EPFO Scam:100 ಕೋಟಿಗೂ ಅಧಿಕ ಮೊತ್ತದ ಹೇರಾಫೇರಿ, 11 ಅಧಿಕಾರಿಗಳ ಸಸ್ಪೆಂಡ್, ಮುಂದುವರೆದ CBI ತನಿಖೆ

EPFO Scam Update - EPFO ಈ ಉದ್ಯೋಗಿಗಳನ್ನು ತನ್ನ ಮುಂಬೈ ವಲಯದ ಕಚೇರಿಯಿಂದ ಅಮಾನತುಗೊಳಿಸಿದೆ.

Written by - Nitin Tabib | Last Updated : Oct 16, 2021, 10:00 PM IST
  • EPFO ನಲ್ಲಿ 100 ಕೋಟಿಗೂ ಅಧಿಕ ಮೊತ್ತದ ಹಗರಣ
  • ತನಿಖೆ ಕೈಗೊಂಡ CBI ಅಧಿಕಾರಿಗಳು.
  • ಇದುವರೆಗೆ 11 ಅಧಿಕಾರಿಗಳು ಸಸ್ಪೆಂಡ್.
EPFO Scam:100 ಕೋಟಿಗೂ ಅಧಿಕ ಮೊತ್ತದ ಹೇರಾಫೇರಿ, 11 ಅಧಿಕಾರಿಗಳ ಸಸ್ಪೆಂಡ್, ಮುಂದುವರೆದ CBI ತನಿಖೆ

EPFO Scam Latest Update -100 ಕೋಟಿಗೂ ಅಧಿಕ ಮೊತ್ತದ ಹೇರಾಫೇರಿ ಪ್ರಕರಣ  ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಅಂದರೆ EPFO  (Employees Provident Fund Organisation) ​​ನಲ್ಲಿ ಬೆಳಕಿಗೆ ಬಂದಿದೆ. ವಿಷಯ ಬೆಳಕಿಗೆ ಬಂದ ತಕ್ಷಣ  EPFO ತನ್ನ 11 ಉದ್ಯೋಗಿಗಳನ್ನು ಅಮಾನತುಗೊಳಿಸಿದೆ.  ಈ ಪೈಕಿ 8 ಅಧಿಕಾರಿಗಳನ್ನು ಈ ಮೊದಲೇ ಅಮಾನತುಗೊಳಿಸಲಾಗಿದೆ. ಉಳಿದ ಮೂವರಿಗೆ ಇತ್ತೀಚೆಗೆ ಕೆಲಸದಿಂದ ಹೊರಹೋಗುವ ಮಾರ್ಗವನ್ನು ತೋರಿಸಲಾಗಿದೆ.. ಇಪಿಎಫ್‌ಒ ಈ ಉದ್ಯೋಗಿಗಳನ್ನು ತನ್ನ ಮುಂಬೈ ವಲಯ ಕಚೇರಿಯಿಂದ ಅಮಾನತುಗೊಳಿಸಿದೆ.

ಆದರೆ, ಈ ಪ್ರಕರಣದ ಪ್ರಮುಖ ಆರೋಪಿಯು ಇನ್ನೂ ತಲೆಮರೆಸಿಕೊಂಡಿದ್ದಾನೆ. ಸಾಮಾನ್ಯ ಜನರ ಭವಿಷ್ಯ ನಿಧಿಗೆ ಸಂಬಂಧಿಸಿದ ಬಂಡವಾಳದಲ್ಲಿ ಇಂತಹ ದೊಡ್ಡ ದುರುಪಯೋಗದ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿದೆ ಮತ್ತು ಸಮಗ್ರ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ 100 ಕೋಟಿ ಹಗರಣ ಬೆಳಕಿಗೆ ಬಂದಿದೆ. ಈ ಅಂಕಿ-ಅಂಶಗಳಲ್ಲಿ ಏರಿಕೆಯಾಗುವ ಸಾಧ್ಯತೆಯನ್ನು ಕೂಡ ವರ್ತಿಸಲಾಗಿದೆ.

ಘಟನೆ ನಡೆದಿದ್ದಾದರು ಹೇಗೆ?
ಕರೋನವೈರಸ್ ಲಾಕ್‌ಡೌನ್‌ ಕಾಲಾವಧಿಯಲ್ಲಿ ಜನರಿಗೆ ಪರಿಹಾರವನ್ನು ನೀಡಲು EPFO ಖಾತೆಯಲ್ಲಿನ ಹಣ ಪಡೆಯುವಿಕೆಗೆ ಸಂಬಂಧಿಸಿದ ಷರತ್ತುಗಳನ್ನು ಸಡಿಲಗೊಳಿಸಿತ್ತು. ಇದರ ಲಾಭವನ್ನು ಪಡೆದುಕೊಂಡು ಇಂತಹ ದೊಡ್ಡ ಹಗರಣವನ್ನು ನಡೆಸಲಾಗಿದೆ. ಆದಾಯ ನಷ್ಟ ಮತ್ತು ಉದ್ಯೋಗ ನಷ್ಟದ ಕಾರಣ,  ಹೆಚ್ಚಿನ ಜನರು ತಮ್ಮ ಭವಿಷ್ಯ ನಿಧಿಯಿಂದ ಹಣವನ್ನು ಹಿಂಪಡೆಯಲು ಅರ್ಜಿ ದಾಖಲಿಸಿದ್ದಾರೆ.. ಅದನ್ನು ತಕ್ಷಣವೇ ಇತ್ಯರ್ಥಗೊಳಿಸಬೇಕು, ಹಿರಿಯ ಅಧಿಕಾರಿಗಳು ತಮ್ಮ ಲಾಗಿನ್ ಪಾಸ್‌ವರ್ಡ್‌ಗಳನ್ನು ಇತರ ಉದ್ಯೋಗಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕಡಿಮೆ ಸಮಯದಲ್ಲಿ ಗರಿಷ್ಠ ಸೆಟಲ್‌ಮೆಂಟ್ ಮಾಡುವುದು ಇದರ ಉದ್ದೇಶವಾಗಿತ್ತು. ಆದರೆ, ಕೆಲವು ಕಿರಿಯ ಉದ್ಯೋಗಿಗಳು ಇದರ ಲಾಭವನ್ನು ಪಡೆದು ಹಲವು ಖಾತೆಗಳಿಂದ ಹಣವನ್ನು ಹಿಂಪಡೆದಿದ್ದಾರೆ. 

ಇದನ್ನೂ ಓದಿ-UAN ನಂಬರ್ ಮರೆತಿದ್ದರೆ, online ಮೂಲಕವೇ ಮತ್ತೆ ಪಡೆದುಕೊಳ್ಳಬಹುದು, ಹೇಗೆ ತಿಳಿಯಿರಿ

ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಖಾತೆಗಳು
EPFO ಕಚೇರಿಯಲ್ಲಿ ಹಲವು ಖಾತೆಗಳು ಸ್ಥಗಿತಗೊಂಡಿವೆ ಈ ಖಾತೆಗಳಲ್ಲಿ ದೀರ್ಘ ಕಾಲದಿಂದ ಯಾವುದೇ ರೀತಿಯ ಕೊಡುಗೆ ಬಂದಿಲ್ಲ ಏಕೆಂದರೆ ಕಂಪನಿಗಳು ಮುಚ್ಚಿಹೋಗಿವೆ, ಈ ಖಾತೆಗಳನ್ನು ಹಣದ ದುರುಪಯೋಗಕ್ಕೆ ಬಳಸಲಾಗಿದೆ, ಈ ಖಾತೆಗಳನ್ನು ಆರೋಪಿ ಉದ್ಯೋಗಿಗಳು ಮುಚ್ಚಿದ್ದಾರೆ. ಆರಂಭದಲ್ಲಿ ಈ ಖಾತೆಗಳಿಗೆ ಕೆಲವು ಸಣ್ಣ ಬಂಡವಾಳವನ್ನು ಹಾಕಲಾಗಿದೆ ಮತ್ತು ನಂತರ ಸಂಪೂರ್ಣ ಹಣವನ್ನು ಕರೋನಾ ನೆಪದಲ್ಲಿ ನಕಲಿ ದಾಖಲೆಗಳ ಮೂಲಕ ಈ ಖಾತೆಗಳಿಂದ ಹಿಂಪಡೆಯಲಾಗಿದೆ. ಹಣವನ್ನು ಹಿಂಪಡೆಯಲಾದ ಕೆಲವು ಖಾತೆಗಳು ಸಣ್ಣ ಕಂಪನಿಗಳಿಗೆ ಸಂಬಂಧಿಸಿದ ಖಾತೆಗಳಾಗಿವೆ, ಇದರಲ್ಲಿ ಸಾಮಾನ್ಯ ಜನರ ಕೊಡುಗೆಗಳಿವೆ, ಈಗ ಅವರು ತಮ್ಮ ಹಣವನ್ನು ಮರಳಿ ಪಡೆಯಲು ತುಂಬಾ ಕಷ್ಟಪಡಬೇಕಾಗಲಿದೆ. ಆದ್ದರಿಂದ ಎಲ್ಲಾ ಇಪಿಎಫ್‌ಒ ಚಂದಾದಾರರು ಕಾಲಕಾಲಕ್ಕೆ ತಮ್ಮ ಬಾಕಿಯನ್ನುಪರಿಶೀಲಿಸಬೇಕು. ಅವರು ಬಡ್ಡಿ, ಆದಾಯ ಮತ್ತು ಉಳಿದ ಕೊಡುಗೆಯ ಮಾಹಿತಿಯನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರಬೇಕು ಎನ್ನಲಾಗಿದೆ.

ಇದನ್ನೂ ಓದಿ-EPFO Alert! ನೌಕರ ವರ್ಗದವರಿಗೆ ಅಲರ್ಟ್ ಜಾರಿಗೊಳಿಸಿದ EPFO, ಸಲಹೆ ಅನುಸರಿಸದೆ ಹೋದರೆ ಖಾತೆ ಖಾಲಿ

EPFOನಿಂದ ಜನಸಾಮಾನ್ಯರಿಗೆ ಭಾರಿ ನಿರೀಕ್ಷೆ ಇರುತ್ತದೆ
ದೇಶಾದ್ಯಂತ ಸುಮಾರು 6 ಕೋಟಿಗೂ ಅಧಿಕ ಗ್ರಾಹಕರು EPFOನಲ್ಲಿ ಖಾತೆ ಹೊಂದಿದ್ದಾರೆ. ಈ ಗ್ರಾಹಕರು ತಮ್ಮ ನಿವೃತ್ತಿ ನಂತರದ ಭವಿಷ್ಯಕ್ಕಾಗಿ ತಮ್ಮ ವೇತನದ ಸ್ವಲ್ಪ ಭಾಗವನ್ನು ಪಿಂಚಣಿ ಹಾಗೂ ಭವಿಷ್ಯನಿಧಿಗೆ ಕೊಡುಗೆಯನ್ನು ನೀಡುತ್ತಾರೆ. EPFO ಫಂಡ್ ಮ್ಯಾನೇಜರ್ ಬಳಿ 15 ಲಕ್ಷ ಕೋಟಿಗೂ ಅಧಿಕ ಕಾರ್ಪಸ್ ಇದೆ. 100 ಕೋಟಿಗೂ ಅಧಿಕ ಮೊತ್ತದ ಹಗರಣ ಚಂದಾದಾರರ ಮೇಲೆ ಯಾವುದೇ ಗಂಭೀರ ಪ್ರಭಾವ ಬೀರದಿದ್ದರೂ ಕೂಡ ಚಂದಾದಾರರ ಭರವಸೆಗೆ ಸ್ವಲ್ಪ ಮಟ್ಟಿಗಾದರೂ ಪೆಟ್ಟು ನೀಡಲಿದೆ.

ಇದನ್ನೂ ಓದಿ-EPFO ಚಂದಾದಾರರಿಗೆ ಮಹತ್ವದ ಸುದ್ದಿ! ಉದ್ಯೋಗಿಗಳು ತಮ್ಮ ಇಕ್ವಿಟಿ ಹೂಡಿಕೆ ನಿರ್ಧರಿಸಬಹುದೇ? ಇಲ್ಲಿದೆ ವಿವರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News