ನವದೆಹಲಿ : ಕಾಳಿಂಗ ಸರ್ಪವನ್ನು ನೋಡುವುದಿರಲಿ ಅದರ ಹೆಸರು ಕೇಳಿದರೆ ಸಾಕು ಕೈ ಕಾಲು ನಡುಗುತ್ತದೆ. ಅಂಥದರಲ್ಲಿ ಕಾಳಿಂಗಸರ್ಪ (Black cobra) ಎದುರು ಬಂದು ನಿಂತರೆ ಸ್ಥಿತಿ ಏನಾಗಬೇಕು ? ಉಹಿಸಿಕೊಲ್ಲುವುದು ಕೂಡಾ ಕಷ್ಟ. ಯಾಕೆಂದರೆ ಕಾಳಿಂಗ ಸರ್ಪ ಅತ್ಯಂತ ವಿಷಕಾರಿ. ಅದು ದೂರದಲ್ಲಿ ಎಲ್ಲೋ ಇದೆ ಎಂದರೂ ಬದುಕುಳಿದರೆ ಸಾಕು ಎಂದು ಎದ್ದು, ಬಿದ್ದು ಓಡುವ ಸ್ಥಿತಿ. ಆದರೆ  ಇಲ್ಲೊಂದು ವಿಡಿಯೋ (Viral video) ಇದೆ.  ಈ ವಿಡಿಯೋ ನೋಡಿದರೆ ಆಶ್ಚರ್ಯವಾಗುತ್ತದೆ. ಇಲ್ಲಿ ವ್ಯಕ್ತಿಯೊಬ್ಬರು ದಣಿದು ಬಂದ ಸರ್ಪಕ್ಕೆ ಗಾಜಿನ ಲೋಟದಲ್ಲಿ ನೀರು (Snake Drinks Water From Glass) ನೀಡಿದ್ದಾರೆ. ಹಾವು ಕೂಡಾ ನೀರನ್ನು ಗಟನೆ ಗಟನೆ ಕುದಿದು ಮುಗಿಸಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಲೋಟದಿಂದ ನೀರು ಕುಡಿಯುತ್ತಿದೆ ಕಾಳಿಂಗ : 
ವೈರಲ್ ಆಗಿರುವ ವಿಡಿಯೋದಲ್ಲಿ (Viral video), ವ್ಯಕ್ತಿಯೊಬ್ಬರು ಕೈಯಲ್ಲಿ ನೀರು ತುಂಬಿದ ಲೋಟವನ್ನು ಹಿಡಿದಿರುವುದನ್ನು ಕಾಣಬಹುದು. ಆ ಲೋಟದ ಪಕ್ಕದಲ್ಲಿಯೇ ಕಾಳಿಂಗ ಸರ್ಪ (Black Cobra) ಕೂಡಾ ಕಣ್ಣಿಗೆ ಬೀಳುತ್ತದೆ.  ಈ ವೀಡಿಯೋ ನೋಡಿದರೆ ಮೈ ಜುಮ್ಮೆನ್ನುತ್ತದೆ. ಈ ಸರ್ಪ ಅತ್ಯಂತ ಉದ್ದವಾಗಿದೆ. ಈ ಹಾವು ಕಿಟಕಿಯ ಮೂಲಕ ಮನೆಯ ಒಳಗೆ ಪ್ರವೀಶಿಸಲು ಪ್ರಯತ್ನಿಸುತ್ತಿದೆ. ಅದೇ ಸಮಯದಲ್ಲಿ ವ್ಯಕ್ತಿಯೊಬ್ಬರು ಗಾಜಿನ ಲೋಟದಲ್ಲಿ ನೀರು (cobra drinking water from glass) ನೀಡುವುದನ್ನು ಕಾಣಬಹುದು. ಹಾವು ಲೋಟದಿಂದ ನೀರು ಕುಡಿಯುತ್ತದೆ. ಆದರೆ ವ್ಯಕ್ತಿಗೆ ಏನೂ ಮಾಡುವುದಿಲ್ಲ. ಅಂದಹಾಗೆ, ಇದೊಂದು ವಿಷಕಾರಿ ಹಾವು. ಇದು ಕಚ್ಚುವುದು ಮಾತ್ರವಲ್ಲ, , ವಿಷವನ್ನು  ಉಗುಳಿದರೂ  ಕ್ಷಣ ಮಾತ್ರದಲ್ಲಿ ಉದುರಿಗಿರುವವನ ಪ್ರಾಣ ಹೋಗುತ್ತದೆ.  


ಇದನ್ನೂ ಓದಿ : Vedio : ಬಟ್ಟೆ ಒಣಗಿಸಲು ಬಾಲ್ಕನಿಗೆ ಬಂದು 19ನೇ ಮಹಡಿಯಿಂದ ಜಾರಿ ಬಿದ್ದ ವೃದ್ದೆ ಮುಂದೆ...?




 
ವಿಡಿಯೋ ವೀಕ್ಷಿಸಿದವರಿಗೆ ಅಚ್ಚರಿ :
ಈ ವೀಡಿಯೋ (video) ನೋಡಿ ಕೆಲವರಿಗೆ ಅಚ್ಚರಿಯಾದರೆ, ಕೆಲವರು ವಿಚಿತ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹಾವಿನ ಈ ವಿಶಿಷ್ಟ ವೀಡಿಯೊವನ್ನು Royal_pythons_ ಹೆಸರಿನ Instagram ಪುಟದಲ್ಲಿ ಹಂಚಿಕೊಳ್ಳಲಾಗಿದೆ.  ವಾರದ ಹಿಂದೆ ಅಪ್‌ಲೋಡ್ ಮಾಡಿರುವ ಈ ವಿಡಿಯೋ ಇದುವರೆಗೆ 1 ಲಕ್ಷದ 22 ಸಾವಿರಕ್ಕೂ ಹೆಚ್ಚು ವ್ಯೂಸ್ ಬಂದಿದೆ.  ಈ ವೀಡಿಯೊವನ್ನು ತುಂಬಾ ಇಷ್ಟಪಡುತ್ತಿದ್ದಾರೆ.


ಇದನ್ನೂ ಓದಿ : Viral Video: ಹೀಗೂ ಸಹ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಬಹುದು, ವಿಡಿಯೋ ಕಂಡು ನಿಮಗೂ ಅಚ್ಚರಿ ಆಗಬಹುದು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.