Ancient Temple in Malappuram : ಕೇರಳದಲ್ಲಿ ಮುಸ್ಲಿಂ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿದೆ.ಇದೀಗ ಇಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಯ ಕಥೆಯೊಂದು ಬೆಳಕಿಗೆ ಬಂದಿದೆ. ಮುತುವಲ್ಲೂರು ಶ್ರೀ ದುರ್ಗಾ ಭಗವತಿ ದೇವಸ್ಥಾನವು ಕೇರಳದ ಮಲಪ್ಪುರಂ ಜಿಲ್ಲೆಯ ಮುತುವಲ್ಲು ಗ್ರಾಮದಲ್ಲಿದೆ. ಈ ಮಂದಿರ ಸುಮಾರು 400 ವರ್ಷಗಳಷ್ಟು ಹಳೆಯದು. ಈ ಪುರಾತನ ದೇವಾಲಯದ ಜೀರ್ಣೋದ್ಧಾರ ಕಾರ್ಯ ಇದೀಗ ನಡೆಯುತ್ತಿದೆ.ವಿಸ್ಮಯಕಾರಿ ಸಂಗತಿ ಎಂದರೆ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಹಿಂದೂಗಳ ಜೊತೆಗೆ ಮುಸ್ಲಿಂ ಸಮುದಾಯದವರೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.ಕೇರಳದ ಈ ದೇವಸ್ಥಾನದಲ್ಲಿ ಭಗವತಿ ದೇವಿಯ ಹೊಸ ವಿಗ್ರಹವನ್ನು ಸ್ಥಾಪಿಸಲಾಗುವುದು.ಜೊತೆಗೆ ದೇವಸ್ಥಾನದ ದುರಸ್ತಿ ಕಾರ್ಯವೂ ನಡೆಯುತ್ತಿದೆ.ಈ ಕಾರ್ಯಕ್ಕೆ ಮುಸ್ಲಿಂ ಜನರೂ ಮುಕ್ತವಾಗಿ ದೇಣಿಗೆ ನೀಡುತ್ತಿದ್ದಾರೆ.
ಈ ದೇವಾಲಯವು ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶದಲ್ಲಿದೆ.ಇದರಿಂದಾಗಿ ಗ್ರಾಮದಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅಥವಾ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ದೇಣಿಗೆ ಸಂಗ್ರಹಿಸಿದಾಗ ಮುಸ್ಲಿಂ ಸಮುದಾಯದವರು ಮುಂದೆ ಬಂದು ದೇಣಿಗೆ ನೀಡುತ್ತಾರೆ.ಕಳೆದ ಕೆಲವು ವರ್ಷಗಳಿಂದ ದೇವಸ್ಥಾನಕ್ಕೆ ಮುಸ್ಲಿಂ ಸಮುದಾಯದ ಜನರಿಂದ 30 ಲಕ್ಷಕ್ಕೂ ಹೆಚ್ಚು ದೇಣಿಗೆ ಬಂದಿದೆ.ಇಷ್ಟೇ ಅಲ್ಲ, ವಿಶೇಷ ಹಬ್ಬಗಳಂದು ದೇವಸ್ಥಾನದಲ್ಲಿ ನಡೆಯುವ ಹಬ್ಬಕ್ಕೆ ಮುಸಲ್ಮಾನರಿಂದಲೇ ತರಕಾರಿ ಇತ್ಯಾದಿಗಳನ್ನು ನೀಡಲಾಗುತ್ತದೆ.ಮಲಬಾರ್ ದೇವಸ್ವಂ ಮಂಡಳಿ ಈ ದೇವಾಲಯದ ನಿರ್ವಹಣೆ ಮಾಡುತ್ತಿದೆ.
ಇದನ್ನೂ ಓದಿ : Bus Accident: 50 ಅಡಿ ಕಂದಕಕ್ಕೆ ಉರುಳಿದ ಬಸ್: 15 ಜನ ಸಾವು, 10 ಮಂದಿ ನಾಪತ್ತೆ
ಮೇ ತಿಂಗಳಲ್ಲಿ ಹೊಸ ಪ್ರತಿಮೆ ಸ್ಥಾಪನೆ :
2015 ರಿಂದ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು, ಮುಸ್ಲಿಂ ಸಮುದಾಯದ ಜನರು ಇದಕ್ಕೆ ನಿರಂತರವಾಗಿ ಕೊಡುಗೆ ನೀಡಿದ್ದಾರೆ. ಇದೀಗ ಮೇ ತಿಂಗಳಲ್ಲಿ ದೇವಸ್ಥಾನದಲ್ಲಿ ನೂತನ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಇದಕ್ಕಾಗಿ ಮತ್ತೊಮ್ಮೆ ಗ್ರಾಮದ ಜನರಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ.ಈ ಕಾರ್ಯದಲ್ಲಿ ಮುಸ್ಲಿಂ ಜನಾಂಗ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.
ಮಸೀದಿ ಕಟ್ಟಲು ದೇವಸ್ಥಾನದ ಭೂಮಿ :
ಈ ಹಿಂದೆ ದೇವಸ್ಥಾನವು ಮಸೀದಿ ನಿರ್ಮಿಸಲು ಭೂಮಿಯನ್ನು ನೀಡಿತ್ತು.ಸ್ಥಳೀಯ ನಿವಾಸಿಗಳ ಪ್ರಕಾರ,ಮೊದಲು ಕೊಂಡೊಟ್ಟಿ ಜನರು ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ತಿರುರಂಗಡಿಗೆ ಹೋಗಬೇಕಾಗಿತ್ತು.ಈ ಸ್ಥಳವು ದೂರದಲ್ಲಿರುವ ಕಾರಣ, ಅನೇಕ ಬಾರಿ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿರಲಿಲ್ಲ.ಹೀಗಾಗಿ ಶುಕ್ರವಾರದ ಪ್ರಾರ್ಥನೆಯನ್ನು ಮಾಡಲು ಸಾಧ್ಯವಾಗಲಿಲ್ಲ.ಆಗ ಗ್ರಾಮದ ಜನರು ಗ್ರಾಮದಲ್ಲಿಯೇ ಮಸೀದಿ ನಿರ್ಮಿಸಬೇಕು ಎಂದು ನಿರ್ಧರಿಸಿದರು.ನಂತರ ಇದಕ್ಕಾಗಿ ದೇವಸ್ಥಾನವನ್ನು ಸಂಪರ್ಕಿಸಲಾಯಿತು. ಆ ಸಂದರ್ಭದಲ್ಲಿ ದೇವಸ್ಥಾನವು ಮಸೀದಿಯನ್ನು ನಿರ್ಮಿಸಲು ಸ್ವಯಂಪ್ರೇರಿತವಾಗಿ ಭೂಮಿಯನ್ನು ನೀಡಿತ್ತು.
ಇದನ್ನೂ ಓದಿ : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ ಪಾರ್ಟಿ...!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.