Karnataka Rain: ಚುನಾವಣೆ ಬಿಸಿ ಮಧ್ಯೆ ರಾಜ್ಯದಲ್ಲಿ ಮಿಂಚು-ಗುಡುಗು ಸಹಿತ ಭಾರೀ ಮಳೆ: ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ!
Weather Update 07-05-2023: ಭಾರತೀಯ ಹವಾಮಾನ ಇಲಾಖೆ (IMD) ಈಗ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ (ಭಾರೀ ಮಳೆ ಎಂದರ್ಥ) ಘೋಷಿಸಿದೆ. ಮುಂದಿನ ಕೆಲವು ದಿನಗಳಲ್ಲಿ ಕರ್ನಾಟಕದಾದ್ಯಂತ ವ್ಯಾಪಕವಾದ ಗುಡುಗು ಸಹಿತ ಮಳೆಯಾಗಲಿದೆ ಎಂದು ಹೇಳಿದೆ.
Weather Update 07-05-2023: ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ವಿಧಾನಸಭೆ ಮತದಾನ ನಡೆಯಲಿದೆ. ಈ ಹಿಂದೆ ಏಕ ಹಂತದ ಮತದಾನ ನಡೆಸಲು ಉದ್ದೇಶಿಸಿದ್ದ ಭಾರತ ಚುನಾವಣಾ ಆಯೋಗವು (ಇಸಿಐ) ಬಿಸಿಲಿನ ತಾಪದಲ್ಲಿ ಚುನಾವಣೆ ನಡೆಸಲು ವಿಸ್ತೃತ ವ್ಯವಸ್ಥೆಗಳನ್ನು ಮಾಡಿತ್ತು. ಆದರೆ ಇದೀಗ ಮಳೆರಾಯನ ಅಬ್ಬರ ಇರಲಿದೆ ಎಂದು ಇಲಾಖೆ ಸೂಚನೆ ನೀಡಿದ್ದು. ಚುನಾವಣಾ ಆಯೋಗಕ್ಕೆ ತಲೆನೋವಾಗಿ ಪರಿಣಮಿಸಿದೆ.
ಭಾರತೀಯ ಹವಾಮಾನ ಇಲಾಖೆ (IMD) ಈಗ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ (ಭಾರೀ ಮಳೆ ಎಂದರ್ಥ) ಘೋಷಿಸಿದೆ. ಮುಂದಿನ ಕೆಲವು ದಿನಗಳಲ್ಲಿ ಕರ್ನಾಟಕದಾದ್ಯಂತ ವ್ಯಾಪಕವಾದ ಗುಡುಗು ಸಹಿತ ಮಳೆಯಾಗಲಿದೆ ಎಂದು ಹೇಳಿದೆ. ಇದರಿಂದಾಗಿ ಭಾರತ ಚುನಾವಣಾ ಆಯೋಗದ ಅಧಿಕಾರಿಗಳು ವಿದ್ಯುನ್ಮಾನ ಮತಯಂತ್ರಗಳು (EVM) ಮತ್ತು ಇತರೆ ಮತದಾನ ಸಾಮಗ್ರಿಗಳ ಸಾಗಾಟ ಹಾಗೂ ವಿತರಣೆಯ ಬಗ್ಗೆ ಚಿಂತಿತರಾಗಿದ್ದಾರೆ. ಆದರೆ ಇಸಿಐಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು, ಮಳೆಯ ಬಗ್ಗೆ ಯಾವುದೇ ಸುಳಿವು ಅಥವಾ ವರದಿಗಳು ನಮಗೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Twitter World Cup 2023: ತಾಂಜಾನಿಯಾದ ಸಿಂಬಾ ಸ್ಪೋರ್ಟ್ಸ್ ಕ್ಲಬ್ ಸೋಲಿಸಿ ಟ್ವಿಟರ್ ವರ್ಲ್ಡ್ ಕಪ್ 2023 ಗೆದ್ದ ಆರ್ಸಿಬಿ
"ಮೋಚಾ ಚಂಡಮಾರುತದ ಸೃಷ್ಟಿ ಮತ್ತು ನಂತರ ಅದರ ಪ್ರಭಾವ ತೀವ್ರಗೊಂಡಿದ್ದು, ವ್ಯಾಪಕವಾದ ಗುಡುಗು ಸಹಿತ ಮಳೆಗೆ ಕಾರಣವಾಗಲಿದೆ. ಮತದಾನ ಸಾಮಗ್ರಿಗಳೊಂದಿಗೆ ಇವಿಎಂಗಳು ಮತ್ತು ವಿವಿಪ್ಯಾಟ್ ಯಂತ್ರಗಳ ಸಾಗಣೆ ಮತ್ತು ಚಲನೆಯ ಮೇಲೆ ಪರಿಣಾಮ ಬೀರಿದೆ" ಎಂದು ಕರ್ನಾಟಕದ ಮುಖ್ಯ ಚುನಾವಣಾ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. .
ರಾಜ್ಯದ ಬಹುತೇಕ ಜಿಲ್ಲೆಗಳಿಗೆ ವಾರಾಂತ್ಯದ ಆರ್ದ್ರತೆಯ ಮುನ್ಸೂಚನೆಯನ್ನು ನೀಡಿರುವ ಐಎಂಡಿ ಬೆಂಗಳೂರಿನ ಹಿರಿಯ ವಿಜ್ಞಾನಿ ಎ ಪ್ರಸಾದ್, “ಎರಡು ದಿನಗಳಲ್ಲಿ (ಮೇ 8 ಮತ್ತು 9) ನಾವು ಪಶ್ಚಿಮ ಘಟ್ಟದ ಜಿಲ್ಲೆಗಳು ಮತ್ತು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಿದ್ದೇವೆ. ಇದನ್ನು ಹೊರತುಪಡಿಸಿ, ಮುಂದಿನ ಐದು ದಿನಗಳಲ್ಲಿ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ” ಎಂದು ಹೇಳಿದ್ದಾರೆ.
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಮಾತನಾಡಿದ್ದು, "ನಾವು ಇವಿಎಂಗಳ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದಾಗ, ಬೇಸಿಗೆಯ ತಿಂಗಳು ಎಂದು ಪರಿಗಣಿಸಿದ್ದೆವು. ಮಳೆ ಬಗ್ಗೆ ಯೋಜಿಸಿರಲಿಲ್ಲ. ಮಳೆಗಾಲದಲ್ಲಿ ಮತಯಂತ್ರದ ಜತೆಗೆ ಇವಿಎಂ ಹಾಗೂ ಇತರೆ ಎಲೆಕ್ಟ್ರಾನಿಕ್ ಯಂತ್ರಗಳನ್ನು ಸಾಗಿಸುವುದು ಇದೀಗ ಸವಾಲಾಗಲಿದೆ. ಮಳೆ ಮತ್ತು ತೇವಾಂಶಕ್ಕೆ ಯಂತ್ರ ಒಡ್ಡಿಕೊಂಡರೆ, ನಂತರ ತಾಂತ್ರಿಕ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ, ಈ ಎಲ್ಲಾ ಇವಿಎಂ ಘಟಕಗಳನ್ನು ಪ್ಲಾಸ್ಟಿಕ್ ಅಥವಾ ಇನ್ಸುಲೇಷನ್ ವಸ್ತುಗಳಿಂದ ಮುಚ್ಚಬೇಕಾಗಿದೆ. ನಾವು ಈ ವಸ್ತುಗಳನ್ನು ಹೊಸದಾಗಿ ಎಲ್ಲಾ ಜಿಲ್ಲೆಗಳಿಗೆ ವಿತರಿಸಬೇಕಾಗಿದೆ” ಎಂದರು.
ಮತದಾನಕ್ಕೆ ಕೇವಲ ನಾಲ್ಕು ದಿನಗಳು ಬಾಕಿ ಇರುವಾಗ, ಚುನಾವಣಾ ಆಯೋಗದ ಅಧಿಕಾರಿಗಳು ಪ್ರತಿ ಜಿಲ್ಲೆಯ ಎಲ್ಲಾ ಚುನಾವಣಾ ಸಿಬ್ಬಂದಿಗೆ ಎರಡನೇ ಮತ್ತು ಅಂತಿಮ ಹಂತದ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.
"ಮೊದಲ ಪ್ರಕ್ರಿಯೆಯಲ್ಲಿ, ನಾವು ಜಿಲ್ಲೆಗಳಿಂದ ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಇವಿಎಂಗಳನ್ನು ಹಂಚಿಕೆ ಮಾಡಿದ್ದೇವೆ. ಈಗ, ಎರಡನೇ ಸುತ್ತಿನ ಪ್ರಕ್ರಿಯೆ ಪೂರ್ಣಗೊಂಡಿದ್ದರೊಂದಿಗೆ ನಾವು ಅಸೆಂಬ್ಲಿ ಮಟ್ಟದಿಂದ ಪ್ರತಿ ಮತಗಟ್ಟೆಗೆ ಇವಿಎಂಗಳನ್ನು ನಿಯೋಜಿಸಿದ್ದೇವೆ ”ಎಂದು ಮೀನಾ ವಿವರಿಸಿದರು.
ದೇಶದಲ್ಲಿ ಹೀಗಿರಲಿದೆ ವಾತಾವರಣ:
ಏಪ್ರಿಲ್ ಕೊನೆಯ ವಾರದಿಂದ ದೇಶದಲ್ಲಿ ಆಹ್ಲಾದಕರ ವಾತಾವರಣವಿದೆ. ಹವಾಮಾನದಲ್ಲಿನ ಈ ಮೃದುತ್ವದಿಂದಾಗಿ, ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಾಗಲಿದೆ. ಪಂಜಾಬ್, ಹರಿಯಾಣ, ಉತ್ತರ ರಾಜಸ್ಥಾನ, ದೆಹಲಿ ಮತ್ತು ಪಶ್ಚಿಮ ಉತ್ತರ ಪ್ರದೇಶದ ಮೇಲೆ ನಿರಂತರ ಮಳೆ ಮತ್ತು ಗುಡುಗು ಸಹಿತ ಮಳೆಯಾಗಬಹುದು.
ಏಜೆನ್ಸಿ ಪ್ರಕಾರ, ತಾಪಮಾನ ಏರಿಕೆಯ ಹೊರತಾಗಿಯೂ, ಮುಂದಿನ ವಾರದವರೆಗೆ ಈ ರಾಜ್ಯಗಳಲ್ಲಿ ಶಾಖದ ಅಲೆಯು ಕಡಿಮೆ ಇರಲಿದೆ. ಮೇ ತಿಂಗಳ ಎರಡನೇ ವಾರದಿಂದ ಹವಾಮಾನವು ಸಂಪೂರ್ಣವಾಗಿ ಬದಲಾಗುತ್ತದೆ. ಜನರು ಆಗಾಗ್ಗೆ ಬಿಸಿಲಿನ ತಾಪವನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ: Team India ದಿಗ್ಗಜನ ಜೀವನಗಾಥೆಯ ಆ ಸಿನಿಮಾ ಮತ್ತೆ ರಿಲೀಸ್! ಅಂದು ಇದೇ ಚಿತ್ರ ಗಳಿಸಿದ್ದು ಬರೋಬ್ಬರಿ 215 ಕೋಟಿ!
ಹವಾಮಾನ ತಜ್ಞರ ಪ್ರಕಾರ, ಆಗ್ನೇಯ ಬಂಗಾಳದಲ್ಲಿ ಶೀಘ್ರದಲ್ಲೇ ಚಂಡಮಾರುತದ ಪರಿಚಲನೆ ರಚನೆಯಾಗುವ ಸಾಧ್ಯತೆ ಇದೆ. ಇದರ ಪ್ರಭಾವದಿಂದ ಮೇ 7ರ ಸುಮಾರಿಗೆ ಇದೇ ಪ್ರದೇಶದಲ್ಲಿ ಅಪಾರ ಮಳೆಯಾಗುವ ಸಾಧ್ಯತೆ ಇದೆ. ಇದು ಮೇ 8 ರ ಸುಮಾರಿಗೆ ಇದು ಇನ್ನಷ್ಟು ಬಲಗೊಳ್ಳಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.