Viral Video :‌ ನೆಲದ ಮೇಲೆ ಬಿದ್ದು ಒದ್ದೆಯಾದ ಆಹಾರ ಸೇವಿಸಿದ ವ್ಯಕ್ತಿ, ಊಟದ ಮಹತ್ವ ತಿಳಿಸುವ ದೃಶ್ಯ

Viral Video : ಹಸಿವಾದಾಗ ನೆಲದ ಮೇಲೆ ಅಥವಾ ಕಸದಲ್ಲಿ ಬಿದ್ದಿರುವ ಆಹಾರವನ್ನು ಎತ್ತಿಕೊಂಡು ಬಲವಂತವಾಗಿ ಆಹಾರ ಸೇವಿಸುವವರೂ ಇದ್ದಾರೆ. ಇಂತಹ ಹೃದಯ ವಿದ್ರಾವಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Written by - Chetana Devarmani | Last Updated : Sep 14, 2022, 10:46 AM IST
  • ಕಣ್ಣಂಚನ್ನು ತೇವಗೊಳಿಸುತ್ತೆ ಈ ದೃಶ್ಯ
  • ನೆಲದ ಮೇಲೆ ಬಿದ್ದು ಒದ್ದೆಯಾದ ಆಹಾರ ಸೇವಿಸಿದ ವ್ಯಕ್ತಿ
  • ಊಟದ ಮಹತ್ವ ತಿಳಿಸುವ ವಿಡಿಯೋ ವೈರಲ್‌
Viral Video :‌ ನೆಲದ ಮೇಲೆ ಬಿದ್ದು ಒದ್ದೆಯಾದ ಆಹಾರ ಸೇವಿಸಿದ ವ್ಯಕ್ತಿ, ಊಟದ ಮಹತ್ವ ತಿಳಿಸುವ ದೃಶ್ಯ   title=
ವಿಡಿಯೋ ವೈರಲ್‌

Viral Video : ಹಸಿವು... ಭೂಮಿಯ ಮೇಲಿನ ಪ್ರತಿ ಜೀವಿಗೂ ಬದುಕಲು ಆಹಾರ ಬೇಕು. ಪ್ರತಿದಿನ ಅದೆಷ್ಟೋ ಜನ ತಿನ್ನಲು ಅಗಳು ಅನ್ನ ಸಿಗದೇ ಒದ್ದಾಡುತ್ತಾರೆ. ಮತ್ತೆ ಕೆಲವರು ತಿನ್ನುವ ಅನ್ನವನ್ನು ಹೆಚ್ಚಾಗಿ ಬಿಸಾಕುತ್ತಾರೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆದ ಈ ವಿಡಿಯೋ ನೋಡಿದ್ರೆ ಕಲ್ಲು ಹೃದಯ ಸಹ ಕರಗುತ್ತದೆ. ಪ್ರತಿಯೊಬ್ಬರು ಕಣ್ಣಂಚಿನಲ್ಲೂ ನೀರು ತುಂಬುತ್ತದೆ. ತಟ್ಟೆ ತುಂಬ ಊಟ ಹಾಕಿಕೊಂಡು ಹೊಟ್ಟೆ ತುಂಬಿದ ಮೇಲೆ ಎಸೆಯುವವರ ಹೃದಯ ಮುಟ್ಟುತ್ತದೆ. ಹಸಿವಾದಾಗ ನೆಲದ ಮೇಲೆ ಅಥವಾ ಕಸದಲ್ಲಿ ಬಿದ್ದಿರುವ ಆಹಾರವನ್ನು ಎತ್ತಿಕೊಂಡು ಬಲವಂತವಾಗಿ ಆಹಾರ ಸೇವಿಸುವವರೂ ಇದ್ದಾರೆ. ಇಂತಹ ಹೃದಯ ವಿದ್ರಾವಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ : WATCH : ಕಂಠಪೂರ್ತಿ ಕುಡಿದು ರಸ್ತೆ ಮಧ್ಯೆ ಯೋಗಾಸನ.. ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!

ಹಸಿವಿನಿಂದ ಬಳಲುತ್ತಿರುವ ಅದೆಷ್ಟೋ ಜನ ತಿನ್ನಲು ಅನ್ನವಿಲ್ಲದೇ, ಆಹಾರ ಖರೀದಿಸಲು ದುಡ್ಡಿಲ್ಲದೇ ಅನೇಕರು ದಿನ ನಿತ್ಯ ಕಣ್ಣೀರು ಹಾಕುತ್ತಿರುತ್ತಾರೆ. ಅನೇಕ ಜನ ದಾರಿ ಮಧ್ಯೆ ಆಹಾರಕ್ಕಾಗಿ ಜನರನ್ನು ಬೇಡಿಕೊಳ್ಳುವುದನ್ನು ನೋಡಿಬಹುದು. ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ನಂತರ ನೀವು ಆಶ್ಚರ್ಯ ಪಡುತ್ತೀರಿ. ಮನುಷ್ಯ ಹಸಿದಿದ್ದರೂ ಅಸಹಾಯಕ. ಜೋರು ಮಳೆಯಲ್ಲಿ, ಜನರು ಮೂಲೆಯಲ್ಲಿ ನಿಲ್ಲಲು ಅಥವಾ ನೆರಳಿನಲ್ಲಿ ನಿಲ್ಲಲು ಸ್ಥಳವನ್ನು ಹುಡುಕುತ್ತಾರೆ, ಒಬ್ಬ ವ್ಯಕ್ತಿಯು ಮಳೆಯಲ್ಲಿ ಒದ್ದೆಯಾದ ರಸ್ತೆ ಬದಿಯಲ್ಲಿ ಸ್ಕೂಟಿ ಅಡಿಯಲ್ಲಿ ಬಿದ್ದಿರುವ ಆಹಾರವನ್ನು ತಿನ್ನಲು ಹವಣಿಸುತ್ತಾನೆ. ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆದ ಕೂಡಲೇ ಜನರ ಹೃದಯ ಕರಗಿದೆ. ಈ ವಿಡಿಯೋವನ್ನು @Gulzar_sahab ಹೆಸರಿನ ಖಾತೆಯಿಂದ Twitter ನಲ್ಲಿ ಹಂಚಿಕೊಳ್ಳಲಾಗಿದೆ. 

 

 

ಒದ್ದೆಯಾದ ಆಹಾರವನ್ನು ಮಳೆ ನೀರಿನಲ್ಲಿ ನೆನೆಯದಂತೆ ಸ್ಕೂಟಿಯ ಕೆಳಗೆ ಇಟ್ಟುಕೊಂಡು ತನ್ನ ಆಹಾರವನ್ನು ಮರೆಮಾಡಲು ಪ್ರಯತ್ನಿಸುತ್ತಿದ್ದಾನೆ. ಈ ವಿಡಿಯೋ ನೋಡಿದ ತಕ್ಷಣ ಲಕ್ಷಾಂತರ ಮಂದಿಯ ಕಣ್ಣಂಚಲ್ಲಿ ನೀರು ತುಂಬಿದೆ. ವಿಡಿಯೋವನ್ನು ವೀಕ್ಷಿಸಿದ ನಂತರ ಬಳಕೆದಾರರೊಬ್ಬರು, 'ಎಲ್ಲರೂ ಅವನ ಅಸಹಾಯಕತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಇದಕ್ಕೆ ನಾಯಕರ ಜೊತೆಗೆ ನಾವೆಲ್ಲರೂ ಜವಾಬ್ದಾರರು' ಎಂದು ಬರೆದಿದ್ದಾರೆ. ಹಸಿವಿನಿಂದ ಬಳಲುವ ವ್ಯಕ್ತಿಗೆ ಆಹಾರ ಸಿಗದಿದ್ದಾಗ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಈ ವಿಡಿಯೋ ಪರಿಪರಿಯಾಗಿ ಬಿಚ್ಚಿಡುತ್ತದೆ. 

ಇದನ್ನೂ ಓದಿ : Funny Video: ಮಂಗಗಳ ಕೈಗೆ ಸ್ಮಾರ್ಟ್‌ಫೋನ್‌ ಸಿಕ್ರೆ ಹೇಗಿರುತ್ತೆ? ಈ ವಿಡಿಯೋ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News