Omicron: ಎರಡನೇ ಡೋಸ್ ಪಡೆದ ಎಷ್ಟು ತಿಂಗಳ ನಂತರ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು?

Booster Dose Amid Omicron Crisis: ಜನವರಿ 10 ರಿಂದ, ಫ್ರಂಟ್ ಲೈನ್ ವರ್ಕರ್ಸ್ ಮತ್ತು ವೈದ್ಯಕೀಯ ಸಿಬ್ಬಂದಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಇದಲ್ಲದೆ, 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅವರ ವೈದ್ಯರ ಸಲಹೆಯ ಮೇರೆಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ.  

Written by - Yashaswini V | Last Updated : Dec 27, 2021, 09:44 AM IST
  • ಜನವರಿ 3 ರಿಂದ 15-18 ವರ್ಷ ವಯಸ್ಸಿನ ಹದಿಹರೆಯದವರಿಗೆ ಕೋವಿಡ್ -19 ಲಸಿಕೆ ನೀಡಲಾಗುವುದು
  • ಭಾರತದ ವಯಸ್ಕ ಜನಸಂಖ್ಯೆಯ ಶೇಕಡಾ 61 ಕ್ಕಿಂತ ಹೆಚ್ಚು ಜನರು ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾ
  • ಸುಮಾರು 90 ಪ್ರತಿಶತದಷ್ಟು ಜನರು ಮೊದಲ ಡೋಸ್ ಅನ್ನು ಸ್ವೀಕರಿಸಿದ್ದಾರೆ
Omicron: ಎರಡನೇ ಡೋಸ್ ಪಡೆದ ಎಷ್ಟು ತಿಂಗಳ ನಂತರ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು? title=
Who and when will get Covid vaccine booster dose

Booster Dose Amid Omicron Crisis: ಓಮಿಕ್ರಾನ್ ಬಿಕ್ಕಟ್ಟಿನ ಮಧ್ಯೆ ಬೂಸ್ಟರ್ ಡೋಸ್ ವಿಷಯ  ಹೆಚ್ಚು ಸದ್ದು ಮಾಡುತ್ತಿದೆ. ಕರೋನಾವೈರಸ್ ಲಸಿಕೆಯ ಎರಡನೇ ಡೋಸ್ ಮತ್ತು ಬೂಸ್ಟರ್ ಡೋಸ್ ನಡುವಿನ ಮಧ್ಯಂತರವು 9 ರಿಂದ 12 ತಿಂಗಳುಗಳಾಗಬಹುದು. ಪ್ರಸ್ತುತ ಭಾರತದ ವ್ಯಾಕ್ಸಿನೇಷನ್ ಪ್ರೋಗ್ರಾಂ - ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ನಲ್ಲಿ ಬಳಸುತ್ತಿರುವ ಲಸಿಕೆಗಳ ಅಂತರದ ನಿರ್ದಿಷ್ಟತೆಗಳನ್ನು ರೂಪಿಸಲಾಗುತ್ತಿದೆ ಮತ್ತು ಈ ಕುರಿತು  ಶೀಘ್ರದಲ್ಲೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ನಿರೀಕ್ಷಿಸಲಾಗಿದೆ.

"ಇಮ್ಯುನೈಸೇಶನ್ ಇಲಾಖೆ ಮತ್ತು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಜಿಐ) ಈ ವಿಷಯಗಳನ್ನು ಚರ್ಚಿಸಿದ ನಂತರ, ಕೋವಿಡ್ ಲಸಿಕೆಯ (Covid Vaccine) ಎರಡನೇ ಡೋಸ್ ಮತ್ತು ಬೂಸ್ಟರ್ ಡೋಸ್ ನಡುವಿನ ಅಂತರವು 9 ರಿಂದ 12 ತಿಂಗಳುಗಳಾಗಬಹುದು" ಎಂಬ ನಿರ್ಧಾರಕ್ಕೆ ಬಂದಿರಬಹುದು ಎಂದು ಮೂಲವೊಂದು ತಿಳಿಸಿದೆ.

ಇದನ್ನೂ ಓದಿ-  Omicron Symptoms: ಓಮಿಕ್ರಾನ್‌ನ ಮೊದಲ ರೋಗಲಕ್ಷಣವನ್ನು ಧ್ವನಿ ಮೂಲಕವೂ ಗುರುತಿಸಬಹುದು

ಶನಿವಾರ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), 15-18 ವರ್ಷ ವಯಸ್ಸಿನ ಹದಿಹರೆಯದವರಿಗೆ ಕೋವಿಡ್ -19 ವಿರುದ್ಧ ಲಸಿಕೆಯನ್ನು ಜನವರಿ 3 ರಿಂದ ಪ್ರಾರಂಭಿಸಲಾಗುವುದು ಮತ್ತು ವೈದ್ಯಕೀಯ ಸಿಬ್ಬಂದಿ ಮತ್ತು ಫ್ರಂಟ್ ಲೈನ್ ವರ್ಕರ್ಸ್ ಗಳಿಗೂ ಜನವರಿ 10 ರಿಂದ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಘೋಷಿಸಿದರು. ಕರೋನಾ ವೈರಸ್‌ನ ಓಮಿಕ್ರಾನ್ ರೂಪಾಂತರಕ್ಕೆ ಸಂಬಂಧಿಸಿದ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಇದನ್ನೂ ಓದಿ-  ಓಮಿಕ್ರಾನ್ ಪ್ರಕರಣ : ಸಿನಿಮಾ ಮಂದಿರ ಮುಚ್ಚಿರುವ ನಿರ್ಧಾರ ಖಂಡಿಸಿ ಬೀದಿಗಿಳಿದು ಪ್ರತಿಭಟಿಸಿದ ನಾಗರೀಕರು

ಭಾರತದ ವಯಸ್ಕ ಜನಸಂಖ್ಯೆಯ ಶೇಕಡಾ 61 ಕ್ಕಿಂತ ಹೆಚ್ಚು ಜನರು ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಅಂತೆಯೇ, ವಯಸ್ಕ ಜನಸಂಖ್ಯೆಯ ಸುಮಾರು 90 ಪ್ರತಿಶತದಷ್ಟು ಜನರು ಮೊದಲ ಡೋಸ್ ಅನ್ನು ಸ್ವೀಕರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News