ಹವಾಮಾನ ಮುನ್ಸೂಚನೆ: ದೇಶದ ಹಲವು ರಾಜ್ಯಗಳಲ್ಲಿ, ಇಂದು ಅಂದರೆ ಸೆಪ್ಟೆಂಬರ್ 15ರ ಗುರುವಾರದಂದು ಭಾರೀ ಮಳೆ ಆಗುವ ಸಾಧ್ಯತೆ ಇದೇ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಐಎಂಡಿ ಪ್ರಕಾರ, ದೇಶದ ಹೃದಯ ಎಂದು ಕರೆಯಲ್ಪಡುವ ಮಧ್ಯಪ್ರದೇಶದ ಕೇಂದ್ರ ಭಾಗದ ಕಡಿಮೆ ಒತ್ತಡದ ಪ್ರದೇಶವು ಉತ್ತರ ಮಧ್ಯಪ್ರದೇಶ ಮತ್ತು ಪಕ್ಕದ ನೈರುತ್ಯ ಉತ್ತರ ಪ್ರದೇಶದ ಕಡೆಗೆ ಚಲಿಸುತ್ತಿದೆ. ಇದರಿಂದ ಮಧ್ಯಪ್ರದೇಶ ಮತ್ತು ಅದರ ಪಕ್ಕದ ರಾಜ್ಯಗಳಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಲಿವೆ. ಇದರ ಪರಿಣಾಮವಾಗಿ ಮುಂದಿನ ಕೆಲವು ದಿನಗಳವರೆಗೆ ದಕ್ಷಿಣ ಗುಜರಾತ್, ಉತ್ತರ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ಮುಂದಿನ 48 ಗಂಟೆಗಳ ಕಾಲ ಈ ರಾಜ್ಯಗಳಲ್ಲಿ ಜಾಗರೂಕರಾಗಿರಿ! 
ಮಧ್ಯಪ್ರದೇಶದಲ್ಲಿ ಉಂಟಾಗಿರುವ ಕಡಿಮೆ ಒತ್ತಡದಿಂದಾಗಿ ಮುಂದಿನ 48 ಗಂಟೆಗಳಲ್ಲಿ ರಾಜಸ್ಥಾನದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಪ್ರದೇಶದ ಜನರು ಜಾಗರೂಕರಾಗಿರಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಐಎಂಡಿ ಪ್ರಕಾರ,  ಮುಂದಿನ 24 ಗಂಟೆಗಳಲ್ಲಿ, ಸೆಪ್ಟೆಂಬರ್ 15 ರಂದು ಉತ್ತರ ಮತ್ತು ಪಶ್ಚಿಮ ಮಧ್ಯಪ್ರದೇಶದಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ.


ರಾಜಸ್ಥಾನದ ಪೂರ್ವ ಭಾಗಗಳು ಮತ್ತು ಗುಜರಾತ್‌ನ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಬಹುದು. ರಾಜಸ್ಥಾನದಲ್ಲಿ, ಸಕ್ರಿಯ ಮಾನ್ಸೂನ್ ಮತ್ತು ರಾಜ್ಯದ ಬಹುತೇಕ ಭಾಗಗಳಲ್ಲಿ ಸೆಪ್ಟೆಂಬರ್ 15 ರಿಂದ 16 ರವರೆಗೆ ಲಘುವಾಗಿ ಮಧ್ಯಮ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.


ಇದನ್ನೂ ಓದಿ- Monkey Video : ಶಾಲೆಗೆ ಬಂದ ಮಂಗಣ್ಣ.! ವಿದ್ಯಾರ್ಥಿ ಪಕ್ಕ ಕುಳಿತು ಮಾಡಿದ ಕಿತಾಪತಿ ನೋಡಿ


ಹವಾಮಾನ ಇಲಾಖೆ ಪ್ರಕಾರ,  ಪ್ರಕಾರ, ಸೆಪ್ಟೆಂಬರ್ 15 ರಂದು ಉದಯ್‌ಪುರ, ಕೋಟಾ ಮತ್ತು ಭರತ್‌ಪುರ ವಿಭಾಗಗಳ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. 


ಗುಡ್ಡಗಾಡು ರಾಜ್ಯಗಳಲ್ಲಿ ಭಾರಿ ಮಳೆ ಎಚ್ಚರಿಕೆ:
ಹವಾಮಾನ ಇಲಾಖೆಯ ಅಪ್‌ಡೇಟ್ ಪ್ರಕಾರ, 2022 ರ ಸೆಪ್ಟೆಂಬರ್ 15 ರಿಂದ 17 ರವರೆಗೆ, ದೇಶದ ವಾಯುವ್ಯ ಭಾಗ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ. ಆಫ್ ಶೋರ್ ಮಾನ್ಸೂನ್ ಟ್ರಫ್ ಮಹಾರಾಷ್ಟ್ರದಿಂದ ಗೋವಾ ಕರಾವಳಿಯವರೆಗೂ ಇರುತ್ತದೆ ಮತ್ತು ಅದರ ಪರಿಣಾಮವೂ ಗೋಚರಿಸುತ್ತದೆ.


ಅದೇ ರೀತಿ, ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಬಿಹಾರ, ಉಪ-ಹಿಮಾಲಯ ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ. 


ಇದನ್ನೂ ಓದಿ- ಹಿಂದಿ ದಿವಸ್ ಅನ್ನು ಸೆಪ್ಟೆಂಬರ್ 14 ರಂದು ಆಚರಿಸುವುದೇಕೆ?


ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಅಂದರೆ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.  ಉತ್ತರ ಪ್ರದೇಶ ಜೊತೆಗೆ ಉತ್ತರಾಖಂಡದ ಕೆಲವು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದೆ. ಉತ್ತರಾಖಂಡದಲ್ಲಿ ಮುಂದಿನ 48 ಗಂಟೆಗಳಲ್ಲಿ ಅಂದರೆ ಎರಡು ದಿನಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಬಹುದು ಎಂದು ಐಎಂಡಿ ಎಚ್ಚರಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.