Rain In Delhi-NCR: ದೆಹಲಿ-ಎನ್‌ಸಿಆರ್‌ನಲ್ಲಿ ಭಾರೀ ಮಳೆ
Rainfall In Delhi-NCR: ಭಾರೀ ಮಳೆಯಿಂದಾಗಿ ದೆಹಲಿಯ ಹಲವು ರಸ್ತೆಗಳು ಜಲಾವೃತಗೊಂಡಿವೆ. ಜನರು ಪ್ರಯಾಣಿಸಲು ತೊಂದರೆ ಅನುಭವಿಸುತ್ತಿದ್ದಾರೆ.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಈಗಾಗಲೇ ರಾಜಧಾನಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಮಳೆಯಿಂದಾಗಿ, ತಾಪಮಾನ ಕಡಿಮೆಯಾಗಿದೆ ಮತ್ತು ಜನರು ಶಾಖದಿಂದ ಪರಿಹಾರ ಪಡೆದಿದ್ದಾರೆ.
ಒಂದೆಡೆ ಮಳೆಯಿಂದಾಗಿ ದೆಹಲಿಗರು ಶಾಖದಿಂದ ಪರಿಹಾರ ಪಡೆದಿದ್ದಾರೆ. ಮತ್ತೊಂದೆಡೆ ಸಂಚಾರ ವ್ಯವಸ್ಥೆಯಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ದೆಹಲಿಯ ಐಟಿಒ ಬಳಿ ರಸ್ತೆಯು ಜಲಾವೃತವಾಗಿದೆ. ಇದಲ್ಲದೇ ಆಜಾದ್ ಮಾರ್ಕೆಟ್ ಅಂಡರ್ ಪಾಸ್ ನಲ್ಲಿ 1.5 ಅಡಿಗಳವರೆಗೆ ನೀರು ಸಂಗ್ರಹವಾಗಿದೆ. ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ದೆಹಲಿ ಸಂಚಾರ ಪೊಲೀಸರು ಈ ಮಾರ್ಗಗಳಲ್ಲಿ ಹೋಗುವುದನ್ನು ತಪ್ಪಿಸಿ ಎಂದು ಸಲಹೆ ನೀಡಿದ್ದಾರೆ.
ಹವಾಮಾನ ಇಲಾಖೆಯ (IMD) ಪ್ರಕಾರ, ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ನಿರೀಕ್ಷೆಯಿದೆ ಎಂದು ಭವಿಷ್ಯ ನುಡಿದಿದೆ. ಶನಿವಾರದಂದು ದೆಹಲಿಯಲ್ಲಿ ದಿನವಿಡೀ ಮಳೆಯಾಗಲಿದೆ, ಇದರಿಂದಾಗಿ ದೆಹಲಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಹಲವು ಪ್ರದೇಶಗಳಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೇ ಎನ್ನಲಾಗಿದೆ.
ಇದನ್ನೂ ಓದಿ- ನಿಮ್ಮ ಡ್ರೈವಿಂಗ್ ಲೈಸನ್ಸ್ ಮರೆತಿದ್ದೀರಾ? ಟ್ರಾಫಿಕ್ ಪೋಲಿಸರಿಂದ ರಕ್ಷಿಸಿಕೊಳ್ಳಲು ಇಲ್ಲಿದೆ ಉಪಾಯ..!
ದೆಹಲಿ-ಎನ್‌ಸಿಆರ್‌ನಲ್ಲಿ (Delhi NCR) ಕಳೆದ ರಾತ್ರಿಯಿಂದ ಆರಂಭವಾಗಿರುವ ಮಳೆಯೂ ಮುಂಜಾನೆಯು ಮುಂದುವರೆದಿದೆ. ಅದಾಗ್ಯೂ ಮಳೆಯಿಂದಾಗಿ ಹಲವು ದಿನಗಳಿಂದ ಜನರನ್ನು ಕಾಡುತ್ತಿದ್ದ ಆರ್ದ್ರ ವಾತಾವರಣವು ಕೊನೆಗೊಂಡಿದೆ ಮತ್ತು ಸುದೀರ್ಘ ಮಳೆಯಿಂದಾಗಿ ವಾತಾವರಣವು ತಂಪಾಗಿದ್ದು ತಾಪಮಾನವು 27 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.
ಆದರೆ, ರಾತ್ರಿಯಿಡೀ ಸುರಿದ ಮಳೆಯಿಂದಾಗಿ ದೆಹಲಿಯ ಹಲವೆಡೆ ನೀರು ತುಂಬಿದೆ. ಇದರಿಂದಾಗಿ ಜನರು ಪ್ರಯಾಣಿಸಲು ಸಮಸ್ಯೆ ಎದುರಿಸುತ್ತಿದ್ದಾರೆ. ನಿರಂತರವಾಗಿ ಮಳೆಯಾಗುತ್ತಿರುವುದರಿಂದ ನೀರಿನ ಸಂಗ್ರಹದಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.
ಇದನ್ನೂ ಓದಿ- ಹ್ಯಾಕ್ ಮಾಡಲು ಸಾಧ್ಯವೇ ಇಲ್ಲದಂತಹ ಸ್ಟ್ರಾಂಗ್ ಪಾಸ್ ವರ್ಡ್ ಸೃಷ್ಟಿಸುವುದು ಹೇಗೆ..?
ಈ ಮೊದಲು ಭಾರತೀಯ ಹವಾಮಾನ ಇಲಾಖೆ ದೆಹಲಿ, ಬಹದ್ದೂರ್‌ಗಢ, ಫರಿದಾಬಾದ್, ಬಲ್ಲಭಗಢ, ಲೋನಿ ದೇಹತ್, ಗಾಜಿಯಾಬಾದ್, ಇಂದಿರಪುರಂ, ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಕೈತಾಲ್‌ನಲ್ಲಿ ಇಂದು ಭಾರೀ ಮಳೆಯಾಗಲಿದೆ ಎಂದು ಭವಿಷ್ಯ ನುಡಿದಿದೆ.
ಇದಲ್ಲದೇ ಹವಾಮಾನ ಇಲಾಖೆ ಪಾಣಿಪತ್, ಗಾನೌರ್, ಸೋನಿಪತ್, ನರ್ವಾನಾ, ಜಿಂದ್, ರೋಹ್ಟಕ್, ಜಜ್ಜರ್, ಪಲ್ವಾಲ್, ಕರ್ನಾಲ್, ಸಹರಾನ್ ಪುರ್, ದೇವಬಂದ್, ಮುಜಫರ್ ನಗರ, ಶಾಮ್ಲಿ, ಬಾರೌತ್ ಮತ್ತು ಬಾಗ್ ಪತ್ ನಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ