Accident in Ambala: ಭೀಕರ ರಸ್ತೆ ಅಪಘಾತ! 3 ಟೂರಿಸ್ಟ್ ಬಸ್ಗಳ ನಡುವೆ ಡಿಕ್ಕಿ, 5 ಪ್ರಯಾಣಿಕರ ಮೃತ್ಯು, 10 ಮಂದಿಗೆ ಗಾಯ
Road Accident In Ambala : ಸೋಮವಾರ ಬೆಳಗ್ಗೆ ಅಂಬಾಲಾ-ದೆಹಲಿ ಹೆದ್ದಾರಿಯಲ್ಲಿ ಕತ್ರಾದಿಂದ ದೆಹಲಿಗೆ ಹೋಗುತ್ತಿದ್ದ 3 ಪ್ರವಾಸಿ ಡಿಲಕ್ಸ್ ಬಸ್‌ಗಳು ಡಿಕ್ಕಿ ಹೊಡೆದಿದೆ. ಭೀಕರ ರಸ್ತೆ ಅಪಘಾತದಲ್ಲಿ 5 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
Road Accident In Ambala: ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ, ಈ ಅಪಘಾತದಲ್ಲಿ ಸುಮಾರು 10 ಜನರು ಗಾಯಗೊಂಡಿದ್ದಾರೆ. 3 ಪ್ರವಾಸಿ ಬಸ್‌ಗಳು (Tourist Buses) ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.
ಸ್ಥಳೀಯ ಮಾಧ್ಯಮಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಅಪಘಾತದಲ್ಲಿ ಪರಸ್ಪರ ಡಿಕ್ಕಿ ಹೊಡೆದಿರುವ ಮೂರು ಪ್ರವಾಸಿ ಬಸ್‌ಗಳು (Tourist Buses) ಕತ್ರಾದಿಂದ ದೆಹಲಿಗೆ ಹೋಗುತ್ತಿದ್ದವು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಭಯಾನಕ ಮತ್ತು ನೋವಿನ ಅಪಘಾತವು ಚಂಡೀಗಢ-ದೆಹಲಿ ಹೆದ್ದಾರಿಯಲ್ಲಿ (Chandigarh-Delhi Highway) ಸಂಭವಿಸಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಶಾಸಕ ಅಸೀಂ ಗೋಯಲ್ ಕೂಡ ಆಸ್ಪತ್ರೆಗೆ ಆಗಮಿಸಿ, ಗಾಯಾಳುಗಳ ಸ್ಥಿತಿಗತಿ ವಿಚಾರಿಸಿದರು ಎಂದು ತಿಳಿದುಬಂದಿದೆ.
Omicron: ಎರಡನೇ ಡೋಸ್ ಪಡೆದ ಎಷ್ಟು ತಿಂಗಳ ನಂತರ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು?
ಈ ಭೀಕರ ರಸ್ತೆ ಅಪಘಾತದಲ್ಲಿ (Road Accident) ಛತ್ತೀಸ್‌ಗಢ ನಿವಾಸಿ 44 ವರ್ಷದ ಮೀನಾ ದೇವಿ, ಜಾರ್ಖಂಡ್‌ನ 21 ವರ್ಷದ ರಾಹುಲ್, ಛತ್ತೀಸ್‌ಗಢದ 53 ವರ್ಷದ ರೋಹಿತ್, ಉತ್ತರ ಪ್ರದೇಶದ ಖುಷಿ ನಗರ ನಿವಾಸಿ 22 ವರ್ಷದ ಪ್ರದೀಪ್ ಮತ್ತು ಇನ್ನೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಅಂಬಾಲಾದ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಇದನ್ನೂ ಓದಿ- ತಿರುಪತಿ ಭಕ್ತರಿಗೆ ಮಹತ್ವದ ಮಾಹಿತಿ, ಇಂದಿನಿಂದ ಸರ್ವದರ್ಶನ ಟಿಕೆಟ್ ಬಿಡುಗಡೆ
ಪ್ರಕರಣದ ತನಿಖೆ ಮುಂದುವರಿದಿದೆ:
ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಅಪಘಾತದ ವೇಳೆ ಪ್ರಯಾಣಿಕರೆಲ್ಲರೂ ಮಲಗಿದ್ದರು ಎಂದು ಹೇಳಲಾಗುತ್ತಿದೆ. ಮುಂಭಾಗದಲ್ಲಿ ಓಡುತ್ತಿದ್ದ ಬಸ್ ಏಕಾಏಕಿ ನಿಂತ ತಕ್ಷಣ ಎಲ್ಲ ಬಸ್ ಗಳು ಪರಸ್ಪರ ಡಿಕ್ಕಿ ಹೊಡೆದವು ಎಂದು ಹೇಳಲಾಗುತ್ತಿದೆ. ಅಪಘಾತದಲ್ಲಿ ಗಾಯಗೊಂಡವರು ತಾವು ವೈಷ್ಣೋ ದೇವಿಯ ದರ್ಶನಕ್ಕೆ ಹೋಗಿ ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.