ವಾರಾಣಸಿ: ರಂಜಾನ್ ನಿಮಿತ್ತ ಮುಸ್ಲಿಂ ಸಹೋದರರಿಗೆ ಶ್ಯಾವಿಗೆ ಸಿದ್ದಪಡಿಸಿದ ಹಿಂದು ಕುಟುಂಬ
ಕೋಮು ಸೌಹಾರ್ದತೆಗೆ ನಿದರ್ಶನ ಎನ್ನುವಂತೆ ಈಗ ವಾರಣಾಸಿಯಲ್ಲಿ ಹಿಂದೂ ಕುಟುಂಬವು ಮುಸ್ಲಿಮರಿಗೆ ಶ್ಯಾವಿಗೆ ಸಿದ್ದಪಡಿಸುವ ಕಾಯಕದಲ್ಲಿ ನಿರತವಾಗುವ ಮೂಲಕ ಭಾವೈಕ್ಯತೆ ಮೆರೆದಿದೆ.
ನವದೆಹಲಿ: ಕೋಮು ಸೌಹಾರ್ದತೆಗೆ ನಿದರ್ಶನ ಎನ್ನುವಂತೆ ಈಗ ವಾರಣಾಸಿಯಲ್ಲಿ ಹಿಂದೂ ಕುಟುಂಬವು ಮುಸ್ಲಿಮರಿಗೆ ಶ್ಯಾವಿಗೆ ಸಿದ್ದಪಡಿಸುವ ಕಾಯಕದಲ್ಲಿ ನಿರತವಾಗುವ ಮೂಲಕ ಭಾವೈಕ್ಯತೆ ಮೆರೆದಿದೆ.
ರಂಜಾನ್ ನಿಮಿತ್ತದ ಕೊನೆಯ ದಿನ ಮುಸ್ಲಿಮರು ಶೀರ ಕುರ್ಮಾ ವನ್ನು ಸೇವಿಸುವ ಮೂಲಕ ತಮ್ಮ ಉಪವಾಸಕ್ಕೆ ಕೊನೆ ಹಾಡುತ್ತಾರೆ. ಈ ಹಿನ್ನಲೆಯಲ್ಲಿ ವಾರಣಸಿಯ ಉರಿಯುವ ಬಿಸಿಲಿನಲ್ಲಿಯೂ ಕೂಡ ಮಹಿಳೆಯರು ಹಾಗೂ ಪುರುಷರು ಸ್ಯಾವಿಗೆಯನ್ನು ಒಣಗಿಸುವಲ್ಲಿ ನಿರತರಾಗಿದ್ದಾರೆ.
"ರಂಜಾನ್ ಗೆ ಇನ್ನು ಮೂರು ತಿಂಗಳು ಮೊದಲೇ ನಾವು ಸ್ಯಾವಿಗೆಯನ್ನು ತಯಾರಿಸುತ್ತಿದ್ದೇವೆ. ಮುಸ್ಲಿಂ ಸಹೋದರು ನಮ್ಮಲ್ಲಿ ಬಂದು ಇವುಗಳನ್ನು ಕೊಳ್ಳುತ್ತಾರೆ.ನಾವು ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡುವುದಿಲ್ಲ. ಕೆಲವು ಮುಸ್ಲಿಂ ಗ್ರಾಹಕರು ನಮಗೆ ಹಾರೈಸುತ್ತಾರೆ, ನಮ್ಮ ಉತ್ಪನ್ನಗಳನ್ನು ಇತರ ದೇಶಗಳಿಗೆ ರಫ್ತು ಮಾಡುತ್ತೇವೆ " ಎಂದು ಅಂಗಡಿ ಮಾಲೀಕ ಅನಂತ್ ಲಾಲ್ ಕಸರ್ಕನಿ ಹೇಳಿದರು.
"ಪ್ರತಿ ರಂಜಾನ್ ವೇಳೆಯಲ್ಲೂ ರುಮಾನಿ ಸೇಮಿಯಾ ಗ್ರಾಹಕರ ಅತಿ ಹೆಚ್ಚಿನ ಆಧ್ಯತೆ ವಸ್ತುವಾಗಿ ಕೊಂಡುಕೊಳ್ಳುತ್ತಾರೆ. ಸದ್ಯ ನಾವು ಈಗ ಮೂರು ಪ್ರಕಾರದ ಸೇಮಿಯಾವನ್ನು ಉತ್ಪಾದಿಸುತ್ತಿದ್ದೇವೆ, ಅವುಗಳು ಗಾತ್ರದಲ್ಲಿ ವಿಭಿನ್ನವಾಗಿವೆ" ಎಂದು ಅಶ್ರಫಿ ಲಾಲ್ ಕೇಸ್ರಿ ಹೇಳಿದರು.
ಕಳೆದ ವಾರ ಬಿಹಾರ್ ದರ್ಭಾಂಗ್ ನಲ್ಲಿ ಮೊಹಮ್ಮದ್ ಅಶ್ಫಾಕ್ ಎನ್ನುವ ಮುಸ್ಲಿಂ ವ್ಯಕ್ತಿಯೊಬ್ಬನು ಮಗುವಿನ ಜೀವವನ್ನು ಉಳಿಸುವುದಕ್ಕಾಗಿ ರಂಜಾನ್ ಉಪವಾಸವನ್ನು ಮುರಿದು ರಕ್ತದಾನವನ್ನು ಮಾಡಿ ಮಾನವೀಯತೆ ಮೆರೆದಿದ್ದರು.