ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದದ ತೀರ್ಪು ಏನಾಗಲಿದೆ ಎಂಬ ಬಗ್ಗೆ ಬಿಜೆಪಿ ಮತ್ತು ಎನ್‌ಡಿಎ ಹೇಗೆ ಗೊತ್ತು ಎಂದು ಎಐಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಅಯೋಧ್ಯೆ ಪ್ರಕರಣದ 26ನೇ ದಿನದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಈ ವಿವಾದದ ಚರ್ಚೆಯನ್ನು ಅಕ್ಟೋಬರ್ 18 ರೊಳಗೆ ಮುಕ್ತಾಯಗೊಳಿಸಲಾಗುವುದು ಎಂದು ಎಲ್ಲಾ ಪಕ್ಷಗಳಿಗೆ ತಿಳಿಸಿರುವ ಬೆನ್ನಲ್ಲೇ ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ಪಕ್ಷವು ಚರ್ಚೆಗೆ ಪೂರ್ಣ ಸಮಯವನ್ನು ಪಡೆಯಬೇಕು ಎಂದಿದ್ದಾರೆ.


ರಾಮ ಮಂದಿರ ವಿಷಯದ ಬಗ್ಗೆ ಮಧ್ಯಸ್ಥಿಕೆದಾರರ ಪತ್ರ ಸೋರಿಕೆಯಾಗಿರುವ ಬಗ್ಗೆ ಪ್ರಶ್ನಿಸಿದ ಓವೈಸಿ, ಈ ಪತ್ರವು ಮಾಧ್ಯಮಗಳಿಗೆ ಹೇಗೆ ತಲುಪಿತು ಎಂದು ಕೇಳಿದರು. 


ಮತ್ತೊಂದೆಡೆ ಬಿಜೆಪಿ ನಾಯಕರು ಸುಪ್ರೀಂ ಕೋರ್ಟ್ ತೀರ್ಪು ತಮ್ಮ ಪರವಾಗಿ ಬರಲಿದೆ ಎಂದು ಹೇಳುತ್ತಿದ್ದಾರೆ. ನ್ಯಾಯಾಲಯದ ತೀರ್ಪಿನ ಬಗ್ಗೆ ಇವರು ಹೇಗೆ ಹೇಳುತ್ತಾರೆ? ಈ ಬಗ್ಗೆ ಸುಪ್ರೀಂ ತೀರ್ಪು ನೀಡಬೇಕು ಚುನಾವಣೆ ಬಂದಾಗ ಮಾತ್ರ ಅಯೋಧ್ಯೆ ವಿಚಾರ ಮಾತನಾಡುವ  ಬಿಜೆಪಿ ನಾಯಕರು, ಚುನಾವಣೆ ಬಳಿಕ ಅದನ್ನು ಮರೆತೇ ಬಿಡುತ್ತಾರೆ ಎಂದು ಟೀಕಿಸಿದರು.