ನವದೆಹಲಿ: ಹಲವಾರು ದಿನಗಳ ಆರ್ದ್ರತೆಯ ನಂತರ ಕರ್ನಾಟಕ ಮತ್ತು ಕೇರಳದಲ್ಲಿ ಭಾನುವಾರ ಭಾರಿ ಮಳೆ (Heavy Rain)ಯಾಗಿದೆ. ಈ ಎರಡು ರಾಜ್ಯಗಳಲ್ಲಿ ಇನ್ನೆರಡು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ, ಈ ಕಾರಣದಿಂದಾಗಿ ಎರಡೂ ರಾಜ್ಯಗಳ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ (Red alert) ಘೋಷಿಸಲಾಗಿದೆ.


COMMERCIAL BREAK
SCROLL TO CONTINUE READING

ಹವಾಮಾನ ಇಲಾಖೆಯ ಪ್ರಕಾರ ಭಾನುವಾರ ಬೆಳಿಗ್ಗೆ ತನಕ, ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಂಡಿದೆ. ಇದರಿಂದಾಗಿ ಸುತ್ತಮುತ್ತಲಿನ ಕರಾವಳಿ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಭಾರಿ ಮಳೆಯಿಂದಾಗಿ ಕೇರಳ (Kerala)ದ ಎಂಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು 10 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ.


ಮುವಾಟ್ಟುಪುಳ ನದಿ ಪ್ರವಾಹ ಮಟ್ಟವನ್ನು ತಲುಪುತ್ತಿದ್ದು, ಎರ್ನಾಕುಲಂ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಪ್ರವಾಹ (Flood)ದ ಭೀತಿ ಉಂಟಾಗಿದೆ ಎಂದು ಎರ್ನಾಕುಲಂ ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ.


ರಾತ್ರಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ, ನೆಲಕ್ಕುರುಳಿದ ಮರಗಳು, ಮನೆಗಳಿಗೆ ನುಗ್ಗಿದ ರಾಜಕಾಲುವೆ ನೀರು


ಇದಲ್ಲದೆ ನೆರೆಯ ತೆಲಂಗಾಣದಲ್ಲಿ ಇಂದು ಅನೇಕ ಭಾಗಗಳಲ್ಲಿ ಭಾರಿ ಮಳೆಯಾಗಬಹುದು. ರಾಜ್ಯದ ಆದಿಲಾಬಾದ್, ಕರೀಂನಗರ, ನಿಜಾಮಾಬಾದ್, ವಾರಂಗಲ್ ಮತ್ತು ಖಮ್ಮಂನಲ್ಲಿ ಬಲವಾದ ಮಳೆಯಾಗುವ ಸಾಧ್ಯತೆಯಿದ್ದು ಜಿಲ್ಲೆಯ ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಅಧಿಕಾರಿಗಳನ್ನು ಜಾಗರೂಕರಾಗಿರಲು ಸರ್ಕಾರ ನಿರ್ದೇಶಿಸಿದೆ.


ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಇಂದು ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಮುಂದಿನ ಎರಡು-ಮೂರು ದಿನಗಳವರೆಗೆ ಈ ಭಾಗಗಳಲ್ಲಿ 45-55 ಕಿ.ಮೀ ವೇಗದಲ್ಲಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಸೆಪ್ಟೆಂಬರ್ 22 ರೊಳಗೆ ಮೀನುಗಾರರಿಗೆ ಸಮುದ್ರಕ್ಕೆ ಹೋಗಬೇಡಿ  ಎಂದು ಸೂಚಿಸಲಾಗಿದೆ ಎಂದು ಒಡಿಶಾ ಸರ್ಕಾರ ಮೀನುಗಾರರಿಗೆ ತಿಳಿಸಿದೆ. 


ಕಲ್ಯಾಣ ಕರ್ನಾಟಕ ಭಾಗದ ಜನ‌ ಹಿಂದುಳಿದವರೆಂಬ ಕೀಳರಿಮೆಯಿಂದ ಹೊರಬರಲಿ: ಬಿ.ಸಿ.ಪಾಟೀಲ್


ದೆಹಲಿ-ಎನ್‌ಸಿಆರ್ (Delhi-NCR)‌ನಲ್ಲಿ ಆರ್ದ್ರತೆಯ ಹೊರತಾಗಿಯೂ ಮುಂದಿನ ಎರಡು-ಮೂರು ದಿನಗಳವರೆಗೆ ಮಳೆಯಾಗುವ ಸಾಧ್ಯತೆಯಿಲ್ಲ. ಕಳೆದ 12 ದಿನಗಳಿಂದ ಇಲ್ಲಿ ಮಳೆಯಾಗಿಲ್ಲ. ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ ದೆಹಲಿ-ಎನ್‌ಸಿಆರ್‌ಗೆ ಇದುವರೆಗೆ ಸೆಪ್ಟೆಂಬರ್‌ನಲ್ಲಿ ಶೇ 78 ರಷ್ಟು ಕಡಿಮೆ ಮಳೆಯಾಗಿದೆ.