ನವದೆಹಲಿ: ಹೌದು, ನಿಮಗೆ ಈ ಪ್ರಶ್ನೆ ಒಂದು ರೀತಿ ವಿಚಿತ್ರವೆನಿಸಬಹುದು, ಆದರೂ ಕೂಡ ಇದು ಸತ್ಯದ ಸಂಗತಿ.


COMMERCIAL BREAK
SCROLL TO CONTINUE READING

ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೋವುಗಳು ವೇಗದ ರೈಲುಗಳಿಗೆ ಸಿಕ್ಕು ಸಾಯುತ್ತಿವೆ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ, ಅದರಲ್ಲೂ ಹಿಂದಿ ಭಾಗದ ಉತ್ತರ ಭಾರತದಲ್ಲಿ ಈ ಗೋವುಗಳ ಸಾವಿನ ಪ್ರಮಾಣ ಹೆಚ್ಚಿನ ರೀತಿಯಲ್ಲಿ ಸಂಭವಿಸುತ್ತಿವೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.


ಉತ್ತರ ಪ್ರದೇಶದಲ್ಲಿನ ಉತ್ತರ-ಮಧ್ಯ ರೇಲ್ವೇಯೊಂದರಲ್ಲಿ 1.300 ಪ್ರಕರಣಗಳು ಈ ವರ್ಷದ  ಎಪ್ರಿಲ್ ತಿಂಗಳಿಂದ ಸಂಭವಿಸಿದ್ದು.ಇದು ಕಳೆದ ವರ್ಷಕ್ಕಿಂತ ಪ್ರತಿಶತ 271 ರಷ್ಟು ಇಂತಹ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ.ಕಳೆದ ವರ್ಷ 349 ಗೋವುಗಳು ಸಾವನ್ನಪ್ಪಿದ್ದವು. 2015-16 ರಲ್ಲಿ ದೇಶಾದ್ಯಂತ 2,183 ಪ್ರಕರಣಗಳು ಸಂಭವಿಸಿದ್ದವು, ಆದರೆ 2018 ರ ಮಾರ್ಚ್ನಲ್ಲಿ ಇಂತಹ ಪ್ರಕರಣಗಳ ಸಂಖ್ಯೆ10,105ಕ್ಕೆ ಹೆಚ್ಚಳವಾಗಿದೆ. ಅಂದ್ರೆ ಒಟ್ಟು 362 ಪ್ರತಿ ಶತದಷ್ಟು ಹೆಚ್ಚಳ ಕಂಡಿದೆ.ಈ ವರ್ಷ ಎಪ್ರಿಲ್ ನಿಂದ ವೇಗದ ರೈಲುಗಳಿಗೆ ಸಿಲುಕಿ ಒಟ್ಟು 6,900 ಹಸುಗಳು ಮೃತಪಟ್ಟಿವೆ.


ಈ ಗೋವು ಹತ್ಯೆಗಳ ಕುರಿತಾಗಿ ಪ್ರತಿಕ್ರಯಿಸಿರುವ ಪಂಜಾಬ್ ಡೈರಿ ಸಂಘದ ಅಧ್ಯಕ್ಷ ದಲ್ಜೀತ್ ಸಿಂಗ್ "ಗೋವು ಹತ್ಯೆಗಳು ಸಂಭವಿಸುತ್ತಿರುವುದು ರಸ್ತೆಗಳು ಮತ್ತು ರೇಲ್ವೆ ಹಳಿಗಳ ಹೆಚ್ಚಳದಿಂದ ಅಪಘಾತಕ್ಕಿಡಾಗುತ್ತಿವೆ.ಈ ಹಸುಗಳೆಲ್ಲ ಹಾಲು ನೀಡುವುದನ್ನು ಸ್ಥಗೀತಗೊಳಿಸಿದ ನಂತರ ಹೀಗೆ ದಾರಿ ತಪ್ಪಿ ಇಂತಹ ಅನಾಹುತಕ್ಕೆ ಇಡಾಗುತ್ತಿವೆ, ಇವೆಲ್ಲಾ ದೇಸಿ ತಳಿಗಳು. ಬರುವ ದಿನಗಳಲ್ಲಿ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ.ಇದು ಗೋವು ಹತ್ಯೆ ಅಲ್ಲವೇ?"ಎಂದು ಪ್ರಶ್ನಿಸಿದ್ದಾರೆ.