ನವದೆಹಲಿ : ಕರೋನ ವೈರಸ್ ಮೂರನೇ ಅಲೆಯ (Corona third wave) ಭೀತಿ ಆವರಿಸತೊಡಗಿದೆ. ಮೂರನೇ ಅಲೆಯ ಚರ್ಚೆಯ ನಡುವೆ ದೇಶಾದ್ಯಂತ ಸೋಂಕಿತರ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬರುತ್ತಿದೆ. ಕಳೆದ 6 ದಿನಗಳಿಂದ ಭಾರತದಲ್ಲಿ 40 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. 


COMMERCIAL BREAK
SCROLL TO CONTINUE READING

24 ಗಂಟೆಗಳಲ್ಲಿ 47 ಪ್ರಕರಣ : 
'ಕಳೆದ 24 ಗಂಟೆಗಳಲ್ಲಿ, ಸುಮಾರು 47 ಸಾವಿರ ಹೊಸ ಕೊರೊನಾ (Coronavirus) ಪ್ರಕರಣ ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ (Rajesh Bhushan) ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೇರಳದಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ. ಕಳೆದ ವಾರ ವರದಿಯಾದ 69% ಕೊರೊನಾ ವೈರಸ್ (COVID-19) ಪ್ರಕರಣಗಳು ಕೇರಳ ಒಂದೇ ರಾಜ್ಯದಲ್ಲಿ ವರದಿಯಾಗಿದೆ. ಇನ್ನೂ 42 ಜಿಲ್ಲೆಗಳಿವೆ, ಅಲ್ಲಿ ಪ್ರತಿದಿನ 100 ಕ್ಕೂ ಹೆಚ್ಚು ಕರೋನಾ ಪ್ರಕರಣಗಳು ವರದಿಯಾಗುತ್ತಿವೆ. 


ಇದನ್ನೂ ಓದಿ : ನಿಮ್ಮ ಬೈಕ್ ಕೂಡಾ ಕಡಿಮೆ ಮೈಲೇಜ್ ನೀಡುತ್ತಿದೆಯೇ ? ಹಾಗಿದ್ದರೆ ಈ ಟಿಪ್ಸ್ ಬಳಸಿ ನೋಡಿ


ಕರೋನಾದ ಹಾಟ್‌ಸ್ಪಾಟ್‌ಗಳಾಗಿವೆ ಈ 4 ರಾಜ್ಯಗಳು :
'ಕೇರಳದಲ್ಲಿ 1,00,000 ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಅದೇ ಮಹಾರಾಷ್ಟ್ರ (Maharastra), ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10,000 ದಿಂದ 1,00,000 ವರೆಗೆ ಇದೆ. ಇದು 9 ನೇ ವಾರವಾಗಿದ್ದು, ದೇಶದಲ್ಲಿ ವೀಕ್ಲಿ ಪೋಸಿಟಿವಿಟಿ ರೇಟ್  3%ಕ್ಕಿಂತ ಕಡಿಮೆಯಿದೆ. ದೇಶದ 38 ಜಿಲ್ಲೆಗಳಲ್ಲಿ, ವೀಕ್ಲಿ ಪೋಸಿಟಿವಿಟಿ ರೇಟ್  5-10 ಪ್ರತಿಶತದ ನಡುವೆ ಇದೆ. ಈ ಕಾರಣದಿಂದಾಗಿ, ಕರೋನಾ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲಾಗುತ್ತಿದೆ. 


ಹಬ್ಬಗಳಿಗೆ ಮುನ್ನ ಈ ಕೆಲಸ ಮಾಡಿ :
ಕರೋನ ಅಪಾಯ ಇನ್ನೂ ಮುಗಿದಿಲ್ಲ. ಲಸಿಕೆಯಿಂದ ರೋಗದ ತೀವ್ರತೆಯನ್ನು ತಡೆಯಬಹುದು. ಆದರೆ, ವ್ಯಾಕ್ಸಿನೇಷನ್ ನಂತರವೂ ಮಾಸ್ಕ್ (Mask) ಧರಿಸುವುದು ಅಗತ್ಯಆಗಿರುತ್ತದೆ. ಕೆಲ ಜನರು ಈ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಸಂಪೂರ್ಣ ವ್ಯಾಕ್ಸಿನೇಷನ್ (Vaccination) ನಂತರವೇ ಹಬ್ಬಗಳ ಪ್ರಯುಕ್ತ ಜನರು ಸೇರಬಹುದಾಗಿದೆ.  ಆಗ ಮಾತ್ರ ಕರೋನಾ ಸಾಂಕ್ರಾಮಿಕವನ್ನು ತಡೆಯುವುದು ಸಾದ್ಯವಾಗುತ್ತದೆ ಎಂದು,  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ನಿರ್ದೇಶಕ ಬಲರಾಮ್ ಭಾರ್ಗವ (Balram Bhargava) ತಿಳಿಸಿದ್ದಾರೆ. 


ಇದನ್ನೂ ಓದಿ : ಪ್ರಶಾಂತ್ ಕಿಶೋರ್ ಸೇರ್ಪಡೆಗೆ ಕಾಂಗ್ರೆಸ್ ವಲಯದಲ್ಲಿ ಹೇಳುತ್ತಿರುವುದೇನು?


ಗರ್ಭಿಣಿಯರು ಮೊದಲು ಲಸಿಕೆ ಹಾಕಿಸಿಕೊಳ್ಳಬೇಕು:
ಹಬ್ಬಗಳು ಬರುತ್ತಿವೆ, ಋತುಗಳು ಬದಲಾಗುತ್ತಿದೆ. ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ರೋಗವನ್ನು ತಡೆಗಟ್ಟಲು ಸದ್ಯಕ್ಕಿರುವ ಏಕೈಕ ಮಾರ್ಗ ಲಸಿಕೆಯಾಗಿದೆ ಎಂದು ನೀತಿ ಆಯೋಗದ ಸದಸ್ಯ ವಿನೋದ್ ಕುಮಾರ್ ಪಾಲ್ (V.K. Paul) ತಿಳಿಸಿದ್ದಾರೆ. ಮಾಸ್ಕ್ ಇಲ್ಲದೆ ಬದುಕುವ ಅವಕಾಶ ಇನ್ನೂ ಬಂದಿಲ್ಲ. ಕಳೆದ ವರ್ಷದಂತೆ ಹಬ್ಬಗಳನ್ನು ಆಚರಿಸಬೇಕು. ಗಣೇಶ ಚತುರ್ಥಿ, ನವರಾತ್ರಿ, ಈದ್, ಹೀಗೆ ಹಬ್ಬದ ವೇಳೆ ಗುಂಪುಗೂಡಬೇಕಾಗಿಲ್ಲ. ಎಲ್ಲಾ ಹಬ್ಬಗಳನ್ನು ಮನೆಯಲ್ಲಿಯೇ ಆಚರಿಸಬೇಕು.  ವೈರಸ್ ರೂಪಾಂತರಗೊಂಡರೆ ಸಮಸ್ಯೆ ಹೆಚ್ಚಾಗಬಹುದು. ಗರ್ಭಿಣಿಯರಿಗೆ ಸೋಂಕಿನ ಅಪಾಯ ಹೆಚ್ಚಾಗಿ ಇರುವುದರಿಂದ ಮೊದಲು ಅವರು ಕರೋನಾ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚಿಸಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.