ರೈಲ್ವೆಯಲ್ಲಿ ಹೇಗೆ ಎಮರ್ಜೆನ್ಸಿ ಕೋಟಾದಡಿಯಲ್ಲಿ ಸೀಟ್ ಗಳಿಗೆ ಪ್ರಾಸಶ್ತ್ಯ ನೀಡಲಾಗುತ್ತದೆ?
ನವದೆಹಲಿ: ಭಾರತೀಯ ರೈಲ್ವೆಯಲ್ಲಿ ವಿವಿಧ ರೈಲುಗಳಲ್ಲಿ ತುರ್ತು ಕೋಟಾದಲ್ಲಿ ಸೀಮಿತ ಸಂಖ್ಯೆಯ ಸೀಟ್ ಗಳನ್ನು ಮೀಸಲಿರಿಸಿದೆ. ಆ ತುರ್ತು ಕೋಟಾಗಳನ್ನು ಉನ್ನತ ಸ್ಥಾನಗಳನ್ನು ಹೊಂದಿರುವ ಅಧಿಕಾರಿಗಳಿಗೆ ವಿವಿಧ ಕ್ಲಾಸ್ ಮತ್ತು ಟ್ರೈನ್ ಗಳಲ್ಲಿ ಮಿಸಲಿಡಲಾಗಿರುತ್ತದೆ ಎಂದು ಮಂಗಳವಾರ ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ.
ರೇಲ್ವೆಯು ತುರ್ತು ಪ್ರಯಾಣವನ್ನು ಪರಿಗಣಿಸಿ "ಕೇಂದ್ರ ಸರ್ಕಾರದ ಮಂತ್ರಿಗಳು, ಗೌರವ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು / ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯಗಳು, ಸಂಸತ್ತಿನ ಸದಸ್ಯರುಗಳಿಗೆ ತುರ್ತು ಪ್ರಯಾಣದ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ, ವೇಟಿಂಗ್ ಲಿಸ್ಟ್ , ಸೀಮಿತ ಸಂಖ್ಯೆಯ ಬರ್ತ್ಗಳನ್ನು ವಿವಿಧ ರೈಲುಗಳಲ್ಲಿ ಮತ್ತು ವಿವಿಧ ಕ್ಲಾಸ್ ಗಳಲ್ಲಿ ತುರ್ತು ಕೋಟಾ ಎಂದು ನಿಗದಿಪಡಿಸಲಾಗಿದೆ " ಎಂದು ರಾಜ್ಯ ಸಭೆಯಲ್ಲಿ ತಿಳಿಸಲಾಗಿದೆ
ರೈಲು ತುರ್ತು ಪ್ರಯಾಣದ ಕೋಟಾದ ಅಡಿಯಲ್ಲಿ ಹೇಗೆ ಆಧ್ಯತೆ ನೀಡಲಾಗುತ್ತದೆ ಎಂಬುದು ಇಲ್ಲಿದೆ.
ಈ ಕೋಟಾವನ್ನು ಆದ್ಯತೆಗೆ ಅನುಗುಣವಾಗಿ ಬಿಡುಗಡೆ ಮಾಡುತ್ತಾರೆ.ಇದನ್ನು ಈ ಹಿಂದಿನಿಂದಲೂ ಅನುಸರಿಸುತ್ತಾ ಬರಲಾಗಿದೆ.
ಸೀಟ್ ಗಳ ಹಂಚಿಕೆಯ ಸಮಯದಲ್ಲಿ, ಎಚ್ಆರ್ಒ ಹೊಂದಿರುವವರು ಮತ್ತು ಸಂಸತ್ತಿನ ಸದಸ್ಯರ ಪ್ರಯಾಣಕ್ಕಾಗಿ ತುರ್ತು ಕೋಟಾವನ್ನು ಮೊದಲ ಪ್ರಾಶಸ್ತ್ಯವಾಗಿ ನೀಡಲಾಗುತ್ತದೆ.
ಅದರ ನಂತರ, ವಿವಿಧ ವಲಯಗಳಿಂದ ಸ್ವೀಕರಿಸಲ್ಪಟ್ಟ ಇತರ ವಿನಂತಿಗಳನ್ನು ಪರಿಗಣಿಸಲಾಗುತ್ತದೆ.ಅದರಲ್ಲಿ ಕೋಟಾವು ಪ್ರಯಾಣಿಕರ ಸ್ಥಿತಿ, ಸರ್ಕಾರಿ ಕರ್ತವ್ಯದ ಪ್ರಯಾಣ, ತುರ್ತುಸ್ಥಿತಿಯ ಸ್ವಭಾವ, ಕುಟುಂಬದಲ್ಲಿ ವಿಮೋಚನೆ, ಅನಾರೋಗ್ಯ, ಕೆಲಸದ ಸಂದರ್ಶನ ಇತ್ಯಾದಿ ಮುಂತಾದ ಅಂಶಗಳನ್ನು ಪರಿಗಣಿಸುತ್ತದೆ.
ತುರ್ತು ಕೋಟಾ ಪ್ರಮುಖವಾಗಿ ವಲಯ ಮತ್ತು / ಮುಖ್ಯ ವಿಭಾಗೀಯ ಮತ್ತು ಕೆಲವು ಪ್ರಮುಖ ಅಲ್ಲದ ರೈಲ್ವೆ ಕೇಂದ್ರಗಳಲ್ಲಿರುತ್ತವೆ
ಈ ವಲಯಗಳು ಮುಖ್ಯವಾಗಿ ಗಝೆಟೆಡ್ ಅಧಿಕಾರಿಗಳ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತವೆ.