ನವದೆಹಲಿ : ಕರೋನಾಸುರನ (Coronavirus) ವಿರುದ್ದ ಮಹಾ ಸಮರ ಸಾರಿರುವ ಭಾರತ, ಮತ್ತೊಂದು ಮಹಾ ಲಸಿಕಾ ಅಭಿಯಾನಕ್ಕೆ ಸಿದ್ದತೆ ನಡೆಸಿದೆ. ಮೇ 1 ರಿಂದ 18ರ ಮೇಲ್ವಟ್ಟು ಎಲ್ಲಾ ವಯೋಮಾನದವರಿಗೆ ಲಸಿಕೆ (Vaccination) ಹಾಕಲು ಸರ್ಕಾರ ಸಿದ್ದತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರ ಆದೇಶ ನೀಡಿದೆ.  ಮೇ 1 ರಿಂದ ಸುಮಾರು 60 ಕೋಟಿ ಭಾರತೀಯರು ಲಸಿಕೆ ಚುಚ್ಚಿಸಿಕೊಳ್ಳಲಿದ್ದಾರೆ. ಅಂದರೆ ಭಾರತದ ಜನಸಂಖ್ಯೆಯ ಸುಮಾರು ಅರ್ಧದಷ್ಟು ಮಂದಿ ಕರೋನಾ (COVID-19) ವಿರುದ್ಧದ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ. 


COMMERCIAL BREAK
SCROLL TO CONTINUE READING

ವಾಕ್ಸಿನ್ ಹಾಕಿಸಿಕೊಳ್ಳಬೇಕಾದರೆ ಏನು ಮಾಡಬೇಕು..?
ಕರೋನಾ (Coronavirus) ಹರಡುವ ರೀತಿ ನೋಡಿದರೆ ವ್ಯಾಕ್ಸಿನ್ ಹಾಕಿಸಿಕೊಳ್ಳದೇ ಹೋದರೆ ಉಳಿಗಾಲ ಇಲ್ಲ ಎನ್ನುವಂತೆಯೇ ತೋರುತ್ತದೆ. ಹಾಗಾಗಿ, ಲಸಿಕೆ ಹಾಕಲು ಹೆದರುವವರು ಕೂಡಾ ಲಸಿಕೆ ಹಾಕಿಸಿಕೊಳ್ಳಲು ಧಾವಿಸುತ್ತಿದ್ದಾರೆ. ಆದರೆ, ಸರ್ಕಾರ ಹಾಗೆಲ್ಲಾ ಲಸಿಕೆ (Vaccine) ಹಾಕುವುದಿಲ್ಲ. ಲಸಿಕೆ ಹಾಕಲು ಮೊದಲು ನೊಂದಣಿ ಮಾಡಿಕೊಳ್ಳುವುದು ಅತಿ ಮುಖ್ಯ. ನಿಮ್ಮ ಹೆಸರನ್ನು ಕೊವಿನ್ ಪೋರ್ಟಲಿನಲ್ಲಿ ನಲ್ಲಿ ನೋಂದಾಯಿಸಿದ ಬಳಿಕ ಮಾತ್ರ ನಿಮಗೆ ವ್ಯಾಕ್ಸಿನ್ ಸಿಗುತ್ತದೆ. ಹಾಗಾದರೆ, ನಿಮ್ಮ ಹೆಸರನ್ನು ಲಸಿಕೆಗಾಗಿ ನೋಂದಣಿ ಮಾಡುವುದು ಹೇಗೆ..? ಸ್ಟೆಪ್ ಬೈ ಸ್ಟೆಪ್ ಮಾಹಿತಿ ಇಲ್ಲಿದೆ. 


ಇದನ್ನೂ ಓದಿ : Oximeter Test : 'ಆಕ್ಸಿಮೀಟರ್' ಹೇಗೆ ಬಳಸುವುದರ ಕುರಿತು ಕೇಂದ್ರ ಸರ್ಕಾರದಿಂದ 8 ಗೈಡ್ ಲೈನ್ಸ್..! 


1. ವೆಬ್ ಸೈಟಿಗೆ ಹೋಗಿ ಕೊ-ವಿನ್ (co-Win) ಪೋರ್ಟಲ್ ಓಪನ್ ಮಾಡಿ. ಅದರ ಲಿಂಕ್ www.cowin.gov.in
2. ಪೊರ್ಟಲ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ದಾಖಲಿಸಿ. ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ (OTP)ಬರುತ್ತದೆ. ಅದರಿಂದ  ಕೋವಿನ್ ಪೋರ್ಟಲ್ ನಿಮ್ಮ ಮೊಬೈಲ್ ನಂಬರ್ ವೆರಿಫೈ ಮಾಡುತ್ತದೆ.
3. ಒಟಿಪಿ ಹಾಕಿ ವೆರಿಫಿಕೇಶನ್ ಸಕ್ಸಸ್ ಆದಾಕ್ಷಣ ಪೋರ್ಟಲ್ ಪೇಜ್ ಓಪನ್ ಆಗುತ್ತದೆ. ಅದರಲ್ಲಿ ನಿಮ್ಮ ಹೆಸರು, ವಿಳಾಸ, ವಯಸ್ಸು, ಲಿಂಗ,  ಇತ್ಯಾದಿ ಮಾಹಿತಿ ಎಂಟರ್ ಮಾಡಿ
4. ಕೊವಿನ್ ಪೋರ್ಟಲ್ ಐಡಿ ಪ್ರೂಫ್ ಕೇಳುತ್ತದೆ. ಆಧಾರ್, ಡ್ರೈವಿಂಗ್ ಲೈಸೆನ್ಸ್, ಓಟರ್ ಐಡಿ ಯಾವುದೇ ಐಡಿ ಪ್ರೂಫ್ ನೀವು ಸಲ್ಲಿಸಬಹುದು.
5. ಪೊರ್ಟಲಿನಲ್ಲಿ ವಿಳಾಸ, ಪಿನ್ ಕೋಡ್ ಎಲ್ಲಾ ದಾಖಲಾದ ಮೇಲೆ, ಕೋವಿಡ್ ಇಂಜೆಕ್ಷನ್ (COVID Vaccine) ಹಾಕುವ ನಿಮಗೆ ಹತ್ತಿರ ಇರುವ ಆಸ್ಪತ್ರೆಗಳ ವಿವರ ಅದರಲ್ಲಿ ಡಿಸ್ ಪ್ಲೇ ಆಗುತ್ತದೆ.  ನಿಮಗೆ ಬೇಕಾದ ಆಸ್ಪತ್ರೆಯನ್ನು ಆಯ್ಕೆ ಮಾಡಿ, ಲಸಿಕೆಯ ದಿನ ಮತ್ತು ಲಸಿಕೆ ಹಾಕುವ ಸಮಯ ಕ್ಲಿಕ್ ಮಾಡಿ ಓಕೆ ಮಾಡಿ ಬಿಡಿ. ಖಾಸಗೀ ಆಸ್ಪತ್ರೆಗಳಲ್ಲಿ ಲಸಿಕೆ ಹಾಕುವ ಆಯ್ಕೆ ಕೂಡಾ ನಿಮಗಿರುತ್ತದೆ. 
6. ಇಷ್ಟಕ್ಕೆ ನಿಮ್ಮ ಲಸಿಕೆ ನೊಂದಣಿ ಮುಗಿದು ಹೋಗಿರುತ್ತದೆ. ನೀವು ಸೂಚಿಸಿದ ದಿನಾಂಕ ಮತ್ತು ಸಮಯದಂದು ಆಸ್ಪತ್ರೆಗೆ (Hospital) ಹೋಗಿ. ಇಂಜೆಕ್ಷನ್ ಚುಚ್ಚಿಸಿಕೊಳ್ಳಿ.


ಇದನ್ನೂ ಓದಿ : Maharashtra: 18 ವರ್ಷ ಮೇಲ್ಪಟ್ಟವರಿಗೂ ಕೂಡ ಉಚಿತ ವ್ಯಾಕ್ಸಿನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.