ಚೆನ್ನೈ: ದಕ್ಷಿಣ ಭಾರತದಲ್ಲಿ 'ನಿವಾರ್' ಚಂಡಮಾರುತ ಹಾದುಹೋದ ನಂತರ, ಈಗ ಮತ್ತೊಂದು ಅಪಾಯವು ಸಮೀಪಿಸುತ್ತಿದೆ.  ತಮಿಳುನಾಡಿನಲ್ಲಿ ಮತ್ತೊಂದು ಚಂಡಮಾರುತ ಉಂಟಾಗುವ ಸಾಧ್ಯತೆ ಇದೇ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ನಾಲ್ಕು ದಿನಗಳಲ್ಲಿ ತಮಿಳುನಾಡು, ಪುದುಚೇರಿ, ಕೇರಳ ಮತ್ತು ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಿ ಭಾರಿ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ (IMD) ಆತಂಕ ವ್ಯಕ್ತಪಡಿಸಿದೆ.


COMMERCIAL BREAK
SCROLL TO CONTINUE READING

ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ:
ಹವಾಮಾನ ಇಲಾಖೆ (ಐಎಂಡಿ) ಪ್ರಕಾರ ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ ಸೋಮವಾರ ರಾತ್ರಿಯ ಹೊತ್ತಿಗೆ ಹೆಚ್ಚು ಒತ್ತಡಕ್ಕೊಳಗಾದ ವಾಯು ವಲಯವಾಗಿ ಬದಲಾಗಬಹುದು ಮತ್ತು ಮುಂದಿನ ನಾಲ್ಕು ದಿನಗಳವರೆಗೆ ತಮಿಳುನಾಡು, ಪುದುಚೇರಿ, ಕೇರಳ ಮತ್ತು ಆಂಧ್ರಪ್ರದೇಶದ (Andhra Pradesh) ಕರಾವಳಿ ಪ್ರದೇಶಗಳಲ್ಲಿ ಮಧ್ಯಮದಿಂದ ಭಾರೀ ಮಳೆಯಾಗಬಹುದು ಎಂದು ಹೇಳಲಾಗಿದೆ.


218 ದೋಣಿಗಳಲ್ಲಿ 8 ದೋಣಿಗಳು ಮರಳಿವೆ:
ಪ್ರತಿಕೂಲ ಹವಾಮಾನದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಮುದ್ರಕ್ಕೆ ಇಳಿದಿರುವ 200ಕ್ಕೂ ಹೆಚ್ಚು ದೋಣಿಗಳನ್ನು ಸುರಕ್ಷಿತವಾಗಿ ಹಿಂದಿರುಗಿಸಲು ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದು ತಮಿಳುನಾಡಿನ (Tamil Nadu) ಮೀನುಗಾರಿಕೆ ಸಚಿವ ಡಿ.ಜಯಕುಮಾರ್ ಹೇಳಿದರು. ಇದಕ್ಕಾಗಿ ಕೋಸ್ಟ್ ಗಾರ್ಡ್ ಹಡಗುಗಳ ಸಹಾಯವನ್ನೂ ತೆಗೆದುಕೊಳ್ಳಲಾಗುತ್ತಿದೆ. ಇಲ್ಲಿಯವರೆಗೆ 218 ರಲ್ಲಿ 8 ದೋಣಿಗಳನ್ನು ಸುರಕ್ಷಿತವಾಗಿ ಹಿಂತಿರುಗಿಸಲಾಗಿದೆ. ತಮ್ಮ ಮೀನುಗಾರಿಕಾ ಬಂದರಿನಲ್ಲಿ ತಮಿಳುನಾಡಿನಿಂದ ದೋಣಿಗಳನ್ನು ಸುರಕ್ಷಿತವಾಗಿ ನಿಲ್ಲಿಸಲು ಅನುಮತಿ ಮತ್ತು ನೆರವು ನೀಡುವಂತೆ ಸಚಿವ ಡಿ.ಜಯಕುಮಾರ್ ಕೇರಳ, ಕರ್ನಾಟಕ, ಗೋವಾ ಮತ್ತು ಲಕ್ಷದ್ವೀಪ ಅಧಿಕಾರಿಗಳಿಗೆ ಮನವಿ ಮಾಡಿದರು.


ಈ ರಾಜ್ಯದಲ್ಲಿ ಕರೋನಾ RT-PCR ಟೆಸ್ಟ್ ಆಗಲಿದೆ ಅಗ್ಗ


ಅನೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗಬಹುದು!
ಹವಾಮಾನ ಇಲಾಖೆಯ ಪ್ರಕಾರ ಬಂಗಾಳಕೊಲ್ಲಿಯಲ್ಲಿ ಹುಟ್ಟಿದ ಈ ಚಂಡಮಾರುತವು ಡಿಸೆಂಬರ್ 2 ರಂದು ತಮಿಳುನಾಡು ತಲುಪಬಹುದು. ಈ ಕಾರಣದಿಂದಾಗಿ ಡಿಸೆಂಬರ್ 3 ರವರೆಗೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್ನಲ್ಲಿ ಭಾರಿ ಮಳೆಯಾಗಬಹುದು. ಟುಟಿಕೋರಿನ್, ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಮತ್ತುರಾಮನಾಥಪುರಂನ ತಿರುನೆಲ್ವೇಲಿಯಲ್ಲಿ ಭಾರಿ ಮಳೆ (Heavy Rain)ಯಾಗುವ ಸಾಧ್ಯತೆಯಿದೆ.


ಕರಾವಳಿ ಪ್ರದೇಶಗಳಲ್ಲಿ ಎಚ್ಚರಿಕೆ:
ಭಾರಿ ಮಳೆಯಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಹವಾಮಾನ ಇಲಾಖೆ ಪ್ರತ್ಯೇಕ ಎಚ್ಚರಿಕೆ ನೀಡಿದೆ. ಇಡುಕಿಯಲ್ಲಿ ರೆಡ್ ಅಲರ್ಟ್, ತಿರುವನಂತಪುರಂ ಮತ್ತು ಕೊಲ್ಲಂ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌ ನೀಡಲಾಗಿದೆ. ಇವುಗಳಲ್ಲದೆ ಆಲಪ್ಪುಳ, ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳಿಗೆ ಯೆಲ್ಲೋ ಎಚ್ಚರಿಕೆ ನೀಡಲಾಗಿದೆ. ಇದರೊಂದಿಗೆ ನವೆಂಬರ್ 30 ರ ಮಧ್ಯರಾತ್ರಿಯಿಂದ ಮೀನುಗಾರರಿಗೆ ಸಮುದ್ರಕ್ಕೆ ಹೋಗುವುದನ್ನು ನಿರ್ಬಂಧಿಸಲಾಗಿದೆ. 


ಇನ್ನು ಮುಂದೆ ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕುಡಿಕೆಯಲ್ಲಿ ಮಾತ್ರ ಸಿಗಲಿದೆ ಚಹಾ


ತಮಿಳುನಾಡಿನಲ್ಲಿ ಮೂರು ನಿಯಂತ್ರಣ ಕೊಠಡಿಗಳನ್ನು ನಿರ್ಮಿಸಲಾಗಿದೆ
ಚಂಡಮಾರುತವನ್ನು (Cyclone) ಎದುರಿಸಲು ತಮಿಳುನಾಡು ಸರ್ಕಾರ ರಾಜ್ಯದಲ್ಲಿ ಎರಡು ಕಂಟ್ರೋಲ್ ರೂಂಗಳನ್ನು ಸ್ಥಾಪಿಸಿದೆ. ಈ ಪೈಕಿ ಕನ್ಯಾಕುಮಾರಿ (04651-226235) ಮತ್ತು ಟುಟಿಕೊರಿನ್ (04612320458) ಕಂಟ್ರೋಲ್ ರೂಂ ಹೊಂದಿವೆ. ಚೆನ್ನೈನ ಪರಿಸ್ಥಿತಿಯನ್ನು ಎದುರಿಸಲು ಪ್ರಧಾನ ಕಚೇರಿಯನ್ನು ನಿರ್ಮಿಸಲಾಗಿದೆ. ಇದರ ಕಂಟ್ರೋಲ್ ರೂಂ ಸಂಖ್ಯೆ (044-29530392).