Instagram ನಿಂದ ಕೂಡ ಲಕ್ಷಾಂತರ ರೂ. ಗಳಿಕೆ ಮಾಡಬಹುದು ಗೊತ್ತಾ?
ಇನ್ಸ್ಟಾಗ್ರಾಮ್ನಲ್ಲಿ ಗಳಿಕೆ ಮಾಡಲು ಮೊದಲ ಹೆಜ್ಜೆ ಅಂದರೆ ಅನುಯಾಯಿಗಳನ್ನು ಬೆಳೆಸುವುದು. ನಿಮ್ಮ ಅನುಯಾಯಿಗಳ ಸಂಖ್ಯೆ ಹೆಚ್ಚಾದಾಗ ಮಾತ್ರ ಬ್ರಾಂಡ್ಗಳು ನಿಮ್ಮೊಂದಿಗೆ ಪಾಲುದಾರರಾಗುತ್ತಾರೆ.
ನವದೆಹಲಿ: ಪ್ರತಿಯೊಬ್ಬರೂ ಸಾಮಾಜಿಕ ನೆಟ್ವರ್ಕಿಂಗ್ ಸೈಟ್ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಲು ಇಷ್ಟಪಡುತ್ತಾರೆ, ಆದರೆ ಇದು ಅಗಳಿಕೆಯ ಆನು ಉತ್ತಮ ಮಾರ್ಗ ಎಂಬುದು ಬಹಳ ಕಡಿಮೆ ಜನರಿಗೆ ತಿಳಿಸಿದೆ.
ಈ ವೇದಿಕೆಯಲ್ಲಿ, ಸೆಲೆಬ್ರಿಟಿಗಳು ತಮ್ಮ ಪ್ರತಿ ಪೋಸ್ಟ್ ಗೆ ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಾರೆ. ಈ ಸೆಲೆಬ್ರಿಟಿಗಳು ತಮ್ಮ ಪುಟದಲ್ಲಿ ಉತ್ಪನ್ನ ಅಥವಾ ಸೇವೆಯನ್ನು ಪ್ರಚಾರ ಮಾಡುವ ಮೂಲಕ ದೊಡ್ಡ ಮೊತ್ತವನ್ನು ಗಳಿಸುತ್ತಾರೆ. ಇದರಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಶಾಮೀಲಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಒಂದು ಪೋಸ್ಟ್ ಹಾಕಲು ಅವರು ಸುಮಾರು 90 ಲಕ್ಷ ರೂ. ಶುಲ್ಕ ಪಡೆಯುತ್ತಾರ. ಇದೇ ವೇಳೆ, ಅಮೆರಿಕಾದ ಮಾಡೆಲ್ ಮತ್ತು ಉದ್ಯಮಿ ಕೈಲಿ ಜೆನ್ನರ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ಮಾಡುವ ಮೂಲಕ ಕೈಲಿ 7.4 ಕೋಟಿ ರೂ.ಗಳಿಸುತ್ತಾರೆ.
ನೀವೂ ಕೂಡ ಇನ್ಸ್ಟಾಗ್ರಾಮ್ ಮೂಲಕ ಗಳಿಕೆ ಮಾಡಬಹುದು
-ಇನ್ಸ್ಟಾಗ್ರಾಮ್ ನಲ್ಲಿ ಗಳಿಕೆ ಮಾಡುವ ಮೊದಲ ಮಹತ್ವದ ಹೆಜ್ಜೆ ಎಂದರೆ ನಿಮ್ಮ ಅನುಯಾಯಿಗಳ ಸಂಖ್ಯೆ ಹೆಚ್ಚುಸುವುದು. ಆಗ ಮಾತ್ರ ದೊಡ್ಡ ದೊಡ್ಡ ಬ್ರಾಂಡ್ ಗಳು ನಿಮ್ಮೊಂದಿಗೆ ಪಾರ್ಟ್ನರ್ ಶಿಪ್ ಮಾಡಿಕೊಳ್ಳುತ್ತವೆ.
- ಒಂದು ಲಕ್ಷಕ್ಕಿಂತ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಪುಟಗಳಿಗೆ ಸುಲಭವಾಗಿ ಬ್ರಾಂಡ್ ಪಾರ್ಟ್ನರ್ ಶಿಪ್ ಸಿಗುತ್ತದೆ.
- ಇದರ ನಂತರ, ನೀವು ಯಾವ ಕ್ಷೇತ್ರದಲ್ಲಿ ಪೋಸ್ಟ್ ಮಾಡಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಿ. ಕ್ರೀಡೆ, ಸೌಂದರ್ಯ, ಫ್ಯಾಷನ್, ಸೃಜನಶೀಲತೆ, ಪ್ರೇರಣೆ, ಆಧ್ಯಾತ್ಮಿಕ ಅಥವಾ ಇನ್ನಾವುದೇ ವಿಷಯವನ್ನು ಆಯ್ಕೆ ಮಾಡಬಹುದು.
- ಆಯ್ದ ವಿಷಯದ ಮೇಲೆ ಮೂಲ ಪೋಸ್ಟ್ ಅನ್ನು ಇರಿಸಿ. ನೀವು ಎಲ್ಲಿಂದಲಾದರೂ ಯಾವುದೇ ವಿಷಯವನ್ನು ಆರಿಸಿದ್ದರೆ, ಅದರ ಮೂಲದ ಹೆಸರನ್ನು ಬರೆಯಿರಿ.
- ಸರಿಯಾದ ಹ್ಯಾಶ್‌ಟ್ಯಾಗ್ ಬಳಸಿ ಇದರಿಂದ ನಿಮ್ಮ ಪೋಸ್ಟ್ ಅನ್ನು ಹೆಚ್ಚು ಹೆಚ್ಚು ಜನರು ಪ್ರವೇಶಿಸಬಹುದು.
- ನಿಮ್ಮ ಪುಟದ ವಿಷಯಕ್ಕೆ ಅನುಗುಣವಾಗಿ ಬ್ರ್ಯಾಂಡ್ ಅನ್ನು ಆರಿಸಿ. ಈ ಬ್ರ್ಯಾಂಡ್ ನಿಮ್ಮ ಪೋಸ್ಟ್‌ಗಳಿಗೆ ಹಣ ಪಾವತಿಸುತ್ತವೆ. ನಿಮ್ಮ ಶುಲ್ಕಗಳು ಹೆಚ್ಚಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ.
ಇನ್ಸ್ಟಾಗ್ರಾಮ್ ಮೇಲೆ ನಿಮ್ಮ ಅನುಯಾಯಿಗಳ ಸಂಖ್ಯೆ ಹೀಗೆ ಹೆಚ್ಚಿಸಿ
ನಿಮ್ಮ ಪ್ರೊಫೈಲ್ ಹೇಗಿರಲಿದೆ ಎಂಬುದರ ಮೇಲೆ ಜನರು ನಿಮ್ಮನ್ನು ಅನುಸರಿಸುತ್ತಾರೆ. ಯಾವುದೇ ಓರ್ವ ಬಳಕೆದಾರ ಇತರೆ ಬಳಕೆದಾರರನ್ನು ಫಾಲೋ ಮಾಡಲು ಮೊದಲು ಅವರ ಪ್ರೊಫೈಲ್ ಗೆ ಭೇಟಿ ನೀಡುತ್ತಾರೆ. ಹೀಗಾಗಿ ಒಂದು ಉತ್ತಮ ಡಿಸ್ಪ್ಲೇ ಪಿಕ್ಚರ್ ತೂಗುಹಾಕಲು ಮರೆಯದಿರಿ. ಜೊತೆಗೆ ನಿಮ್ಮ ಬಯೋಡೇಟಾ ಉತ್ತಮವಾಗಿರಲಿ. ಒಳ್ಳೆಯ DP ಹಾಗೂ ಬಯೋಡೇಟಾ ಮೂಲಕ ನೀವು ನಿಮ್ಮ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸಬಹುದು.
ಯಾವುದೇ ಒಂದು ವಿಶೇಷ ಥೀಮ್ ಮೇಲೆ ಆಧಾರಿತವಾಗಿರಲಿ ನಿಮ್ಮ ಪೋಸ್ಟ್
ಇನ್ಸ್ಟಾಗ್ರಾಮ್ ಮೂಲಕ ಗಳಿಕೆ ಮಾಡಲು ಮಹತ್ವದ ವಿಷಯ ಎಂದರೆ, ನಿಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ ಮೇಲೆ ಯಾವುದೇ ಒಂದು ವಿಶೇಷ ಥೀಮ್ ಆಧಾರಿತ ಭಾವಚಿತ್ರವಿರಲಿ. ಅಂದರೆ, ನಿಮ್ಮನ್ನು ಅನುಯಾಯಿಗಳು ಏಕೆ ಅನುಸರಿಸುತ್ತಾರೆ ಎಂಬುದು ಅವರಿಗೆ ತಿಳಿಯಬೇಕು. ನಿತ್ಯ ನೀವು ಇನ್ಸ್ಟಾಗ್ರಾಮ್ ಮೇಲೆ ಪೋಸ್ಟ್ ಗಳನ್ನು ಹಂಚಿಕೊಳ್ಳುವ ಅಗತ್ಯತೆ ಇಲ್ಲ. ಯಾವುದೇ ಭಾವಚಿತ್ರ ಪೋಸ್ಟ್ ಮಾಡಿದ ಬಳಿಕ 24 ಗಂಟೆಗಳಲ್ಲಿ ಅತಿ ಹೆಚ್ಚು ಎಂಗೇಜ್ಮೆಂಟ್ ಇರುತ್ತದೆ. ಆದರೆ, ಇದಕ್ಕಾಗಿ ನೀವು ಯಾವುದೇ ವಿಶೇಷ ಥೀಮ್ ಇರುವ ಭಾವಚಿತ್ರ ಹಂಚಿಕೊಳ್ಳಬೇಕು. ಇದರಲ್ಲಿ ಇನ್ಸ್ಟಾ ಗ್ರಾಮ್ ಸ್ಟೋರೀಸ್ ಕೂಡ ಒಂದು ಉತ್ತಮ ವೈಶಿಷ್ಟ್ಯವಾಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ವೈಶಿಷ್ಟ್ಯ ಅಪಾರ ಜನಪ್ರೀಯತೆ ಗಳಿಸಿದೆ. ಇದರ ಮೂಲಕ ನೀವು ನಿಮ್ಮ ಥೀಮ್ ಕುರಿತಂತೆ ಒಂದು ಶಾರ್ಟ್ ವಿಡಿಯೋ ಕೂಡ ಜಾರಿಗೊಳಿಸಬಹುದು. ಆದರೆ, ಇದು 24ಗಂಟೆಗಳ ಬಳಿಕ ತನ್ನಷ್ಟಕ್ಕೆ ತಾನೇ ಡಿಲೀಟ್ ಆಗುತ್ತದೆ. ಇನ್ಸ್ಟಾಗ್ರಾಮ್ ನಲ್ಲಿ ನೀಡಲಾಗಿರುವ ಫಿಲ್ಟರ್ ಗಳನ್ನು ಬಳಸಿ ನೀವು ನಿಮ್ಮ ಪೋಸ್ಟ್ ಗಳನ್ನು ಎಡಿಟ್ ಕೂಡ ಮಾಡಿ ಹಂಚಿಕೊಳ್ಳಬಹುದು. ಆದರೆ, ಸ್ಟೋರೀಸ್ ವೈಶಿಷ್ಟ್ಯದ ಮೂಲಕ ನೀವು ಬಳಕೆದಾರವರೆಗೆ ತಲುಪಲು ಯಶಸ್ವಿಯಾದರೆ, ನಿಮ್ಮ ಪ್ರತಿ ಅವರಲ್ಲಿ ಒಂದು ವಿಶ್ವಾಸ ಮೂಡುತ್ತದೆ. ಏಕೆಂದರೆ ಈ ವೈಶಿಷ್ಟ್ಯದ ಮೂಲಕ ನೀವು ನಿಮ್ಮ ಅಸಲಿ ರೂಪದಲ್ಲಿ ಅವರನ್ನು ತಲುಪುತ್ತೀರಿ.
ಪ್ರಭಾವಶಾಲಿ ಹ್ಯಾಂಡಲ್ ತಯಾರಿಸುವುದು ಆವಶ್ಯಕ
ಇನ್ಸ್ಟಾಗ್ರಾಮ್ ಮೇಲೆ ಹಣ ಗಳಿಕೆ ಮಾಡಲು ನೀವು ನಿಮ್ಮ ಹ್ಯಾಂಡಲ್ ಅನ್ನು ಪ್ರಭಾವಶಾಲಿಗೊಳಿಸುವುದು ತುಂಬಾ ಅಗತ್ಯವಾಗಿದೆ. ಇದರಿಂದಲೇ ನೀವು ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳನ್ನು ಸೆಳೆಯುವಿರಿ. ಕಂಪನಿಗಳು ಇನ್ಸ್ಟಾಗ್ರಾಮ್ ಮೇಲಿರುವ ಯುವ ಗ್ರಾಹಕರನ್ನು ತಲುಪಲು ನಿಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತವೆ. ಇನ್ಸ್ಟಾಗ್ರಾಮ್ ಮೂಲಕ ಹಣ ಗಳಿಕೆ ಮಾಡುವ ಒಂದೇ ಒಂದು ಮಂತ್ರ ಎಂದರೆ ಹಣ ಪಡೆದು ನೀವು ಯಾವುದೇ ಒಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದರೆ, ಆ ಪೋಸ್ಟ್ ಸ್ವಾರಸ್ಯಕರವಾಗಿದ್ದರೆ ಮಾತ್ರ ನಿಮ್ಮ ಪಾಲಿಗೆ ಹಣಗಳಿಕೆ ಸುಲಭವಾಗುತ್ತದೆ.