ನವದೆಹಲಿ: ಬಹುಶಃ ಸಿರಿವಂತರಾಗುವುದು ಅಥವಾ ಕೋಟ್ಯಾಧಿಪತಿಯಾಗುವ ಕನಸು ಯಾರಿಗೆ ತಾನೇ ಇರಲ್ಲ ಹೇಳಿ?  ಆದರೆ, ಮಿಲಿಯನೇರ್ ಆಗಲು ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರು ಶ್ರೀಮಂತರಾಗುವ ಮೊದಲ ಹೆಜ್ಜೆ ಉಳಿತಾಯ ಎಂದು ಹೇಳುತ್ತಾರೆ. ಶ್ರೀಮಂತರಾಗಲು ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಹಾಕುವುದು ಅವಶ್ಯಕ. ಜೊತೆಗೆ ಸರಿಯಾದ ಸಮಯದಲ್ಲಿ ಈ ಹೆಜ್ಜೆ ಇಡುವುದು ಕೂಡ ಅಷ್ಟೇ ಮಹತ್ವದ್ದಾಗಿದೆ. ಹೆಚ್ಚಿನ ಉಳಿತಾಯ ಹಾಗೂ ಸಂಪತ್ತು ಇವುಗಳ ನಡುವೆ ನೇರ ಸಂಬಂಧವಿದೆ. ಇದಕ್ಕಾಗಿ ಶ್ರೀಮಂತರಾಗಲು 4 ಮಂತ್ರಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ತುಂಬಾ ಅವಶ್ಯಕವಾಗಿದೆ.


COMMERCIAL BREAK
SCROLL TO CONTINUE READING

ಅನ್ವಯಿಕ ಅರ್ಥಶಾಸ್ತ್ರದ  ಪಿತಾಮಹ ಎಂದು ಕರೆಯಲ್ಪಡುವ ರಿಚರ್ಡ್ ಎಚ್. ಥಾಲರ್ ಅವರಿಗೆ 2017 ರಲ್ಲಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅನ್ವಯಿಕ ಅರ್ಥಶಾಸ್ತ್ರಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ರಿಚರ್ಡ್ ಥಾಲರ್ ಅವರು ಶ್ರೀಮಂತರಾಗುವುದು ಬಹಳ ದೊಡ್ಡ ಕೆಲಸವಲ್ಲ ಎಂದು ಹೇಳುತ್ತಾರೆ ಆದರೆ, ಇದಕ್ಕೆ ಏಕಾಗ್ರತೆ ಮತ್ತು ಸಕಾರಾತ್ಮಕತೆ ಬಹಳ ಮುಖ್ಯ. ಸರಿಯಾದ ದಿಕ್ಕಿನಲ್ಲಿ ಸಾಗುವುದು ಮುಖ್ಯ. ಉಳಿತಾಯ ಮತ್ತು ಖರ್ಚಿನ ನಡುವೆ ಹೊಂದಾಣಿಗೆ ಕಾಯ್ದುಕೊಳ್ಳುವುದು ತುಂಬಾ ಅವಶ್ಯಕ ಎಂದು ಅವರು ಹೇಳುತ್ತಾರೆ.


ಮೊದಲ ಮಂತ್ರ : ಉಳಿತಾಯ
ರಿಚರ್ಡ್ ಥಾಲರ್ ಪ್ರಕಾರ, ನೀವು ಹೆಚ್ಚಿಗೆ ಉಳಿತಾಯ ಮಾಡಲು ಬಯಸುತ್ತಿದ್ದರೆ ಈ ಕೆಲಸವನ್ನು ಆದಷ್ಟು ಶೀಘ್ರದಲ್ಲಿಯೇ ಪ್ರಾರಂಭಿಸಿ ಎನ್ನುತ್ತಾರೆ. ಉದಾಹರಣೆಗೆ ಯಾವುದೇ ಓರ್ವ ವ್ಯಕ್ತಿ ತನ್ನ ವಯಸ್ಸಿನ 25ನೇ ವರ್ಷದಲ್ಲಿ ಹೂಡಿಕೆ ಪ್ರಾರಂಭಿಸಿ ವಾರ್ಷಿಕವಾಗಿ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಆ ವ್ಯಕ್ತಿ 60 ನೇ ವಯಸ್ಸಿನಲ್ಲಿ 5 ಕೋಟಿ ರೂ.ಗೆ ಮಾಲೀಕನಾಗಬಹುದು. ಇದರಲ್ಲಿ ವಾರ್ಷಿಕವಾಗಿ ಶೇ.12 ರಷ್ಟು ಆದಾಯ ಅಂದಾಜಿಸಲಾಗಿದೆ. ಆದರೆ ಅದೇ ವ್ಯಕ್ತಿ 10 ವರ್ಷಗಳ ವಿಳಂಬದ ನಂತರ ಈ ಹೂಡಿಕೆ ಆರಂಭಿಸಿದರೆ, 60ನೇ ವರ್ಷದಲ್ಲಿ ಆತ 5 ಕೋಟಿ ರೂ.ಗೆ ಮಾಲೀಕನಾಗಬೇಕಾದರೆ ವಾರ್ಷಿಕವಾಗಿ ಆತ 3.5 ಲಕ್ಷ ರೂ. ಹೂಡಿಕೆ ಮಾಡಬೇಕು. ಇದೆ ರೀತಿ 20 ವರ್ಷಗಳ ವಿಳಂಬದ ಬಳಿಕ ಆತ ಈ ಹೂಡಿಕೆಯನ್ನು ಆರಂಭಿಸಿದರೆ 5 ಕೋಟಿ ರೂ.ಗಳ ಮಾಲೀಕನಾಗಲು ಆತ ವಾರ್ಷಿಕವಾಗಿ 12 ಲಕ್ಷ ರೂ.ಗಳ ಹೂಡಿಕೆ ಮಾಡಬೇಕು. 


ಖರ್ಚಿನ ತಿಳುವಳಿಕೆ
ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಹೆಚ್ಚಿಗೆ ಬಳಸಬೇಡಿ. ಬೋನಸ್ ಸಿಕ್ಕರೂ ಕೂಡ ಅದನ್ನು ಕೂಡ ಒಂದು ಸಂಬಳ ಎಂದು ಭಾವಿಸಿ ಖರ್ಚು-ವೆಚ್ಚದ ಲೆಕ್ಕ ಹಾಕಿ.


ಎರಡನೇ ಮಂತ್ರ: ಉಳಿತಾಯವನ್ನು ಆದಷ್ಟು ಹೆಚ್ಚಿಸಿ
ಸಾಧ್ಯವಾದಷ್ಟು ನಿಮ್ಮ ಉಳಿತಾಯ ಹೆಚ್ಚಳತೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಿ ಎಂದು ಥಾಲರ್ ಹೇಳುತ್ತಾರೆ. ಅಂದರೆ, ವಾರ್ಷಿಕ ಉಳಿತಾಯದ ಪ್ರಮಾಣವನ್ನು ಹೆಚ್ಚಿಸುವ ಮೂಲಕ, ನೀವು ಶೀಘ್ರದಲ್ಲಿಯೇ ನಿಮ್ಮ ಹಣಕಾಸಿನ ಗುರಿಯನ್ನು ತಲುಪಲು ಸಾಧ್ಯವಾಗಬಹುದು. ಒಂದು ವೇಳೆ ನಾವು ಇದನ್ನು ಮಾಡದೆ ಹೋದಲ್ಲಿ ಹಣದುಬ್ಬರದ ದೃಷ್ಟಿಯಿಂದ ಉಳಿತಾಯದ ಅನುಪಾತದಲ್ಲಿ ವೃದ್ಧಿ ಅಪೇಕ್ಷಿಸುವುದು ಸ್ವಲ್ಪ ಕಷ್ಟ ಸಾಧ್ಯ.


ಇದು ಹೇಗೆ ಸಹಕರಿಸುತ್ತದೆ
SIP ಯೋಜನೆಯಲ್ಲಿ  ಸ್ಟೆಪ್-ಅಪ್ ನಿಮ್ಮ ಅವಶ್ಯಕತೆಗೆ ಅನುಗುಣವಾಗಿರುತ್ತದೆ. ಪ್ರತಿ ವರ್ಷ ಪ್ರಮಾಣವನ್ನು 10% ಹೆಚ್ಚಿಸುವ ಅಗತ್ಯವಿಲ್ಲ. ಬಯಸಿದಲ್ಲಿ, ಐದು ಪ್ರತಿಶತ ಕೂಡ ಉಳಿತಾಯವನ್ನು ಹೆಚ್ಚಿಸಬಹುದು.


ಮೂರನೇ ಮಂತ್ರ: ಜಾಣ್ಮೆಯಿಂದ ಹೂಡಿಕೆ ಮಾಡಿ
ಸರಿಯಾದ ಜಾಗದಲ್ಲಿ ನೀವು ಹೂಡಿಕೆ ಮಾಡಿದರೆ ಅದರಿಂದ ನೀವು ಉತ್ತಮ ಆದಾಯವನ್ನು ನಿರೀಕ್ಷಿಸಬಹುದು ಎಂದು ಥಾಲರ್ ಹೇಳುತ್ತಾರೆ. ನಷ್ಟದ ಭಯದಿಂದ ಹೊರಬರಲು. ನಿಮ್ಮ ಬಂಡವಾಳವನ್ನು ತುಂಬಾ ಸರಳವಾಗಿಡಿ. ಹಲವಾರು ಉತ್ಪನ್ನಗಳನ್ನು ಸೇರಿಸುವ ಮೂಲಕ ನಿಮ್ಮ ಪೋರ್ಟ್ಫೋಲಿಯೊವನ್ನು ಸಂಕೀರ್ಣಗೊಳಿಸಬೇಡಿ. ನಿರೀಕ್ಷೆಗೂ ಹೆಚ್ಚಿನ ಆದಾಯ ಅಪೇಕ್ಷಿಸುವುದು ಸರಿಯಲ್ಲ. ಐತಿಹಾಸಿಕ ಆದಾಯವನ್ನು ನೋಡಿ ನಂತರವೇ ಹೂಡಿಕೆ ಮಾಡುವುದು ಉತ್ತಮ ಮತ್ತು ನಿಮ್ಮ ಹೂಡಿಕೆಯಲ್ಲಿ ಶಿಸ್ತನ್ನು ಕಾಪಾಡಿ. ದೀರ್ಘಾವಧಿ SIP ಪ್ರಾರಂಭಿಸಿ. ಪೋರ್ಟ್ಫೋಲಿಯೊವನ್ನು ನಿಯಮಿತವಾಗಿ ಪರಿಶೀಲಿಸಿ.


ನಾಲ್ಕನೆ ಮಂತ್ರ: ಬೇರೆ ಕಾರಣಕ್ಕಾಗಿ ಉಳಿತಾಯದ ಹಣ ಬಳಸಬೇಡಿ
ನಿಮ್ಮ ಹೂಡಿಕೆಯನ್ನು ಗುರಿಯೊಂದಿಗೆ ಜೋಡಿಸುವುದು ಬಹಳ ಮುಖ್ಯ. ಒಂದು ಉದ್ದೇಶಕ್ಕಾಗಿ ಮಾಡಿರುವ ಹೂಡಿಕೆಯನ್ನು ಮತ್ತೊಂದು ಉದ್ದೇಶಕ್ಕಾಗಿ ಬಳಸಬೇಡಿ. ಇದರಿಂದ ನೀವು ನಿಮ್ಮ ಉಳಿತಾಯವನ್ನು ಅವಧಿಗೂ ಮುನ್ನವೇ ವಿಥ್ ಡ್ರಾ ಮಾಡುವ ಸ್ಥಿತಿ ಬಂದೊದಗುತ್ತದೆ ಮತ್ತು ನಿಮ್ಮ ಹೂಡಿಕೆ ಸರಿಯಾಗಿ ವೃದ್ಧಿಯಾಗುವುದಿಲ್ಲ.


ಎಮೆರ್ಜೆನ್ಸಿ ಫಂಡ್
ನಿಮ್ಮ ಹೂಡಿಕೆಯನ್ನು ಸುರಕ್ಷಿತಗೊಳಿಸಲು ಎಮೆರ್ಜೆನ್ಸಿ ಫಂಡ್ ಸೃಷ್ಟಿಸಿ. ಎಮೆರ್ಜೆನ್ಸಿ ಫಂಡ್ ನಿಮಗೆ ಆಪತ್ಕಾಲದಲ್ಲಿ ಸಹಾಯ ಮಾಡುತ್ತದೆ. ಇದರಿಂದ ಒಂದು ವಿಶೇಷ ಗುರಿಗಾಗಿ ನೀವು ಮಾಡಿರುವ ಹೂಡಿಕೆಯಲ್ಲಿ ನೀವು ನಿರಂತರತೆಯನ್ನು ಕಾಯ್ದುಕೊಳ್ಳಬಹುದು.


ಲಾಕ್ ಇನ್ ಇರುವ ಹೂಡಿಕೆಯಲ್ಲಿ ಹಣ ಸೇರಿಸಿ
ನಿಮ್ಮ ಹೂಡಿಕೆಯನ್ನು ಸುನಿಶ್ಚಿತಗೊಳಿಸುವ ಒಂದು ವಿಧಾನ ಎಂದರೆ ಲಾಕ್ ಇನ್ ಆಗಿರುವ ವಿಕಲ್ಪವನ್ನು ಆಯ್ದುಕೊಳ್ಳುವುದು. ಇದರ ಒಂದು ಲಾಭ ಎಂದರೆ, ಇವುಗಳಲ್ಲಿ ನೀವು ಅವಧಿಗೂ ಮುನ್ನ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಒಂದು ವೇಳೆ ಹಿಂದಕ್ಕೆ ಪಡೆದರೂ ಕೂಡ ಹೆಚ್ಚಿನ ಹಾನಿ ಉಂಟಾಗದು.