New Parliament Inauguration: ಪ್ರಧಾನಿಯವರು ಸಂಸತ್ ಭವನವನ್ನು ಉದ್ಘಾಟನೆ ಮಾಡುವುದು ತಪ್ಪು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಹೊಸ ಸಂಸತ್ ಭವನವನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕೇ ಹೊರತು ಪ್ರಧಾನಿಯಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಬರುವ ಮೇ 28 ರಂದು, ಹೊಸದಾಗಿ ನಿರ್ಮಿಸಲಾದ ಸಂಸತ್ತನ್ನು ಪ್ರಧಾನಿಯವರು ಉದ್ಘಾಟಿಸಲಿದ್ದಾರೆ. ಸಂಸತ್ ಭವನದ ಕಾಮಗಾರಿ ಪೂರ್ಣಗೊಂಡ ಬಳಿಕ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಉದ್ಘಾಟನೆ ಮಾಡುವಂತೆ ಆಹ್ವಾನಿಸಿದ್ದಾರೆ. ಲೋಕಸಭೆ ಸೆಕ್ರೆಟರಿಯೇಟ್ ಗುರುವಾರ (ಮೇ 18) ಈ ಮಾಹಿತಿಯನ್ನು ಹಂಚಿಕೊಂಡಿದೆ.


COMMERCIAL BREAK
SCROLL TO CONTINUE READING

ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದ್ದಾರೆ. ಸಂಸತ್ ಭವನ ನಿರ್ಮಾಣದ ಸಂಪೂರ್ಣ ಶ್ರಮ ನರೇಂದ್ರ ಮೋದಿಯವರದ್ದು ಎಂದರು. ನರೇಂದ್ರ ಮೋದಿಯವರ ಯಾವುದೇ ಒಳ್ಳೆಯ ಕೆಲಸ ರಾಹುಲ್ ಗಾಂಧಿಗೆ ಕಾಣುವುದಿಲ್ಲ ಎಂದು ಪ್ರಸಾದ್ ಹೇಳಿದ್ದಾರೆ.


ಇದನ್ನೂ ಓದಿ-Rajasthan: ಜೈಪುರ್ ನಲ್ಲಿ ಕಾಣಿಸಿಕೊಂಡ ಹಿಂದೂಗಳ ಪಲಾಯನದ ಪೋಸ್ಟರ್ ಗಳು, ಕೆಂಡಾಮಂಡಲವಾದ ಬಿಜೆಪಿ


ಗುರಿಯಾಗಿಸಿದ ಕಾಂಗ್ರೆಸ್ 
ಈ ಹಿಂದೆ ಸಂಸತ್ ಭವನ ಉದ್ಘಾಟನೆ ದಿನಾಂಕದ ಬಗ್ಗೆ ಕಾಂಗ್ರೆಸ್ ಪ್ರಶ್ನೆಗಳನ್ನು ಎತ್ತಿತ್ತು. ವಾಸ್ತವವಾಗಿ, ಮೇ 28 ವಿನಾಯಕ ದಾಮೋದರ್ ಸಾವರ್ಕರ್ ಅವರ ಜನ್ಮದಿನ. ಹೀಗಿರುವಾಗ ಈ ದಿನವನ್ನು ಆಯ್ಕೆ ಮಾಡಿಕೊಂಡಿರುವುದು ಕೇವಲ ಕಾಕತಾಳೀಯವೇ ಅಥವಾ ತಂತ್ರಗಾರಿಕೆಯಡಿಯಲ್ಲಿ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗಳು ಅದು ಉದ್ಭವಿಸಿತ್ತು.


ಇದನ್ನೂ ಓದಿ-MIG 21 Fighter Jet: ಇನ್ಮುಂದೆ ಯುದ್ಧ ಮೈದಾನಕ್ಕೆ ಇಳಿಯಲ್ಲ ಮಿಗ್ 21 ಫೈಟರ್ ಜೆಟ್ ಗಳು, ಕಾರಣ ಇಲ್ಲಿದೆ


ಹೊಸ ಸಂಸತ್ ಭವನದ ಅಗತ್ಯವೇನೆಂದು ಪ್ರಶ್ನಿಸಿದ ಕಾಂಗ್ರೆಸ್, ಇದನ್ನು ಪ್ರಧಾನಿ ಮೋದಿಯವರ ವೈಯಕ್ತಿಕ ಮಹತ್ವಾಕಾಂಕ್ಷೆ ಯೋಜನೆ ಎಂದು ಬಣ್ಣಿಸಿತ್ತು. ಪ್ರತಿಪಕ್ಷಗಳ ಧ್ವನಿಯನ್ನೇ ಒತ್ತಿರುವ ಇಂತಹ ಸಂದರ್ಭದಲ್ಲಿ ಹೊಸ ಕಟ್ಟಡದ ಅವಶ್ಯಕತೆ ಏನಿತ್ತು ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ