Weather Update: ದೇಶದಲ್ಲಿ ಕೆಲ ಭಾಗಗಳಲ್ಲಿ ಮುಂದುವರೆದ ಹೀಟ್ವೇವ್, ಈ ರಾಜ್ಯಗಳಲ್ಲಿ ಮಳೆ ಮುನ್ಸೂಚನೆ ನೀಡಿದ ಐಎಂಡಿ
Weather Update: ದೇಶಾದ್ಯಂತ ಕೆಲ ರಾಜ್ಯಗಳಲ್ಲಿ ಹೀಟ್ವೇವ್ ಮುಂದುವರೆದಿದ್ದರೂ ಗುರುವಾರದಿಂದ (ಏಪ್ರಿಲ್ 11) ದೇಶದ ಅನೇಕ ಭಾಗಗಳಲ್ಲಿ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.
Weather Update: ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕೇರಳ ಸೇರಿದನೇ ದೇಶದ ಕೆಲವು ಭಾಗಗಳಲ್ಲಿ ಇಂದಿನಿಂದ ಮುಂಗಾರು ಆರಂಭವಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ (Indian Meteorological Department) ಭವಿಷ್ಯ ನುಡಿದಿದೆ. ಐಎಂಡಿ ವರಧಿಯ ಪ್ರಕಾರ, ಇಂದಿನಿಂದ (ಏಪ್ರಿಲ್ 11) ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಸೇರಿದಂತೆ ಕೆಲವು ರಾಜ್ಯಗಳ್ಳಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಸೋಮವಾರದಿಂದ (ಏಪ್ರಿಲ್ 8) ಕೆಲವು ರಾಜ್ಯಗಳಲ್ಲಿ ತಾಪಮಾನ ಕುಸಿದಿರುವ ಬಗ್ಗೆ ವರದಿ ಮಾಡಿರುವ ಭಾರತೀಯ ಹವಾಮಾನ ಇಲಾಖೆ (Indian Meteorological Department), ಪಶ್ಚಿಮ ಬಂಗಾಳದ ಜಲ್ಪೈಗುರಿ ಮತ್ತು ಅಲಿಪುರ್ದೂರ್ ಜಿಲ್ಲೆಗಳು ಹಾಗೂ ಸಿಕ್ಕಿಂನ ಮಂಗನ್ ಜಿಲ್ಲೆಯಲ್ಲಿ ಇಂದು ಆಲಿಕಲ್ಲು, ಚಂಡಮಾರುತ, ಮಿಂಚು ಮತ್ತು ಲಘು ಮಳೆಯಾಗುವ ನಿರೀಕ್ಷೆಯಿದೆ ಎಂದು ಭವಿಷ್ಯ ನುಡಿದಿದೆ.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಎಲ್ಲೆಲ್ಲಿ ಬಿಸಿಲಿನ ವಾತಾರಾವಣ ಮುಂದುವರೆಯಲಿದೆ? ಯಾವ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ತಿಳಿಯೋಣ...
ದೇಶದ ಈ ಭಾಗಗಳಲ್ಲಿ ತಾಪಮಾನ ಹೆಚ್ಚಳ:
ಸೌರಾಷ್ಟ್ರ ಮತ್ತು ಕಚ್‌ನ ಪ್ರತ್ಯೇಕ ಪ್ರದೇಶಗಳಲ್ಲಿ ಏಪ್ರಿಲ್ 11 ರವರೆಗೆ ಶಾಖದ ಅಲೆಗಳು ಮೇಲುಗೈ ಸಾಧಿಸುತ್ತವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಂದಿನ ವಾರ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ (Meteorological Department Forecast) ನೀಡಿದೆ. ಆದಾಗ್ಯೂ, ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಏಪ್ರಿಲ್ 13 ಮತ್ತು 14 ರಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
ಕರ್ನಾಟಕ ಹವಾಮಾನ ವರದಿ (Karnataka Weather Report):
ಕರ್ನಾಟಕದಲ್ಲಿ (Karnataka) ನಾಳೆಯಿಂದ ಮುಂದಿನ ಎರಡು ದಿನಗಳವರೆಗೆ ಗುಡುಗು ಸಹಿತ ಚದುರಿದಂತೆ ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ, ಮುಂದಿನ ವಾರದಿಂದ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಇದರಿಂದ ಇಷ್ಟು ದಿನಗಳಿಂದ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಪರಿಹಾರ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ರಾಜ್ಯಗಳಲ್ಲಿ ಮಳೆ ಮುನ್ಸೂಚನೆ:
ಹವಾಮಾನ ಇಲಾಖೆಯ ಪ್ರಕಾರ, ಪಶ್ಚಿಮ ಬಂಗಾಳದ (West Bengal) ಜಲ್ಪೈಗುರಿ ಮತ್ತು ಅಲಿಪುರ್ದುವಾರ್ ಪ್ರದೇಶಗಳು ಮತ್ತು ಸಿಕ್ಕಿಂನ ಮಂಗನ್ ಜಿಲ್ಲೆಯಲ್ಲಿ ಇಂದು (ಏಪ್ರಿಲ್ 11) ಬಹುಶಃ ಗುಡುಗು ಸಹಿತ ಸಾಧಾರಣ ಮಳೆ ಸಾಧ್ಯತೆ ಇದೆ. ಇದಲ್ಲದೆ, ಮಧ್ಯಪ್ರದೇಶದಲ್ಲಿ, ಕಟ್ನಿ, ಜಬಲ್‌ಪುರ್, ಚಿಂದ್ವಾರ, ಬಾಲಘಾಟ್, ಉಮಾರಿಯಾ, ಸಿಯೋನಿ, ಶಹದೋಲ್, ಬೆತುಲ್, ದಾಮೋಹ್, ಹೋಶಂಗಾಬಾದ್, ನರಸಿಂಗಪುರ ಮತ್ತು ಸೆಹೋರ್‌ಗಳಲ್ಲಿ ಮಳೆಯಾಗುವ ಸಾಧ್ಯತೆ ಬಗ್ಗೆ ಐಎಂಡಿ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ- Bus Accident: 50 ಅಡಿ ಕಂದಕಕ್ಕೆ ಉರುಳಿದ ಬಸ್: 15 ಜನ ಸಾವು, 10 ಮಂದಿ ನಾಪತ್ತೆ
ಮಹಾರಾಷ್ಟ್ರದ ಅಕೋಲಾ, ಅಮರಾವತಿ, ನಾಂದೇಡ್, ವಾರ್ಧಾ, ಯವತ್ಮಾಲ್ ಮತ್ತು ಹಿಂಗೋಲಿಯಲ್ಲಿ ಗುರುವಾರವೂ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ, ಏಪ್ರಿಲ್ 13-16 ರ ಅವಧಿಯಲ್ಲಿ ವಾಯುವ್ಯ ಭಾರತದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಬಹುದು ಎಂದು ಭವಿಷ್ಯ ನುಡಿದಿದೆ. ಇದೇ ವೇಳೆ,
ಏಪ್ರಿಲ್ 13 ಮತ್ತು 14 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆ/ಹಿಮಪಾತವನ್ನು ನಿರೀಕ್ಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಏಪ್ರಿಲ್ 13 ರಂದು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪ್ರತ್ಯೇಕವಾದ ಮಳೆ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.