ಇತ್ತೀಚಿನ ದಿನಗಳಲ್ಲಿ ವಿಚಿತ್ರ ಆಹಾರ ಸಂಯೋಜನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟ್ರೆಂಡ್ ಆಗಿವೆ. ಈ ಕೆಲವು ಆಹಾರಗಳು ನಿಜವಾಗಿಯೂ ಆಸಕ್ತಿದಾಯಕವಾಗಿದ್ದರೂ, ಕೆಲವು ತುಂಬಾ ಚಮತ್ಕಾರಿಯಾಗಿರುತ್ತವೆ. ಇದು ಆಹಾರ ಪ್ರಿಯರನ್ನು ಅಚ್ಚರಿಗೊಳಿಸುತ್ತದೆ. 
ಚಾಕೊಲೇಟ್ ಮ್ಯಾಗಿ ಮತ್ತು ರಸಗುಲ್ಲಾ ಚಾಟ್ ನಂತರ, ಮತ್ತೊಂದು ವಿಚಿತ್ರ ಖಾದ್ಯ ವೈರಲ್ ಆಗಿದೆ. ಸಾಮಾನ್ಯವಾಗಿ ಬಿಳಿ ಬಣ್ಣದ ಇಡ್ಲಿಯನ್ನು ನೋಡಿದ್ದೇವೆ ಮತ್ತು ಅದನ್ನು ಅನೇಕ ಬಾರಿ ಸವಿದಿದ್ದೇವೆ. ಆದರೆ ನೀವು ಎಂದಾದರೂ ಕಪ್ಪು ಬಣ್ಣದ ಇಡ್ಲಿ (Black Idli) ತಿಂದಿದ್ದೀರಾ?


COMMERCIAL BREAK
SCROLL TO CONTINUE READING

ಇಡ್ಲಿ ದಕ್ಷಿಣ ಭಾರತೀಯ ಆಹಾರಗಳ ಅದ್ಭುತ ಭಕ್ಷ್ಯಗಳಲ್ಲಿ ಒಂದಾಗಿದೆ. ಜನರು ಇದನ್ನು ಬೆಳಗಿನ ಉಪಾಹಾರ  ದಲ್ಲಿ ಮಾತ್ರವಲ್ಲದೆ   ರಾತ್ರಿಯ ಊಟ ಮತ್ತು ಮಧ್ಯಾಹ್ನದ ಊಟದಲ್ಲಿಯೂ ತಿನ್ನಲು ಇಷ್ಟಪಡುತ್ತಾರೆ. ಇಡ್ಲಿಯನ್ನು ಆರೋಗ್ಯಕರ ಆಹಾರವೆಂದು ಪರಿಗಣಿಸಲಾಗಿದೆ. ಆದರೆ, ಇಡ್ಲಿಯನ್ನು ವಿಚಿತ್ರ ರೀತಿಯಲ್ಲಿ ತಯಾರಿಸುತ್ತಿರುವುದನ್ನು ನೋಡಿದ ಜನರು ಅಸಮಾಧಾನಗೊಂಡಿದ್ದಾರೆ. ಈ ಇಡ್ಲಿಯ ಹೆಸರನ್ನು 'ಕಪ್ಪು ಡಿಟಾಕ್ಸ್ ಇಡ್ಲಿ' ಎಂದು ನೀಡಲಾಗಿದೆ.


 



 


ಕಪ್ಪು ಡಿಟಾಕ್ಸ್ ಇಡ್ಲಿ (black detox Idli) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಬೀದಿಬದಿ ಆಹಾರ ವ್ಯಾಪಾರಿಯೊಬ್ಬರು ಕಪ್ಪು ಬಣ್ಣದ ದ್ರಾವಣವನ್ನು ಪ್ಲೇಟ್‌ನಲ್ಲಿ ಸಣ್ಣ ತುಂಡುಗಳಾಗಿ ಸುರಿಯುತ್ತಿರುವುದು ಕಂಡುಬಂದಿದೆ. ನಂತರ ಅವರು ಬೇಯಿಸಿದ ಇಡ್ಲಿಗಳ ಮೇಲೆ ತುಪ್ಪವನ್ನು ಸುರಿಯುತ್ತಾರೆ. ಕೆಲವು ಮಸಾಲೆಗಳನ್ನು ಸಿಂಪಡಿಸುತ್ತಾರೆ ಮತ್ತು ಅವುಗಳನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸುತ್ತಾರೆ.


ಫುಡ್ ಬ್ಲಾಗರ್‌ಗಳಾದ ವಿವೇಕ್ ಮತ್ತು ಆಯೇಶಾ ಅವರು ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. 'ನೀವು ಎಂದಾದರೂ ಕಪ್ಪು ಇಡ್ಲಿಯನ್ನು ತಿಂದಿದ್ದೀರಾ?' ಎಂಬ ಶೀರ್ಷಿಕೆಯನ್ನು ಹೊಂದಿದೆ. ಈ ವಿಡಿಯೋ ನೋಡಿದ ಜನರು ವಿಚಿತ್ರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. 


ಇದನ್ನೂ ಓದಿ: ಅಮಾವಾಸ್ಯೆಯಂದು ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ಖರೀದಿಸಬೇಡಿ, ಕೊಂಡರೆ ತೊಂದರೆ ಫಿಕ್ಸ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.