Home Isolation ಮಾರ್ಗಸೂಚಿಗಳಲ್ಲಿ ಬದಲಾವಣೆ, ಔಷಧಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಮಾಹಿತಿ ನೀಡಿದ ಕೇಂದ್ರ
Home Isolation Guidelines - ಹೋಮ್ ಐಸೊಸೆಶನ್ ನಲ್ಲಿರುವ ಕೊರೊನಾ ಪಾಸಿಟಿವ್ ರೋಗಿಗಳ ಮಾರ್ಗಸೂಚಿಗಳಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ ಹಾಗೂ ಐಸೋಲೆಶನ್ ಅವಧಿಯಲ್ಲಿ ಯಾವ ಯಾವ ಔಷಧಿಗಳನ್ನು ತೆಗೆದುಕೊಳ್ಳಬೇಕು ಮತ್ತು ಯಾವ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು ಇತ್ಯಾದಿಗಳ ಮಾಹಿತಿ ನೀಡಿದೆ.
ನವದೆಹಲಿ: Home Isolation Guidelines - ಕರೋನಾ ಸಾಂಕ್ರಾಮಿಕದ ಎರಡನೇ (Covid-19 Second Wave) ತರಂಗ ಅಪಾಯಕಾರಿ ಎಂದು ಸಾಬೀತಾಗಿದೆ. ಕಳೆದ 24 ಗಂಟೆಗಳಲ್ಲಿ 3.86 ಲಕ್ಷಕ್ಕೂ ಹೆಚ್ಚು ಹೊಸ ಕರೋನಾ ಪ್ರಕರಣಗಳು ಬಹಿರಂಗಗೊಂಡಿದ್ದು, 3498 ಜನರು ಸಾವನ್ನಪ್ಪಿದ್ದಾರೆ. ಇದಲ್ಲದೆ, ಆಸ್ಪತ್ರೆಗಳಲ್ಲಿನ ಸಾಮರ್ಥ್ಯಗಳು ಸೀಮಿತವಾಗಿರುವುದರಿಂದ ದೇಶದ ಅನೇಕ ಭಾಗಗಳಲ್ಲಿ ಸೀಮಿತ ಸಂಖ್ಯೆಯ ಜನರು ಆರೋಗ್ಯ ಸೇವೆಗಳನ್ನು ಪಡೆಯುತ್ತಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (Union Ministry Of Health And Family Welfare) ಈ ಬಗ್ಗೆ ಕಾಲಕಾಲಕ್ಕೆ ಸಲಹೆಗಳನ್ನು ನೀಡುತ್ತಿದೆ. ಈ ಹಿನ್ನೆಲೆ ಆರೋಗ್ಯ ಸಚಿವಾಲಯವು ಕರೋನಾ ಸೋಂಕಿನ ಸೌಮ್ಯವಾದ ಲಕ್ಷಣಗಳಿರುವ (Corona Symptoms) ಅಥವಾ ರೋಗಲಕ್ಷಣಗಳಿಲ್ಲದೆ ರೋಗಿಗಳಿಗೆ ಮನೆಯಲ್ಲಿಯೇ ಪ್ರತ್ಯೇಕತೆಗೆ (Home Isolation)ಸಂಬಂಧಿಸಿದ ತನ್ನ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. ಇದರಲ್ಲಿ, ರೋಗಿಗಳಿಗೆ ಮಾತ್ರವಲ್ಲದೆ ಅವರನ್ನು ನೋಡಿಕೊಳ್ಳುವ ಆರೈಕೆದಾರರಿಗೂ ಮಾರ್ಗಸೂಚಿಗಳನ್ನು ನೀಡಲಾಗಿದೆ. ಇದರ ಅಡಿಯಲ್ಲಿ, ಮನೆಯ ಪ್ರತ್ಯೇಕತೆಯಲ್ಲಿ ಉಳಿಯುವಾಗ ನಿಮಗೆ ಉಸಿರಾಟದ ತೊಂದರೆ ಇದ್ದರೆ, ಆಮ್ಲಜನಕದ ಮಟ್ಟವು ಶೇಕಡಾ 94 ಕ್ಕಿಂತ ಕಡಿಮೆಯಾಗುತ್ತಿದ್ದರೆ, ಎದೆ ನೋವು ಅಥವಾ ಇನ್ನಾವುದೇ ಸಮಸ್ಯೆ ಇದ್ದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ ಎಂದು ಸಲಹೆ ನೀಡಲಾಗಿದೆ. 10 ದಿನಗಳ ಕಾಲ ಮನೆಯ ಪ್ರತ್ಯೇಕತೆ ಮತ್ತು ಸತತ ಮೂರು ದಿನಗಳವರೆಗೆ ಜ್ವರ ಬರದೆ ಹೋದಲ್ಲಿ ನೀವು ಮನೆಯ ಪ್ರತ್ಯೇಕತೆಯಿಂದ ಹೊರಬರಬಹುದು ಮತ್ತು ಆ ಸಮಯದಲ್ಲಿ ಪರೀಕ್ಷೆಯ ಅಗತ್ಯವಿಲ್ಲ ಎಂದು ಹೇಳಲಾಗಿದೆ.
ಕೊರೊನಾ ಸೋಂಕಿನ ನಂತರ ಕಳೆದುಕೊಂಡ ವಾಸನೆ ಗ್ರಹಿಕೆಯ ಶಕ್ತಿ ಮತ್ತು ರುಚಿ ಮರಳಿ ಪಡೆಯುವುದು ಹೇಗೆ?
ಕೆಯರ್ ಟೇಕರ್ ಗಳಿಗೆ ನಿರ್ದೇಶನಗಳು
>> ಎಲ್ಲಾ ಸಮಯಗಳಲ್ಲಿ ರೋಗಿಗಳ ಕಾಳಜಿ ವಹಿಸಲು ಒಬ್ಬ ಕೆಯರ್ ಟೇಕರ್ ಉಪಸ್ಥಿತರಿರಬೇಕು ಹಾಗೂ ಚಿಕಿತ್ಸೆಯ ಅವಧಿಯಲ್ಲಿ ಆಸ್ಪತ್ರೆ ಹಾಗೂ ಕೆಯರ್ ಟೇಕರ್ ಗಳ ನಿರಂತರ ಸಂವಹನ ನಡೆಯುತ್ತಿರಬೇಕು.
>> ಕೆಯರ್ ಟೇಕರ್ ಹಾಗೂ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬರುವ ಜನರಿಗೆ ವೈದ್ಯಾಧಿಕಾರಿಗಳ ಸಲಹೆಯ ಪ್ರಕಾರ ಹಾಗೂ ಪ್ರೋಟೋಕಾಲ್ ಆಧಾರದ ಮೇಲೆ ಹೈಡ್ರಾಕ್ಸಿಕ್ಲೋರೋಕ್ವಿನ್ ಪ್ರೋಫಿಲ್ಯಾಕ್ಸಿಸ್ ನೀಡಬೇಕು.
>> ಕೊರೊನಾ ಸೋಂಕಿತರ ಕೊಠಡಿಗೆ ಪ್ರವೇಶ ಮಾಡುವ ಮೊದಲು ಕೆಯರ್ ಟೇಕರ್ N95 ಅಥವಾ ಟ್ರಿಪಲ್ ಲೇಯರ್ ಮಾಸ್ಕ್ ಅವಶ್ಯವಾಗಿ ಧರಿಸಬೇಕು.
>> ಕಾಳಜಿವಹಿಸುವವರು ತಮ್ಮ ಮುಖ, ಮೂಗು, ಕಣ್ಣುಗಳನ್ನು ಸ್ಪರ್ಶಿಸುವುದರಿಂದ ದೂರ ಇರಬೇಕು.
ಇದನ್ನೂ ಓದಿ-ಕೊರೋನಾ ಲಸಿಕೆಯ ಅಡ್ಡಪರಿಣಾಮಗಳಿಂದ ರಕ್ಷಿಸಿಕೊಳ್ಳಲು ಇಲ್ಲಿದೆ 5 ಆಹಾರಗಳು..!
ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿರುವ ಚಿಕಿತ್ಸೆ ಇದು
>> ವೈದ್ಯರ ಸಲಹೆಯ ಮೇರೆಗೆ ಇತರೆ ಕೋ-ಮಾರ್ಬಿಡ್ ರೋಗಗಳ ಔಷಧಿ ಸೇವನೆ ಮುಂದುವರೆಸಬೇಕು.
>>ಒಂದು ವೇಳೆ ಜ್ವರ ನಿಯಂತ್ರಣ ತಪ್ಪಿದರೆ ಪ್ಯಾರಾಸಿಟಾಮಲ್ 650 ಮಾತ್ರೆಯನ್ನು ದಿನದಲ್ಲಿ ನಾಲ್ಕು ಬಾರಿ ಸೇವಿಸಬಹುದು. ಇದಲ್ಲದೆ ವೈದ್ಯರನ್ನು ಸಂಪರ್ಕಿಸಬಹುದು ಹಾಗೂ ಅವರ ಸಲಹೆ ಪಡೆದು ನೋಪ್ರೊಕ್ಸೇನ್ 250mg ಗಳಂತಹ ನಾನ್-ಸ್ಟೆರಾಯಿಡಲ್ ಆಂಟಿ ಇನ್ಫ್ಲೇಮೇಟರಿ ಔಷಧಿಯನ್ನು ದಿನದಲ್ಲಿ ಎರಡು ಬಾರಿ ಪಡೆದುಕೊಳ್ಳಬಹುದು.
>> 3 ರಿಂದ 5 ದಿನಗಳ ಅವಧಿಗೆ ಐವರ್ ಮ್ಯಾಕ್ಸಿನ್ (200mg) ಮಾತ್ರೆಗಳನ್ನು ದಿನದಲ್ಲಿ ಒಂದು ಬಾರಿ ತೆಗೆದುಕೊಳ್ಳಬಹುದು.
>> ಐದು ದಿನಗಳಿಗಿಂತ ಅಧಿಕ ಕಾಲ /ಕೆಮ್ಮು ಮುಂದುವರೆದರೆ, ಇನ್ಹೆಲೆಶನ್ ಬುಡೆಸೊನೈಡ್ ನ 800MCG ಡೋಸ್ ದಿನದಲ್ಲಿ ಎರಡು ಬಾರಿ ನೀಡಬಹುದು.
>> ರೆಮ್ದೆಸಿವಿರ್ ಇಂಜೆಕ್ಷನ್ ಅನ್ನು ಕೇವಲ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುವುದು. ಹೀಗಾಗಿ ಅದನ್ನು ಮನೆಯಲ್ಲಿ ಸಂಗ್ರಹಿಸಿಡಬೇಡಿ ಅಥವಾ ಆ ರೀತಿಯ ಪ್ರಯತ್ನ ಮಾಡಬೇಡಿ ಎಂದು ಸಚಿವಾಲಯ ಸಲಹೆ ನೀಡಿದೆ.
ಇದನ್ನೂ ಓದಿ-'Corona Vaccine ಫಾರ್ಮುಲಾ ಹಂಚಿಕೊಳ್ಳಲು ಅದು ಪಾಕ ವಿಧಾನ ಅಲ್ಲ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.