ತಿರುವನಂತಪುರಂ: Rains Havoc In Kerala - ಕೇರಳದಲ್ಲಿ ವರುಣನ ಆರ್ಭಟದಿಂದ ಭಾರಿ ಹಾಹಾಕಾರ ಸೃಷ್ಟಿಯಾಗಿದೆ. . ಧಾರಾಕಾರ ಮಳೆಗೆ ಇದುವರೆಗೆ 9 ​​ಜನರು ಸಾವನ್ನಪ್ಪಿದ್ದಾರೆ ಮತ್ತು 12 ಜನರು ನಾಪತ್ತೆಯಾಗಿದ್ದಾರೆ. ಮಳೆಯು ಜನರ ಸಮಸ್ಯೆಗಳನ್ನು ಹೆಚ್ಚಿಸಿದೆ. ಕೂಟಿಕಲ್ (Koottickal), ಕೊಟ್ಟಾಯಂ (Kottayam), ಇಡುಕ್ಕಿ  (Idduki) ಮತ್ತು ಕೊಕ್ಕಾಯಾರ್  (Kokkayar) ನಲ್ಲಿ ಎಲ್ಲಕ್ಕಿಂತ ಹೆಚ್ಚು ಮಳೆಯಾಗಿದೆ. 


COMMERCIAL BREAK
SCROLL TO CONTINUE READING

ಭಾರಿ ಮಳೆಗೆ ಭೂಕುಸಿತದಿಂದ ಪ್ರಾಣ ಕಳೆದುಕೊಂಡ ಜನರು
ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಭೂಕುಸಿತ ಸಂಭವಿಸಿ ಮೂರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇರಳ ಸರ್ಕಾರದಲ್ಲಿ (Kerala Government) ಮಂತ್ರಿಯಾಗಿರುವ ವಿ.ಎನ್. ವಾಸವಾನ್ ಹೇಳಿದ್ದಾರೆ. ಜನರನ್ನು ರಕ್ಷಿಸುವ ಕೆಲಸದಲ್ಲಿ ಸರ್ಕಾರ ತೊಡಗಿದೆ. ಇದಕ್ಕಾಗಿ ಸರ್ಕಾರ ಸಂಪೂರ್ಣ ಅಲರ್ಟ್ ಆಗಿದ್ದು, 12 ಜನರು ನಾಪತ್ತೆಯಾಗಿರುವ ವರದಿಗಳು ಕೂಡ ಕೇಳಿಬಂದಿವೆ ಎಂದು ಅವರು ಹೇಳಿದ್ದಾರೆ.


ರೆಡ್ ಅಲರ್ಟ್ ಜಾರಿಗೊಳಿಸಿದ ಹವಾಮಾನ ಇಲಾಖೆ
ಇದಕ್ಕೂ ಮೊದಲು ಶನಿವಾರ ಭಾರತೀಯ ಹವಾಮಾನ ಇಲಾಖೆ  (IMD) ಕೇರಳದ 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಇದೇವೇಳೆ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಹಾಗೂ 2 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಿ ಎಚ್ಚರಿಕೆಯನ್ನು ನೀಡಲಾಗಿದೆ.


ಇದನ್ನೂ ಓದಿ-SWR Recruitment 2021: ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ 904 ಹುದ್ದೆಗಳು ಖಾಲಿ, ಇಂದೇ ಅರ್ಜಿ ಸಲ್ಲಿಸಿ


ಕೇರಳದಲ್ಲಿ NDRF ತಂಡಗಳನ್ನು ನಿಯೋಜಿಸಲಾಗಿದೆ
ಭಾರೀ ಮಳೆಯ (Kerala Rain) ನಡುವೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ (NDRF) 11 ತುಕಡಿಗಳು, ಸೇನೆಯ ಎರಡು ತುಕಡಿಗಳು ಮತ್ತು ರಕ್ಷಣಾ ತಂಡಗಳ ಎರಡು ತುಕಡಿಗಳನ್ನು ಕೇರಳದಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ.


ಇದನ್ನೂ ಓದಿ-ಏನಿದು Masked Aadhaar card ? ಇದನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?


ಏತನ್ಮಧ್ಯೆ, ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ರಾಜ್ಯಸಭಾ ಸಂಸದ ವಿನಯ್ ವಿಶ್ವಂ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ದುರಂತದಲ್ಲಿ ಕೇರಳಕ್ಕೆ ಸಹಾಯ ಮಾಡುವಂತೆ ಅವರು ಮನವಿ ಮಾಡಿದ್ದಾರೆ. ನಿರಂತರ ಮಳೆಯಿಂದಾಗಿ ಕೇರಳದ ಪರಿಸ್ಥಿತಿ ಹದಗೆಟ್ಟಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಮನ ಹರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-EPFO Scam:100 ಕೋಟಿಗೂ ಅಧಿಕ ಮೊತ್ತದ ಹೇರಾಫೇರಿ, 11 ಅಧಿಕಾರಿಗಳ ಸಸ್ಪೆಂಡ್, ಮುಂದುವರೆದ CBI ತನಿಖೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ