ನವದೆಹಲಿ :  Weather Forecast : ಪೂರ್ವ ಭಾರತದ ಅನೇಕ ರಾಜ್ಯಗಳಲ್ಲಿ ಇಂದಿನಿಂದಲೇ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಅರುಣಾಚಲ ಪ್ರದೇಶ, ಮೇಘಾಲಯ, ಅಸ್ಸಾಂ, ಮಣಿಪುರದಂತಹ ರಾಜ್ಯಗಳಲ್ಲಿ ಮುಂದಿನ 3 ದಿನಗಳಲ್ಲಿ ಭಾರಿ ಮಳೆಯಾಗುವ (heavy rain) ಸಾಧ್ಯತೆ ಇದೆ ಎನ್ನಲಾಗಿದೆ. ಮಾನ್ಸೂನ್ ದೇಶದ ಹಲವು ಭಾಗಗಳ ಮೂಲಕ ಹಾದು ಮಧ್ಯಸಾಗರವನ್ನೂ ದಾಟಿದೆ ಎಂದು ಹವಾಮಾನ ಇಲಾಖೆ ಭಾನುವಾರ ತಿಳಿಸಿದೆ. 


COMMERCIAL BREAK
SCROLL TO CONTINUE READING

ಎಲ್ಲೆ ಅಬ್ಬರಿಸಲಿದ್ದಾನೆ ವರುಣ :
- ಜೂನ್ 7 - ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರ ಮತ್ತು ಮಣಿಪುರದಲ್ಲಿ (Manipur) ಮಳೆಯಾಗುವ ಸಾಧ್ಯತೆಯಿದೆ. 
- ಜೂನ್ 8 - ಮಂಗಳವಾರ ಒಡಿಶಾ (Odisha) ಮತ್ತು  ಆಂಧ್ರಪ್ರದೇಶದಲ್ಲಿ ಭಾರೀ  ಮಳೆಯಾಗುವ ನಿರೀಕ್ಷೆ ಇದೆ. 
- ಜೂನ್ 9 - ಬುಧವಾರ ಅಸ್ಸಾಂ (Assam), ಮೇಘಾಲಯ, ಪಶ್ಚಿಮ ಬಂಗಾಳ (West Bengal), ಸಿಕ್ಕಿಂ ಮತ್ತು ಒಡಿಶಾದಲ್ಲಿ ಮಳೆಯಾಗಬಹುದು.
- ಜೂನ್ 10 - ಪಶ್ಚಿಮ ಬಂಗಾಳದಲ್ಲಿ ಗುರುವಾರ ಮಳೆಯಾಗುವ (Rain fall) ಸಾಧ್ಯತೆಯಿದೆ.


ಇದನ್ನೂ ಓದಿ : Rain in Karnataka : ರಾಜ್ಯಕ್ಕೆ ಮುಂಗಾರು ಪ್ರವೇಶದಿಂದ ಕರಾವಳಿ, ಮಲೆನಾಡಿನಲ್ಲಿ ಇಂದು ಭಾರೀ ಮಳೆ!


ಇನ್ನು ರಾಜ್ಯದಲ್ಲಿ ಈಗಾಗಲೇ ವರುಣ ಆರ್ಭಟ (Heavy rainfall) ಆರಂಭವಾಗಿದೆ.  ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೀದರ್, ಗದಗ , ಬೆಂಗಳೂರು ನಗರ (Bengaluru), ಕಲಬುರ್ಗಿ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ತುಮಕೂರು, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮಾತ್ರವಲ್ಲ ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರರಿಗೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. 


ಇದನ್ನೂ ಓದಿ : PM Narendra Modi : ಇಂದು ಸಂಜೆ 5ಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಷಣ!


ನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ