ನವದೆಹಲಿ: 2024 ರ ರಾಷ್ಟ್ರೀಯ ಚುನಾವಣೆಗೆ ವ್ಯವಸ್ಥಿತವಾಗಿ ಯೋಜಿಸಿ ಒಗ್ಗಟ್ಟಿನಿಂದ ಕೆಲಸ ಮಾಡಲು ಎಲ್ಲ ರೀತಿಯ ಒತ್ತಡಗಳನ್ನು ಮೀರಬೇಕೆಂದು ಸೋನಿಯಾ ಗಾಂಧೀ ಸರ್ವಪಕ್ಷದ ಸಭೆಯಲ್ಲಿ ಪ್ರತಿಪಕ್ಷಗಳಿಗೆ ಕರೆ ನೀಡಿದ್ದಾರೆ.
ಇದನ್ನೂ ಓದಿ: MK Stalin : ಸೋನಿಯಾ ಗಾಂಧಿ ಭೇಟಿಯಾದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್!
ಅಷ್ಟೇ ಅಲ್ಲದೆ ನಮ್ಮೆದುರಿಗೆ ಬೇರೆ ಯಾವುದೇ ಆಯ್ಕೆ ಇಲ್ಲ, ಆದ್ದರಿಂದ ರಾಷ್ಟ್ರದ ಹಿತಾಸಕ್ತಿ ನಮ್ಮ ಹಿತಾಸಕ್ತಿಗಳಿಗಿಂತ ಪ್ರಮುಖ ಆಧ್ಯತೆಗಳಾಗಬೇಕೆಂದು ಅವರು 19 ಪಕ್ಷಗಳ ಸಭೆಯಲ್ಲಿ ಹೇಳಿದ್ದಾರೆ.2024 ರ ಚುನಾವಣೆ ಅಂತಿಮ ಗುರಿಯಾಗಿದೆ,ಇದು ಒಂದು ಸವಾಲಾಗಿದೆ,ಯಾವುದೇ ಪರ್ಯಾಯವಿಲ್ಲದ ಕಾರಣ ಒಟ್ಟಾಗಿ ನಾವು ಕಾರ್ಯನಿರ್ವಹಿಸಬೇಕು ಎಂದು ಸೋನಿಯಾ ಗಾಂಧಿ (Sonia Gandhi) ಅವರು ಕರೆ ನೀಡಿದ್ದಾರೆ.
ಇದನ್ನೂ ಓದಿ: Sonia Gandhi : ಪ್ರಧಾನಿ ಮೋದಿಗೆ ಪತ್ರ ಬರೆದ ಕಾಂಗ್ರೆಸ್ ಅಧ್ಯಕ್ಷೆ!
"ಸ್ವಾತಂತ್ರ್ಯ ಚಳುವಳಿಯ ಮೌಲ್ಯಗಳು ಮತ್ತು ನಮ್ಮ ಸಂವಿಧಾನದ ತತ್ವಗಳು ಮತ್ತು ನಿಬಂಧನೆಗಳಲ್ಲಿ ನಂಬಿಕೆ ಹೊಂದಿರುವ ಸರ್ಕಾರವನ್ನು ನಮ್ಮ ದೇಶಕ್ಕೆ ನೀಡುವ ಏಕ ಮನಸ್ಸಿನ ಉದ್ದೇಶದಿಂದ ಯೋಜನೆಯನ್ನು ರೂಪಿಸಲು ವಿರೋಧ ಪಕ್ಷಗಳನ್ನು ಅವರು ಕೋರಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ