ನವದೆಹಲಿ: ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿರುವ ಈರುಳ್ಳಿ ಬೆಲೆ ಗ್ರಾಹಕರ ಕಣ್ಣಲ್ಲಿ ನೀರು ಸುರಿಸುತ್ತಿದೆ. ಈ ಮಧ್ಯೆ ಹಣ ಉಳಿತಾಯ ಹೇಗೆ ಮಾಡಬೇಕು? ಎಂಬುದರ ಕುರಿತು ಟಿಪ್ಸ್ ಹುಡುಕಾಟದಲ್ಲಿರುವ ಮಹಿಳಾ ಟ್ವಿಟ್ಟರ್ ಬಳಕೆದಾರರಿಗೆ ಇತರ ಬಳಕೆದಾರರು ತಮಾಷೆಯ ಉತ್ತರಗಳನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

 "ಹಣ ಹೇಗೆ ಉಳಿತಾಯ ಮಾಡಬೇಕು? ಯಾರಾದರು ನನಗೆ ಹೇಳಿಕೊಡುವಿರಾ? ನಾನು ನಿಮಗೆ ಅದಕ್ಕಾಗಿ ಶುಲ್ಕ ನೀಡಲು ಸಿದ್ದ" ಎಂದು ಮಹಿಳಾ ಟ್ವಿಟ್ಟರ್ ಬಳಕೆದಾರರು ತನ್ನ ಟ್ವಿಟ್ಟರ್ ಖಾತೆಯಲ್ಲಿ ಕೇಳಿದ್ದಾರೆ.


ಇದಕ್ಕೆ ಉತ್ತರ ನೀಡಿರುವ ಓರ್ವ ಟ್ವಿಟ್ಟರ್ ಬಳಕೆದಾರ " ಎಲ್ಲಕ್ಕಿಂತ ಮೊದಲು ರಿಯಾಯಿತಿ ಪಡೆದು ಖರೀದಿ ಮಾಡುವುದನ್ನು ನಿಲ್ಲಿಸಿ" ಎಂದಿದ್ದಾರೆ.


ಎರಡನೇ ಬಳಕೆದಾರರು "ಈರುಳ್ಳಿ ಖರೀದಿಯಲ್ಲಿ ಹಣ ವಿನಿಯೋಗಿಸಿ" ಎಂದು ಸಲಹೆ ನೀಡಿದ್ದಾನೆ.


ಒಬ್ಬ ಬಳಕೆದಾರ "ನಿಮ್ಮ ಬಳಿ ಇರುವ ಎಲ್ಲ ಹಣವನ್ನು ನನ್ನ ಖಾತೆಗೆ ವರ್ಗಾಯಿಸಿ, ನಾನು ನಿಮ್ಮ ಹಣವನ್ನು ಸುರಕ್ಷಿತವಾಗಿ ಇಡುವೆ" ಎಂದಿದ್ದರೆ, ಮತ್ತೋರ್ವ ಟ್ವಿಟ್ಟರ್ ಬಳಕೆದಾರ "ನೀವು ನಿಮ್ಮ ಮನೆಯಿಂದ ಅತಿ ದೂರದಲ್ಲಿ ಇರುವ ಬ್ಯಾಂಕ್ ವೊಂದರಲ್ಲಿ ಖಾತೆ ತೆರೆಯಿರಿ. ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂ, ಚೆಕ್ ಬುಕ್ ಯಾವುದನ್ನು ಬಳಸಬೇಡಿ. ನಿಮ್ಮ ಮಾಸಿಕ ಸಂಬಳ ಬಂದ ದಿನ ಆ ಖಾತೆಯಲ್ಲಿ ಹಣವನ್ನು ಟ್ರಾನ್ಸ್ಫರ್ ಮಾಡಿ" ಎಂಬ ಉತ್ತರ ನೀಡಿದ್ದಾನೆ.