ನಿಮ್ಮ ಆಧಾರ್ ಕಾರ್ಡ್ ಅನ್ನು ಡ್ರೈವಿಂಗ್ ಲೈಸನ್ಸ್ ಜೊತೆಗೆ ಲಿಂಕ್ ಮಾಡುವ ಬಗ್ಗೆ ಒಂದು ವೇಳೆ ನೀವು ಯೋಚಿಸುತ್ತಿದ್ದರೆ, ನಿಮಗೆ ಉತ್ತಮ ಅವಕಾಶವಿದೆ. ಏಕೆಂದರೆ ಡಿಎಲ್ ಅನ್ನು ಆಧಾರ್‌ಗೆ ಲಿಂಕ್ ಮಾಡುವ ಪ್ರಕ್ರಿಯೆ ಇದೀಗ ಮತ್ತಷ್ಟು ಸುಲಭವಾಗಿದೆ. ನಕಲಿ ಡ್ರೈವಿಂಗ್ ಲೈಸನ್ಸ್ ಅನ್ನು ಸೃಷ್ಟಿಸುವವರನ್ನು, ಡಿಎಲ್-ಆಧಾರ್ ಲಿಂಕ್ ಮೂಲಕವೂ ನಿಷೆಧಿಸಬಹುದಾಗಿದೆ. ಬನ್ನಿ ಹಾಗಾದರೆ ನಿಮ್ಮ ಡ್ರೈವಿಂಗ್ ಲೈಸನ್ಸ್ ಅನ್ನು ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಹೇಗೆ ಸುಲಭವಾಗಿ ಲಿಂಕ್ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ. 


COMMERCIAL BREAK
SCROLL TO CONTINUE READING

ಲಿಂಕ್ ಮಾಡುವ ವಿಧಾನ ಇಲ್ಲಿದೆ


  • ಇದಕ್ಕಾಗಿ ನೀವು ಮೊದಲು sarathi.parivahan.gov ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

  • ಈಗ ನಿಮ್ಮ ಡಿಎಲ್‌ ಯಾವ ರಾಜ್ಯಕ್ಕೆ ಸಂಬಂಧಪಟ್ಟಿದೆ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ

  • ಈಗ ನಿಮ್ಮ ಮುಂದೆ ಒಂದು ವಿಂಡೋ ತೆರೆದುಕೊಳ್ಳಲಿದೆ.

  • ಈಗ ಬಲಭಾಗದಲ್ಲಿ ನೀಡಲಾಗಿರುವ ಮೆನು ಬಾರ್‌ ನಲ್ಲಿರುವ Apply Online ಮೇಲೆ ಕ್ಲಿಕ್ ಮಾಡಿ.

  • ಇದರ ನಂತರ, ಡ್ರೈವಿಂಗ್ ಲೈಸೆನ್ಸ್ (ನವೀಕರಣ -Renewal/ ನಕಲು-Duplicate / ಎಡ್ಲ್ / ಇತರೆ) ನಲ್ಲಿ ಸೇವೆಗಳ ಮೇಲೆ ಕ್ಲಿಕ್ ಮಾಡಿ.


ನಿಮ್ಮ ಮಾಹಿತಿಯನ್ನು ಭರ್ತಿ ಮಾಡಿ
ಇದೀಗ ನಿಮ್ಮ ಮುಂದೆ ನಿಮ್ಮ ಡಿಎಲ್ ಕುರಿತ ಸಂಪೂರ್ಣ ಮಾಹಿತಿ ತೆರೆದುಕೊಳ್ಳಲಿದೆ. ಇದರ ಕೆಳಗೆ, ನೀವು ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಆಯ್ಕೆ ಸಹ ಕಾಣಿಸಿಕೊಳ್ಳಲಿದೆ. ಇದರ ನಂತರ ನೀವು ನಿಮ್ಮ ಆಧಾರ್ ಸಂಖ್ಯೆ ಮತ್ತು ಒಟಿಪಿ ನಮೂದಿಸಬೇಕು ಈಗ ನಿಮ್ಮ ಡಿಎಲ್ ಅನ್ನು ನವೀಕರಿಸಲಾಗುತ್ತದೆ.


ನಿಮ್ಮ ಡಿಎಲ್ ಸುರಕ್ಷತೆಗಾಗಿ ಈ ಜೋಡಣೆಯನ್ನು ನೀವು ಮಾಡಬಹುದು
ಇದುವರೆಗೆ ಸರ್ಕಾರ ನಿಮ್ಮ ಅಧಾರ ಹಾಗೂ ಡ್ರೈವಿಂಗ್ ಲೈಸನ್ಸ್ ಅನ್ನು ಲಿಂಕ್ ಮಾಡುವುದು ಕಡ್ಡಾಯಗೊಳಿಸಿಲ್ಲ. ಆದರೆ, ನಿಮ್ಮ ಡ್ರೈವಿಂಗ್ ಲೈಸನ್ಸ್ ಸುರಕ್ಷತೆಗೆ ಹಾಗೂ ನಕಲಿ ಡ್ರೈವಿಂಗ್ ಲೈಸನ್ಸ್ ಸೃಷ್ಟಿಸುವುದನ್ನು ತಡೆಗಟ್ಟಲು ನೀವು ಈ ಕೆಲಸ ಮಾಡಬಹುದಾಗಿದೆ.