ಹಿಂದೂ ವಿವಾಹಿತ ವಿಚ್ಚೇದನ ಅನುಮೋದನೆ 6 ತಿಂಗಳ ಸಮನ್ವಯ ಅವಧಿಯಲ್ಲಿ ವಿಶ್ರಾಂತಿ: ಸುಪ್ರೀಂಕೋರ್ಟ್
ದಂಪತಿಗಳು ಪರಸ್ಪರ ಒಪ್ಪಿ ವಿವಾಹ ವಿಚ್ಛೇದನಕ್ಕೆ ಮನವಿ ಮಾಡಿದ್ದರೆ ಅಂತಹ ವಿಚ್ಛೇದನಗಳಿಗೆ ಆರು ತಿಂಗಳು ಮರು ಹೊಂದಾಣಿಕೆ ಅವಧಿ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ಮಂಗಳವಾರ ಮಹತ್ವದ ಆದೇಶ ನೀಡಿದೆ.
ನವ ದೆಹಲಿ: ವಿಚ್ಛೇದನ ಬಯಸುವ ಹಿಂದೂ ದಂಪತಿಗಳಿಗೆ ಅನುಕೂಲವಾಗುವಂತಹ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ. ದಂಪತಿಗಳು ಪರಸ್ಪರ ಒಪ್ಪಿಗೆಯ ಮೇರೆಗೆ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸುವ ದಂಪತಿಗಳಿಗೆ ಮತ್ತೆ ಸಮನ್ವಯ ಬೆಸೆಯುವ ಸಲುವಾಗಿ ನೀಡಲಾಗುತ್ತಿದ್ದ ಆರು ತಿಂಗಳ ಅವಧಿಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
ಉತ್ತರ ಭಾರತ ಮೂಲದ ದಂಪತಿಗಳು ತಾವು ಎಂಟು ವರ್ಷಗಳಿಂದ ಪರಸ್ಪರ ದೂರವಿದ್ದೇವೆ. ಆದರೆ ವಿಚ್ಛೇದನ ಪಡೆಯಲು ಮತ್ತೆ ಆರು ತಿಂಗಳು ಜೊತೆಗಿರುವ ಅನಿವಾರ್ಯದ ಬಗ್ಗೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ತೆಗೆದುಕೊಂಡ ನ್ಯಾಯಮೂರ್ತಿ ಆದರ್ಶ್ ಕೆ. ಗೋಯಲ್ ಮತ್ತು ನ್ಯಾಯಮೂರ್ತಿ ಉದಯ್ ಯು.ಲಲಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ತೀರ್ಪನ್ನು ನೀಡಿದೆ.
ಅಂದರೆ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(ಬಿ) ಅಡಿ ಪ್ರಸ್ತಾಪ ಮಾಡಲಾಗಿರುವ ಆರು ತಿಂಗಳ ಕಾಲಾವಕಾಶ ಕಡ್ಡಾಯವಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಆದರೆ, ಪ್ರತಿಯೊಂದು ಪ್ರಕರಣಗಳು ವಿಭಿನ್ನವಾಗಿದ್ದು ಪ್ರಕರಣಗಳ ಸತ್ಯ ಮತ್ತು ಸಂದರ್ಭಗಳನ್ನು ಅವಲೋಕಿಸಿ, ನ್ಯಾಯಾಲಯಗಳು ತಮ್ಮ ಸವಲತ್ತುಗಳನ್ನು ಬಳಸುವ ಆಯ್ಕೆಯನ್ನು ಹೊಂದಿರುತ್ತದೆ ಎಂದೂ ಸಹ ನ್ಯಾಯಪೀಠ ತಿಳಿಸಿದೆ.
ಕೆಲವು ಸಂದರ್ಭಗಳಲ್ಲಿ, ಕೆಳಗಿನ ನ್ಯಾಯಾಲಯಗಳು ಕನಿಷ್ಟ ಆರು ತಿಂಗಳ ಅವಧಿಯನ್ನು ಸರಾಗಗೊಳಿಸುವ ಸಾಧ್ಯತೆ ಇದೆ ಮತ್ತು ವಿಚ್ಛೇದನ ಪಡೆಯುವ ದಂಪತಿಗಳು ಈ ಅವಧಿಯಲ್ಲಿ ಮುಂದೂಡಲ್ಪಟ್ಟ ಅವಧಿಯನ್ನು ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಆದಾಗ್ಯೂ, ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ ನಂತರ ಮಾತ್ರ ಇದನ್ನು ಮಾಡಬಹುದು. ಅಂತಹ ವಿಚಾರಣೆಯ ಕಾರ್ಯಾಚರಣೆಯಲ್ಲಿ, ಕೆಳ ನ್ಯಾಯಾಲಯವು ವಿಡಿಯೋ ಕಾನ್ಫರೆನ್ಸಿಂಗ್ ಮಾಧ್ಯಮವನ್ನು ಬಳಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.