಲೆ ಅಪಾರ ಪ್ರೀತಿ ಇತ್ತು. ಆದರೆ ಅವರ ಪತಿ ಶ್ರೀಧರ್‍ಗೆ ಮಾತ್ರ ಮಗನ ಮೇಲೆ ಒಂಚೂರು ಪ್ರೀತಿಯೇ ಇರಲಿಲ್ಲ.


ಇದನ್ನೂ ಓದಿ: 'ಮೋದಿ ಬಂದರೆ ಗೆಲ್ಲುತ್ತೇವೆ' ಎಂಬ ಮನಸ್ಥಿತಿ ಕೆಲಸ ಮಾಡುವುದಿಲ್ಲ"-ಪ್ರಧಾನಿ ಮೋದಿ ಎಚ್ಚರಿಕೆ


ಅಂಗವಿಕಲ ಮಗ ಹುಟ್ಟಿದ್ದಕ್ಕೆ ಶ್ರೀಧರ್ ಮತ್ತು ಆತನ ಕುಟುಂಬಸ್ಥರು ತುಂಬಾ ಬೇಸರಪಟ್ಟುಕೊಂಡಿದ್ದರು. ಹೀಗಾಗಿ ಸ್ವಾತಿಯರಿಗೆ ಶ್ರೀಧರ್ ಮತ್ತು ಆತನ ಕುಟುಂಬಸ್ಥರು ಕಿರುಕುಳ ನೀಡಲು ಪ್ರಾರಂಭಿಸಿದ್ದರು. ಅಂಗವಿಕಲ ಮಗ ಇಷ್ಟವಿಲ್ಲದ ಕಾರಣ ಆತನಿಗೆ ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸುವಂತೆ ಸ್ವಾತಿಯವರಿಗೆ ಶ್ರೀಧರ್​ ಹಲವಾರು ಬಾರಿ ಒತ್ತಾಯಿಸಿದ್ದನಂತೆ.


ಆದರೆ ವಿಶೇಷ ಚೇತನ ಮಗನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ ಸ್ವಾತಿ ಮಾತ್ರ ಇದಕ್ಕೆ ಒಪ್ಪಿಕೊಂಡಿರಲಿಲ್ಲ. ಇದರಿಂದ ಆಕೆಗೆ ಹೆಚ್ಚಿನ ಕಿರುಕುಳ ನೀಡುತ್ತಿದ್ದರಂತೆ. ಪತಿ ಮತ್ತು ಮನೆಯವರು ಸೇರಿ ಮುಂದೊಂದು ದಿನ ನನ್ನ ಮಗನನ್ನು ಸಾಯಿಸುತ್ತಾರೆ ಅಂತಾ ಸ್ವಾತಿ ಮಾನಸಿಕವಾಗಿ ನೊಂದಿದ್ದಳಂತೆ. ನನ್ನಿಂದ ಪ್ರೀತಿಯ ಮಗನ ಸಾವನ್ನು ನೋಡಲಾಗುವುದಿಲ್ಲ ಎಂದು ಮನನೊಂದಿದ್ದ ಅವರು ತಮ್ಮ ಮನೆ ಇದ್ದ ಕಟ್ಟಡದ 22ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟಿದ್ದಾಳೆ.


ಇದನ್ನೂ ಓದಿ: ಐಐಎಂ ರಾಂಚಿಯಲ್ಲಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ


ಸದ್ಯ ಸ್ವಾತಿಯವರ ಮೃತದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪತಿ ಶ್ರೀಧರ್​ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಮೃತ ಸ್ವಾತಿ ಪೋಷಕರು ಹೈದಾರಾಬಾದ್‍ನ ಕೆಪಿಎಚ್​ಬಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅನ್ಯಾಯವಾಗಿ ತಮ್ಮ ಮಗಳ ಜೀವ ಬಲಿಪಡೆದ ಗಂಡನ ಮನೆಯವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.