ಪಾಟಿದಾರ್ ಚಳುವಳಿ ನಾಯಕ ಹಾರ್ದಿಕ್ ಪಟೇಲ್ ಗೆ ಈಗ ಮದುವೆಯ ಸಂಭ್ರಮ
ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ಬೇಕೆಂದು ಇಡೀ ಗುಜರಾತ್ ನಲ್ಲಿ ಚಳುವಳಿ ನಡೆಸಿ ಸುದ್ದಿಯಾಗಿದ್ದ ಹಾರ್ದಿಕ್ ಪಟೇಲ್ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನವದೆಹಲಿ: ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ಬೇಕೆಂದು ಇಡೀ ಗುಜರಾತ್ ನಲ್ಲಿ ಚಳುವಳಿ ನಡೆಸಿ ಸುದ್ದಿಯಾಗಿದ್ದ ಹಾರ್ದಿಕ್ ಪಟೇಲ್ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಭಾನುವಾರದಂದು ಕಿಂಜಲ್ ಪರೀಕ್ ಎನ್ನುವವರನ್ನು ವರಿಸಿದ ಹಾರ್ದಿಕ್ ಪಟೇಲ್ ಗುಜರಾತಿನ ಸುರೇಂದ್ರ ನಗರ ಜಿಲ್ಲೆಯ ದಿಗ್ಸರ್ ಗ್ರಾಮದಲ್ಲಿ ಸರಳವಾಗಿ ದೇವಸ್ತಾನದಲ್ಲಿ ಮದುವೆಯಾದರು. ಕಿಂಜಲ್ ಪರೀಕ್ ಮೂಲತಃ ವಿರಂ ಗಾಮ್ ನವರಾಗಿದ್ದು ಸದ್ಯ ಕಾನೂನು ಅಧ್ಯಯನವನ್ನು ಮಾಡುತ್ತಿದ್ದಾರೆ.
ಹಾರ್ದಿಕ್ ಪಟೇಲ್ ಅಹ್ಮದಾಬಾದ್ ಜಿಲ್ಲೆಯ ವಿರಾಂಗಾಮ್ ಪಟ್ಟಣದ ಹತ್ತಿರದ ಚಂದನ್ ನಗರಿಯವರು.ಹಾರ್ದಿಕ್ ಕುಟುಂಬವು ಕಡವಾ ಪಟಿದಾರ್ ದೇವಿಯಾದ ಉಮಿಯಾ ಧಾಮ್ ದೇವಸ್ತಾನದಲ್ಲಿ ಮದುವೆ ಕಾರ್ಯಕ್ರಮ ಏರ್ಪಿಡಿಸಲು ಇಚ್ಚಿಸಿದ್ದರು.ಆದ್ರೆ ಉಂಜಾಗೆ ಪ್ರವೇಶಿಸಲು ಕೋರ್ಟ್ ನಿಂದ ಅನುಮತಿ ಇಲ್ಲದಾದ ಕಾರಣಕ್ಕಾಗಿ ಅವರು ದಿಗ್ಸರ್ ನಲ್ಲಿ ಮದುವೆಯಾದರು ಎನ್ನಲಾಗಿದೆ.