ಕೇವಲ ಎರಡೇ ಷರತ್ತಿನಲ್ಲಿ ಸಿಗುತ್ತೆ ಅಗ್ಗದ Home Loan
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ಗೃಹ ಸಾಲ ತೆಗೆದುಕೊಳ್ಳಲು ಎರಡು ಸುಲಭ ಷರತ್ತುಗಳನ್ನು ಹಾಕಿದೆ. ಮೊದಲ ಷರತ್ತು ಎಂದರೆ ಸಾಲಗಾರನ ಕ್ರೆಡಿಟ್ ಸ್ಕೋರ್ (ಸಿಬಿಲ್) 700 ಕ್ಕಿಂತ ಕಡಿಮೆಯಿರಬಾರದು ಮತ್ತು ಎರಡನೆಯ ಷರತ್ತು ಎಂದರೆ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವವರಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ.
ನವದೆಹಲಿ: ಮನೆ ಖರೀದಿಸಲು ಗೃಹ ಸಾಲ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ ಈ ಸುದ್ದಿ ನಿಮ್ಮ ಉಪಯೋಗಕ್ಕೆ ಬರಬಹುದು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union bank of india) ಇದುವರೆಗೆ ಅಗ್ಗದ ಗೃಹ ಸಾಲವನ್ನು ನೀಡಿದೆ. ಬ್ಯಾಂಕ್ ಗೃಹ ಸಾಲದ ಪ್ರಮಾಣವನ್ನು ಶೇ 6.7 ಕ್ಕೆ ಇಳಿಸಿದೆ.
ಮಾರುಕಟ್ಟೆಯ ಪ್ರಕಾರ ಇದು ಗೃಹ ಸಾಲದ (Home Loan) ಅತ್ಯಂತ ಕಡಿಮೆ ದರವಾಗಿದೆ. ಏಕೆಂದರೆ ಇತರ ಎಲ್ಲ ಬ್ಯಾಂಕುಗಳ ದರ ಇದಕ್ಕಿಂತ ಹೆಚ್ಚಾಗಿದೆ. ಆದರೆ ಬ್ಯಾಂಕ್ ಇದಕ್ಕಾಗಿ ಎರಡು ಷರತ್ತುಗಳನ್ನು ವಿಧಿಸಿದೆ.
ಮಹಿಳೆಯರನ್ನು ನಿಮ್ಮ ಹೂಡಿಕೆ ಪಾಲುದಾರರನ್ನಾಗಿ ಮಾಡಿ ಪ್ರತಿ ಹಂತದಲ್ಲೂ ಪಡೆಯಿರಿ ಲಾಭ
ಈ ಎರಡು ಷರತ್ತುಗಳ ಮೇಲೆ ಅಗ್ಗದ ಗೃಹ ಸಾಲ ಲಭ್ಯ-
ಶೇಕಡಾ 6.7ರ ಬಡ್ಡಿ ದರದಲ್ಲಿ ಗೃಹ ಸಾಲವನ್ನು ತೆಗೆದುಕೊಳ್ಳಲು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ಎರಡು ಸುಲಭ ಷರತ್ತುಗಳನ್ನು ಹಾಕಿದೆ. ಮೊದಲ ಷರತ್ತು ಎಂದರೆ ಸಾಲಗಾರನ ಕ್ರೆಡಿಟ್ ಸ್ಕೋರ್ (CIBIL) 700 ಕ್ಕಿಂತ ಕಡಿಮೆಯಿರಬಾರದು.ಎರಡನೆಯ ಷರತ್ತು ಎಂದರೆ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವವರಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ.
ಬಡ್ಡಿದರ ಸ್ಲಾಬ್ ಗಳು:
ಸಾಲಕ್ಕಾಗಿ ಬ್ಯಾಂಕ್ ವಿವಿಧ ಸ್ಲಾಬ್ ಗಳನ್ನು ತಯಾರಿಸಿದೆ. ವೇತನ ಹೊಂದಿರುವ ಜನರು 30 ಲಕ್ಷ ರೂ.ವರೆಗಿನ ಗೃಹ ಸಾಲಕ್ಕೆ ಕೇವಲ 6.7 ರಷ್ಟು ಬಡ್ಡಿಯನ್ನು ಮಾತ್ರ ಪಾವತಿಸಬೇಕಾಗುತ್ತದೆ. 30 ಲಕ್ಷದಿಂದ 75 ಲಕ್ಷ ರೂ.ವರೆಗಿನ ಗೃಹ ಸಾಲಕ್ಕೆ ಬಡ್ಡಿದರ ಶೇ 6.95 ರಷ್ಟಿದೆ. 75 ಲಕ್ಷ ರೂ.ಗಿಂತ ಹೆಚ್ಚಿನ ಗೃಹ ಸಾಲಗಳ ಮೇಲಿನ ಆರಂಭಿಕ ಬಡ್ಡಿದರವನ್ನು ಶೇಕಡಾ 7 ರಂತೆ ಬ್ಯಾಂಕ್ ಇರಿಸಿದೆ.